Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಇಂಟರ್ ವ್ಯೂ ಫೇಲ್ ಆದ್ರೂ ಚಿಂತೆ ಬೇಡ : ಯುಪಿಎಸ್ಸಿ ಅಭ್ಯರ್ಥಿಗಳು ನೋಡಲೇಬೇಕಾದ ಸ್ಟೋರಿ ಇದು

---Advertisement---

ಬೆಂಗಳೂರು: ಯುಪಿಎಸ್ಸಿ ಪರೀಕ್ಷೆ ಮುಗಿಸಿ, ಕೆಲಸಕ್ಕಾಗಿ ಕಾಯುತ್ತಿರುವವರಿಗೆ ಈಗೊಂದು ಗುಡ್ ನ್ಯೂಸ್ ಇದೆ. ಈ ಮೊದಲೆಲ್ಲಾ ಸಂದರ್ಶನ ಕ್ಲಿಯರ್ ಮಾಡಿದವರ ಹೆಸರು ಮೆರಿಟ್ ಲೀಸ್ಟ್ ನಲ್ಲಿ ಇರ್ತಾ ಇತ್ತು. ಆ ಬಳಿಕ ಉದ್ಯೋಗ ಸಿಗುವ ನಿರೀಕ್ಷೆ ಇತ್ತು. ಆದರೆ ಈ ಬಾರಿ ಹಾಗಲ್ಲ. ನಿಮ್ಮ ಹೆಸರು ಮೆರಿಟ್ ಲೀಸ್ಟ್ ನಲ್ಲಿ ಇಲ್ಲದೆ ಇದ್ದರು ಚಿಂತೆ ಮಾಡಬೇಕಿಲ್ಲ. ಯಾಕಂದ್ರೆ ಉದ್ಯೋಗ ಸಿಗೋದು ಪಕ್ಕಾ ಇದೆ. ಇಂಟರ್ ವ್ಯೂ ತನಕ ಯುಪಿಎಸ್ಸಿ ಅಭ್ಯರ್ಥಿಗಳು ಬಂದಿದ್ದಾರೆ ಅಂದ್ರೆ ಸರ್ಕಾರಿ ಅಥವಾ ಖಾಸಗಿ ಕೆಲಸ ಸಿಗಲಿದೆ.

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಪ್ರತಿಭಾ ಸೇತು ( Professional Resource and Talent Integration -Bridge for Hiring Aspirants) ಎಂಬ ಪೋರ್ಟಲ್ ಶುರು ಮಾಡಿದೆ. ಇದರಲ್ಲಿ ಸಂದರ್ಶನದಲ್ಲಿ ಉತ್ತೀರ್ಣರಾಗಲು ಸಾಧ್ಯವಿಲ್ಲದ ಅಭ್ಯರ್ಥಿಗಳ ಡೇಟಾವನ್ನು ಸಂಗ್ರಹಿಸಲಾಗುತ್ತದೆ. ಇವರನ್ನು ಸರ್ಕಾರದ ಯಾವುದಾದರೂ ಒಂದು ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಥವಾ ಒಳ್ಳೆಯ ಖಾಸಗಿ ಕಂಪನಿಗಳಲ್ಲಿ ಉದ್ಯೋಗಕ್ಕೆ ಸೆಲೆಕ್ಟ್ ಮಾಡಲಾಗುತ್ತದೆಯಂತೆ. ಸುಮಾರು 6 ವರ್ಚಗಳ ಹಿಂದೆ ಅಂದ್ರೆ 2018ರ ಆಗಸ್ಟ್ 20ರಂದಿ ಪ್ರಾರಂಭಿಸಲಾಯಿತು. ಈಗ ಮತ್ತರ ಹೊಸದಾಗಿ ಶುರು ಮಾಡಲಾಗಿದೆ.

ಇದರ‌ ಕುರಿತು ಹೆಚ್ಚಿನ ಮಾಹಿತಿಗಾಗಿ ಯುಪಿಎಸ್ಸಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದಾಗಿದೆ. ಈ ಪೋರ್ಟಲ್ ಮೂಲಕ ಯುಪಿಎಸ್ಸಿ ಅಭ್ಯರ್ಥಿಗಳು ಐಎಎಸ್, ಐಪಿಎಸ್ ಆಗದಿದ್ತು ಯಾವುದಾದರೂ ಸರ್ಕಾರಿ ಅಥವಾ ಖಾಸಗಿ ಕೆಲಸವನ್ನು ಪಡೆಯಬಹುದು. ಹೀಗಾಗಿ ಕಷ್ಟಪಟ್ಟು ಯುಪಿಎಸ್ಸಿ ಪಾಸ್ ಮಾಡಿರುವವರಿಗೆ ಈ ಪೋರ್ಟಲ್ ಬಹಳಷ್ಟು ಪ್ರಯೋಜನಕಾರಿಯಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...