Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಮಾಯಣವು ಬದುಕಿಗೆ ಆದರ್ಶ ಮೌಲ್ಯಗಳನ್ನು ಕಲಿಸುವ ಶ್ರೇಷ್ಠ ಗ್ರಂಥ: ಪಾಪೇಶ್ ನಾಯಕ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಅ. 26 : ನಗರದ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಸೋಮವಾರ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಲಾಯಿತು. ವಾಲ್ಮೀಕಿಯವರ ಭಾವಚಿತ್ರಕ್ಕೆ ಪಕ್ಷದ ಮುಖಂಡರು ಪುಷ್ಪ ನಮನವನ್ನು ಸಲ್ಲಿಸುವುದರ ಮೂಲಕ ವಾಲ್ಮೀಕಿಯವರಿಗೆ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಎಸ್.ಟಿ. ಮೋರ್ಚಾದ ಕಾರ್ಯಕಾರಿಣಿ ಮಾಜಿ ಸದಸ್ಯರಾದ ಪಾಪೇಶ್ ನಾಯಕ ರಾಮಾಯಣ ಒಂದು ಶ್ರೇಷ್ಠವಾದ ಗ್ರಂಥವಾಗಿದೆ, ಅದರಲ್ಲಿ 7 ಕಾಂಡಗಳಲ್ಲಿ ವಿಂಗಡಿಸಲಾಗಿದೆ. ಇದರಲ್ಲಿ 24 ಸಾವಿರ ಶೋಕ್ಲಗಳಿವೆ. 2008ರಲ್ಲಿ ರಾಜ್ಯದಲ್ಲಿ ಬಿ.ಎಸ್. ಯಡೆಯೂರಪ್ಪರವರ ಸರ್ಕಾರ ಇದ್ದಾಗ ಸರ್ಕಾರದವತಿಯಿಂದ ವಾಲ್ಮೀಕಿ ಜಯಂತಿ ಆಚರಣೆಗೆ ಸೂಚನೆಯನ್ನು ನೀಡಿ ರಜೆಯನ್ನು ಮಂಜೂರು ಮಾಡಲಾಯಿತು. ಈಗ ನಮ್ಮ ಸಮುದಾಯದ ಆದಿವಾಸಿ ಜನಾಂಗದ ಮಹಿಳೆಯನ್ನು ರಾಷ್ಟ್ರಪತಿಗಳನ್ನಾಗಿ ಮಾಡುವುದರ ಮೂಲಕ ನಮ್ಮ ಎಸ್.ಟಿ. ಸಮುದಾಯಕ್ಕೆ ಗೌರವನ್ನು ನೀಡಿದೆ ಎಂದರು.

ಮಹರ್ಷಿ ವಾಲ್ಮೀಕಿ ಜಯಂತಿಯು ಸಾಹಿತ್ಯ, ಧಾರ್ಮಿಕ ಚಿಂತನೆ ಮತ್ತು ಸಾಂಸ್ಕೃತಿಕ ಪರಂಪರೆಗಳಿಗೆ ಈ ಮಹರ್ಷಿಗಳು ನೀಡಿರುವ ಕೊಡುಗೆಯನ್ನು ಗೌರವಿಸುವ ದಿನವಾಗಿದೆ. ಈ ಆಚರಣೆಯು, ಅವರ ಜೀವನ ಮತ್ತು ರಾಮಾಯಣಕ್ಕೆ ಸಂಬಂಧಿಸಿದ ಬೋಧನೆಗಳ ಬಗ್ಗೆ ಚಿಂತಿಸಲು ಜನರಿಗೆ ಪ್ರೇರೇಪಣೆಯನ್ನು ನೀಡುವುದು. ಸಂಸ್ಕೃತ ಕಾವ್ಯಕ್ಕೆ ಮಹರ್ಷಿ ವಾಲ್ಮೀಕಿ ನೀಡಿರುವ ಕೊಡುಗೆಯು ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಹಾಗಾಗಿ ಈ ಹುಣ್ಣಿಮೆಯ ದಿನದಂದು ವಾಲ್ಮೀಕಿಯವರನ್ನು ಸ್ಮರಿಸಲಾಗುವುದು.ವಾಲ್ಮೀಕಿ ಜಯಂತಿಯು ಯುವ ಪೀಳಿಗೆಗೆ ಶಾಸ್ತ್ರೀಯ ಸಾಹಿತ್ಯ ಮತ್ತು ಕಥಾ ಪರಂಪರೆಯನ್ನು ಪರಿಚಯಿಸಲು ಒಂದು ಅವಕಾಶವನ್ನು ಒದಗಿಸುತ್ತದೆ. ರಾಮಾಯಣವು ಕರ್ತವ್ಯ, ನಿಷ್ಠೆ, ಸತ್ಯನಿಷ್ಠೆ, ನ್ಯಾಯ ಮತ್ತು ಕರುಣೆಯಂತಹ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ ಎಲ್ಲದಕ್ಕಿಂತಲೂ ಮುಖ್ಯವಾಗಿ ಆತ್ಮಾವಲೋಕನ ಮತ್ತು ಜವಾಬ್ದಾರಿಯುತ ನಿರ್ಧಾರಗಳು ಅರ್ಥಪೂರ್ಣ ಬದಲಾವಣೆಗೆ ದಾರಿ ಮಾಡಿಕೊಡಬಲ್ಲವುದಾಗಿದೆ ಎಂದರು.

