ವಿಜಯಪುರ: ರಾಮ ಮಂದಿರ ನಿರ್ಮಾಣ ಆಗಿದ್ದಕ್ಕೆ ಕಾಂಗ್ರೆಸ್ ನವರು ಹೊಟ್ಟೆ ಕಿಚ್ಚಿನಿಂದ ವರ್ತಿಸುತ್ತಾ ಇದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ವಿರುದ್ಧ ಗರಂ ಆಗಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ, ರಾಮ ಅನ್ನುವುದು ಒಂದು ಕಾಲ್ಪನಿಕ ಅಂತ ಹೇಳಿದ್ದರು. ಪ್ರಧಾನ ಮಂತ್ರಿಗಳು ಯಾಕೆ ಉದ್ಘಾಟನೆಗೆ ಹೋಗುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದರು. ಇದ್ಯಾವುದು ಜನ ಸ್ವೀಕಾರ ಮಾಡಿಲ್ಲ ಎಂದಾಗ, ಈಗ 31 ವರ್ಷದ ಹಳೆ ಕೇಸನ್ನು ತೆಗೆದು ಜನರನ್ನು ಅರೆಸ್ಟ್ ಮಾಡುವಂತಹ ಅತ್ಯಂತ ನೀಚ ಕೃತ್ಯಕ್ಕೆ ಕಾಂಗ್ರೆಸ್ ಪಾರ್ಟಿ ಕೈ ಹಾಕಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಒಬ್ಬರು ಪೂಜಾರಿ ಅಂತ ಇದಾರೆ. ಇನ್ನೊಬ್ಬರು ಕುಲಕರ್ಣಿ ಎಂಬುವವರನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಅವರಿಗೆ 72 ವರ್ಷ. ನಾನು ಅಲ್ಲಿನ ಇನ್ಸ್‌ಪೆಕ್ಟರ್ ಹಾಗೂ ಗ್ರಾಮಾಂತರ ಪೊಲೀಸರು, ಸರ್ಕಾರದ ಆದೇಶವನ್ನು ನೋಡಿಕೊಂಡು, ಅಲ್ಲಿನ ಇನ್ಸ್‌ಪೆಕ್ಟರ್ ಅಂತು ಅತ್ಯಂತ ದ್ವೇಷ ಭಾವನೆಯಿಂದ ವರ್ತಿಸಿದ್ದಾರೆ. ಹೀಗಾಗಿ ರಾಮಮಂದಿರ ಆಗಿದ್ದಕ್ಕೆ ಕಾಂಗ್ರೆಸ್ ಅತ್ಯಂತ ಹೊಟ್ಟೆ ಕಿಚ್ಚಿನಿಂದ ವರ್ತಿಸುತ್ತಾ ಇದೆ. ಇದು ಸರಿಯಲ್ಲ. ಕಾನೂನು ಹೋರಾಟವಂತು ಮಾಡಿಯೇ ಮಾಡುತ್ತೀವಿ. ಸಾಮಾಜಿಕವಾಗಿಯೂ ಹೋರಾಡುತ್ತೀವಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















