ಜೈಲರ್ ರಿಲೀಸ್ ಆಗಿ ನಾಲ್ಕು ದಿನ ಕಳೆದಿದೆ. ಎಲ್ಲಿ ನೋಡಿದ್ರು ಅದರದ್ದೇ ಸುದ್ದಿ. ಯಾರೇ ನೋಡಿದ್ರು ಜೈಲರ್ ಬಗೆಯದ್ದೇ ಮಾತು. ರಿಲೀಸ್ ಮುನ್ನ ಹಾಡಿನ ಮೂಲಕ ಹೈಪ್ ಕ್ರಿಯೇಟ್ ಮಾಡಿದ್ದ ಸಿನಿಮಾ ರಿಲೀಸ್ ಆದ್ಮೇಲಂತೂ ಎಲ್ಲರ ಬಾಯಲ್ಲೂ ಸಿನಿಮಾದ್ದೇ ಮಾತು. ಹೀಗಿರುವಾಗ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡದೇ ಇರುತ್ತದೆಯೇ..?
ತಮಿಳುನಾಡು ಮಾತ್ರವಲ್ಲದೇ, ಕರ್ನಾಟಕ, ತೆಲುಗು, ಕೇರಳ ಹಾಗೂ ಹಿಂದಿ ಬೆಲ್ಟ್ ನಲ್ಲೂ ತನ್ನದೇ ಆದ ಹವಾ ಕ್ರಿಯೇಟ್ ಮಾಡಿರುವಂತ ಸಿನಿಮಾ. ಸದ್ಯ ಮೊದಲ ವಾರಾಂತ್ಯಕ್ಕೆ ಜೈಲರ್ ಗಳಿಕೆ 31.2 ಕೋಟಿ ಗಳಿಕೆ ಮಾಡಿದೆ. ತಮಿಳುನಾಡಿನದ್ದೇ ಸಿಂಹಪಾಲಾಗಿದ್ರೆ, ಕರ್ನಾಟಕ ಎರಡನೇ ಸ್ಥಾನ ಪಡೆದಿದೆ.
ಮೊದಲ ದಿನ 91.10 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಮಾಡಿದ್ದ ಜೈಲರ್ ಎರಡನೇ ದಿನ 52.80 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು ಮತ್ತು ಮೂರನೇ ದಿನ 80.15 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿತ್ತು. ಹೀಗೆ ಮೊದಲ 3 ದಿನಗಳಲ್ಲಿ 224.15 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದ್ದ ಜೈಲರ್ ನಾಲ್ಕನೇ ದಿನ ಭಾನುವಾರ ತನ್ನ ಕಲೆಕ್ಷನ್ ನಾಗಾಲೋಟವನ್ನು ಮುಂದುವರೆಸಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