ಬಿಜೆಪಿಯ ಎಸ್.ಟಿ.ಮೋರ್ಚಾದ ಜಿಲ್ಲಾಧ್ಯಕ್ಷ ರಾಜು ಮಾತನಾಡಿ, ಮಹರ್ಷಿ ವಾಲ್ಮೀಕಿಯವರ ಜನ್ಮದಿನವನ್ನು ವಾಲ್ಮೀಕಿ ಜಯಂತಿ ಎಂದು ಆಚರಿಸಲಾಗುತ್ತದೆ. ದಂತಕಥೆಗಳು ಮತ್ತು ನಂಬಿಕೆಗಳ ಪ್ರಕಾರ, ವಾಲ್ಮೀಕಿ ರಾಮನ ಮಹಾನ್ ಭಕ್ತರಾಗಿದ್ದರು ಮತ್ತು ರಾಮಾಯಣವನ್ನು ರಚಿಸಿದವರಾಗಿದ್ದರು. ವಾಲ್ಮೀಕಿ ಜಯಂತಿಯು ಪ್ರತೀ ವರ್ಷ ಶೀಗಿ ಹುಣ್ಣಿಮೆಯ ದಿನದಂದು ಬರುವುದರಿಂದ ಈ ಹುಣ್ಣಿಮಗೆ ವಿಶೇಷವಾದ ಮಹತ್ವವಿದೆ. ಮಹರ್ಷಿ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಜನರು ಅವರನ್ನು ದೇವರೆಂದು ಪರಿಗಣಿಸುತ್ತಾರೆ ಹಾಗೂ ವಾಲ್ಮೀಕಿ ಜಯಂತಿಯನ್ನು ಒಂದು ಹಬ್ಬದಂತೆ ಆಚರಿಸುತ್ತಾರೆ. ಮಹರ್ಷಿ ವಾಲ್ಮೀಕಿಯವರನ್ನು ಸಾಂಪ್ರದಾಯಿಕವಾಗಿ ‘ಆದಿಕವಿ’ಎಂದು ಕರೆಯಲಾಗುತ್ತದೆ. ಅಂದರೆ ಮೊದಲ ಕವಿ ಎಂಬುದಾಗಿದೆ. ಅವರ ಮೂಲ ಹೆಸರು ‘ರತ್ನಾಕರ’ ಎಂದಾಗಿತ್ತು. ಅವರು ಅರಣ್ಯದಲ್ಲಿ ದರೋಡೆಕೋರರಾಗಿ ಜೀವನ ನಡೆಸುತ್ತಿದ್ದರು. ಆದರೆ ನಂತರ ಅವರಲ್ಲಿ ಆಳವಾದ ಆಧ್ಯಾತ್ಮಿಕ ಪರಿವರ್ತನೆಯುಂಟಾಯಿತು. ನಾರದ ಮಹರ್ಷಿಗಳೊಂದಿಗಿನ ಭೇಟಿಯು ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿತು. ಇದು ಅವರನ್ನು ಆತ್ಮಾವಲೋಕನ, ಭಕ್ತಿ ಮತ್ತು ತಪಸ್ಸಿನ ಮಾರ್ಗದತ್ತ ಕೊಂಡೊಯ್ದಿತು.ರಾಮಾಯಣವನ್ನು ಮೊದಲ ಬಾರಿ ಸಂಸ್ಕೃತದಲ್ಲಿ ರಚಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿಗೆ ಸಲ್ಲುತ್ತದೆ. ಸಂಸ್ಕೃತ ಕಾವ್ಯ ರಚನೆಯ ಉಗಮದೊಂದಿಗೆ ‘ಕ್ರೌಂಚ ಪಕ್ಷಿ’ಯ ಘಟನೆಯು ಸಂಬಂಧ ಹೊಂದಿದೆ.ವಾಲ್ಮೀಕಿಯವರ ಸಾಹಿತ್ಯಿಕ ಪ್ರಭಾವವು ಕೇವಲ ರಾಮಾಯಣದೊಂದಿಗೆ ಮಾತ್ರವಲ್ಲ. ಅದು ಕಥೆ ಹೇಳುವಿಕೆಯೊಂದಿಗೆ, ಸಂಗೀತ, ನೃತ್ಯ ಮತ್ತು ರಂಗಭೂಮಿಯ ಕ್ಷೇತ್ರಗಳವರೆಗೂ ವಿಸ್ತರಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಎಸ್.ಟಿ.ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ನವೀನ್, ಬೋಸೆ ರಂಗಪ್ಪ, ಕಾರ್ಯದರ್ಶಿ ತಿಪ್ಪೇಸ್ವಾಮಿ, ದಕ್ಷಿಣ ಮೂರ್ತಿ, ಎಸ್.ಸಿ.ಜಿಲ್ಲಾಧ್ಯಕ್ಷ ಪರಶುರಾಮ್, ನಗರಸಭೇಯ ಮಾಜಿ ಸದಸ್ಯ ನಾಗರಾಜ್, ಗ್ರಾಮಾಂತರ ಮಹಿಳಾ ಮೋರ್ಚಾದ ಅಧ್ಯಕ್ಷೆ ಕವಿತಾ, ಪ್ರಧಾನ ಕಾರ್ಯದರ್ಶಿ ದೀಪ. ನಗರ ಪ್ರಧಾನ ಕಾರ್ಯದರ್ಶಿ ಬಸವೇಶ್, ಶ್ರೀಮತಿ ಲೀಲಾವತಿ, ಜಿಲ್ಲಾ ಉಪಾಧ್ಯಕ್ಷ ಲಿಂಗರಾಜು, ರಾಜು ಮಹಿಳಾ ಮೋರ್ಚಾದ ಕಾರ್ಯದರ್ಶಿ ಶ್ಯಾಮಲ ಶಿವಪ್ರಕಾಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now