Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಿಶೋರಿಯರಿಗೆ ಶಿಕ್ಷಣ ಬದುಕಿನ ದಾರಿ ದೀಪವಾಗಬೇಕು : ಬ್ರಹ್ಮದೇವ್ ಸಿಂಗ್

---Advertisement---

ಸುದ್ದಿಒನ್, ಚಿತ್ರದುರ್ಗ, ಜುಲೈ. 20 : ಕಿಶೋರಿಯರಿಗೆ, ಹೆಣ್ಣು ಮಕ್ಕಳಿಗೆ ಶಿಕ್ಷಣ ಬದುಕಿನ ದಾರಿ ದೀಪವಾಗಬೇಕು ಹಾಗೆಯೇ ನಮ್ಮನ್ನು ನಾವೇ ಮುನ್ನಡೆಸುವ ಆತ್ಮ ಶಕ್ತಿಯನ್ನು ಬೆಳೆಸಿಕೊಳ್ಳಬೇಕೆಂದು SBI ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರಾದ ಬ್ರಹ್ಮದೇವ್ ಸಿಂಗ್ ಹೇಳಿದರು.

ಧಮ್ಮ ಕೇಂದ್ರದಲ್ಲಿ ವಿಮುಕ್ತಿ ವಿದ್ಯಾ ಸಂಸ್ಥೆ, SBI ಬ್ಯಾಂಕ್ ಮತ್ತು ಧಮ್ಮ ಡ್ರಾಮಾ ತರಬೇತಿ ಕೇಂದ್ರದ ವತಿಯಿಂದ ದಿನಾಂಕ 19-7-2026ರಂದು ಭಾನುವಾರ
ಹಮ್ಮಿಕೊಳ್ಳಲಾಗಿದ್ದ ಹೆಣ್ಣು ಮಕ್ಕಳಿಗೆ ಕೆರಿಯರ್ ಗೃೆಡ್ ಮತ್ತು ಸಾಮರ್ಥ್ಯ ಬಲವರ್ಧನೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟನೆ ಮಾಡಿ ಮಾತನಾಡಿದರು.ಗುರುಗಳು ಪ್ರೇರಣೆಯ ದೀಪವಾಗುತ್ತಾರೆ,ಆದರೆ ಆ.ಬೆಳಕಿನಲ್ಲಿ ಮುನ್ನಡೆಯುವ ಸಾಮರ್ಥ್ಯ ವನ್ನು ಕಿಶೋರಿಯರು ಬೆಳೆಸಿಕೊಳ್ಳಬೇಕೆಂದು ಹೇಳಿದರು.

ಬಿಹಾರ ಮೂಲವಾದರು ಸಹ ಶಿಕ್ಷಣ ಮತ್ತು ಉದ್ಯೋಗವನ್ನು ಹರಿಸಿ ಕರ್ನಾಟಕದಲ್ಲಿ ಬದುಕು ನಡೆಸಬೇಕಾಗಿದೆ ಹಾಗಾಗಿ ಭವಿಷ್ಯ ಕಟ್ಟಿಕೊಳ್ಳಲು ಮತ್ತು ಕಲಿಕೆಗಾಗಿ ಎಲ್ಲಕಡೆಯು ಹೋಗಬೇಕಾಗುತ್ತದೆ.ಶಿಕ್ಷಣ ವನ್ನು ಪಡೆದುಕೊಳ್ಳುವ ಮೂಲಕ ಕಿಶೋರಿಯರು ಗಟ್ಟಿಯಾದ ಬದಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕೆಂದು ಬ್ರಹ್ಮದೇವ್ ಸಿಂಗ್ ಅವರು ನುಡಿದರು.

ಪ್ರಸ್ತಾವಿಕವಾಗಿ ಮಾತನಾಡಿದ ವಿಮುಕ್ತಿ ವಿದ್ಯಾ ಸಂಸ್ಥೆಯ ನೂತನ ನಿರ್ದೇಶಕರಾದ ಅರಣ್ಯ ಸಾಗರ್ ರವರು ವಿಮುಕ್ತಿ ಸಂಸ್ಥೆಗೆ ಸುಮಾರು 35 ವರ್ಷದ ಸುದೀರ್ಘ ಇತಿಹಾಸವಿದೆ.

