ಚಿತ್ರದುರ್ಗ. ಜು.25: ಇದೇ ವರ್ಷದ ಡಿಸೆಂಬರ್ ತಿಂಗಳ ಒಳಗಾಗಿ ಇ-ಪೌತಿ ಖಾತೆ ಪೂರ್ಣಗೊಳಿಸಲು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿದರು.
ಬೆಂಗಳೂರು ವಿಭಾಗ ಮಟ್ಟದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಬೆಂಗಳೂರು ವಿಭಾಗದಲ್ಲಿ ಇ-ಪೌತಿ ಯೋಜನೆಯಡಿ ಒಟ್ಟು 1463968 ಅರ್ಜಿಗಳ ಗುರಿಯನ್ನು ಹೊಂದಲಾಗಿದ್ದು, ಈ ಪೈಕಿ ಗ್ರಾಮ ಆಡಳಿತ ಅಧಿಕಾರಿಗಳ ಹಂತದಲ್ಲಿ 304889 ಅರ್ಜಿಗಳನ್ನು ಪೂರ್ಣಗೊಳಿಸಲಾಗಿದೆ. 852651 ಅರ್ಜಿಗಳು ವಿಎಒ ಹಂತದಲ್ಲಿ ಪರಿಶೀಲನೆಗೆ ಬಾಕಿ ಇವೆ. ವಿಭಾಗದ ಜಿಲ್ಲೆಗಳ ಪೈಕಿ ತುಮಕೂರು ಜಿಲ್ಲೆಯು 499545 ಅರ್ಜಿಗಳ ಗುರಿಯನ್ನು ಹೊಂದಿದ್ದು, 92234 ಪೌತಿ ಖಾತೆ ಅರ್ಜಿಗಳನ್ನು ಪೂರ್ಣಗೊಳಿಸಲಾಗಿದೆ. 304602 ಅರ್ಜಿಗಳನ್ನು ಬಾಕಿಯಿವೆ.
ವಿಭಾಗದಾದ್ಯಂತ ಇ-ಪೌತಿ ಮೂಲಕ ಪ್ರಕ್ರಿಯೆಗೊಳಿಸಲು ಸೂಕ್ತವಾದ ಒಟ್ಟು ಅರ್ಜಿಗಳ ಸಂಖ್ಯೆ 393774 ಆಗಿದೆ. 458877 ಪ್ರಕ್ರಿಯೆಗೊಳಿಸಲು ಅನರ್ಹವಾಗಿವೆ.
*ಭೂಸುರಕ್ಷಾ – ಭೂದಾಖಲೆಗಳ ಡಿಜಿಟಲೀಕರಣ ಪ್ರಗತಿ ವಿವರ*
ಭೂಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳ ಡಿಜಿಟಲೀಕರಣ ಕಾಮಗಾರಿಯಲ್ಲಿ ವಿಭಾಗದಾದ್ಯಂತ ಒಟ್ಟು 243916048 ಪುಟಗಳನ್ನು ಸ್ಕ್ಯಾನಿಂಗ್ಗಾಗಿ ಗುರುತಿಸಲಾಗಿದ್ದು, ಈ ಪೈಕಿ 159044964 ಪುಟಗಳನ್ನು ಯಶಸ್ವಿಯಾಗಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಲಾಗಿದೆ. 84871084 ಪುಟಗಳು ಸ್ಕ್ಯಾನ್ ಬಾಕಿ ಇವೆ. ವಿಭಾಗದ ಒಟ್ಟಾರೆ ಶೇಕಡಾವಾರು ಬಾಕಿ ಪ್ರಮಾಣವು ಶೇ. 24.05 ಆಗಿದೆ. ಈ ಯೋಜನೆಯಡಿ ಸಾರ್ವಜನಿಕರಿಗೆ 1562003 ಡಿಜಿಟಲ್ ದಾಖಲೆಗಳನ್ನು ವಿತರಿಸಲಾಗಿದ್ದು, ಒಟ್ಟು ರೂ. 1.72 ಕೋಟಿ ಆದಾಯ ಸಂಗ್ರಹವಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