ವಿಮುಕ್ತಿ ವಿದ್ಯಾ ಸಂಸ್ಥೆಯ ಮೂಲಕ ಸುಮಾರು 10 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಸ್ವ-ಸಹಾಯ ಮಹಿಳಾ ಸಂಘಗಳ ಮೂಲಕ ಸ್ವಾಭಿಮಾನದ ಬದಕು ನಡೆಸಲು ಪೂರಕ ವಾತಾವರಣ ನಿರ್ಮಾಣ ಮಾಡಿಕೊಡಲಾಗಿದೆ ಹಾಗೆಯೇ ಹೊಟೇಲ್ ,ಗ್ಯಾರೇಜ್,ಚಿಂದಿ ಆಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಸಾವಿರಾರು ಮಕ್ಕಳಿಗೆ ಶಿಕ್ಷಣದ ಮುಖ್ಯವಾಹಿನಿಗೆ ತಂದು ಶಿಕ್ಷಣ ನೀಡಿ ಸಮಾಜದಲ್ಲಿ ಸಮಾನತೆಯಿಂದ ಜೀವಿಸಲು ನೆರವು ನೀಡಲಾಗಿದೆ ಎಂದರು.

ವಿಮುಕ್ತಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣ ವಿಶ್ವಸಾಗರ್ ಅವರು ಮಾತನಾಡಿ 33 ಹಳ್ಳಿಗಳಿಂದ ಕಿಶೋರಿಯರಿಗೆ ಆಯ್ಕೆ ಮಾಡಿಕೊಂಡು ಅವರಿಗೆ ಆರೋಗ್ಯ,ಶಿಕ್ಷಣ,ಉನ್ನತ ಶಿಕ್ಷಣ ಮತ್ತು ಕಾನೂನು ಅರಿವು ನೆರವು ತಿಳುವಳಿಕೆ ನೀಡುವ ಮೂಲಕ ಅವರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆ ಅಧ್ಯಕ್ಷರಾದ ನರೇನಹಳ್ಳಿ ಅರುಣ್ ಕುಮಾರ್ ಅವರು ಮಾತನಾಡಿ ಹೆಚ್ಚು ಶಿಕ್ಷಣ ಮತ್ತು ಉದ್ಯೋಗ ತರಬೇತಿ ಪಡೆದುಕೊಳ್ಳಲು ಪಕ್ಕದ ರಾಜ್ಯಗಳಿಗಾದರು ಹೋಗಿ ತರಬೇತಿಗಳನ್ನು ಪಡೆದುಕೊಂಡು ಉದ್ಯೋಗಸ್ಥರಾಗ ಬೇಕು ಎಂದರು.
ನಿರ್ದೇಶಕರಾದ ಆರ್ ವಿಶ್ವ ಸಾಗರ್ ಅವರು ಮಾತನಾಡಿ ಧಮ್ಮ ಕೇಂದ್ರ ಜಾಗವನ್ನು ನೆರವಿನೊಂದಿಗೆ ಅಭಿವೃದ್ಧಿಪಡಿಸಲಾಗಿದ್ದು,ಇನ್ನೂ ಹಲವು ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ನೆರವಿನ ಅಗತ್ಯವಿದೆ ಎಂದರು.

ಸಭೆಯಲ್ಲಿ ನಕ್ಷತ್ರ ಪಾರ್ಲಿಮೆಂಟ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು ಶ್ರೀಮತಿ ನಾಗರತ್ನಮ್ಮ ನಿರೂಪಿಸಿದರು ಬೀಬಿಜಾನ್ ನಾಗಪ್ಪ ಮುಂತಾದವರು ಹಾಜರಿದ್ದರು

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now