ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಸೆ. 15 : ನಗರದ ವಿದ್ಯಾನಗರದ ವಿದ್ಯಾ ಗಣಪತಿ ಸಭಾಂಗಣದಲ್ಲಿ 18 ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ವಿ ಬಾಯ್ಸ್ ತಂಡದವರಿಂದ ದಿನಾಂಕ 15.9.2026 ರ ಇಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಭಾರತೀಯ ರೆಡ್ ಕ್ರಾಸ್ ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಸಮೃದ್ಧಿ ಡೆವಲಪರ್ಸ್ ಹಾಗೂ ಸಮೃದ್ಧಿ ಟ್ರೇಡರ್ಸ್ ಮಾಲೀಕರಾದ ಅನಿಲ್ಕುಮಾರ್ ಚಿಕ್ಕಂದವಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು.
ಅಭಿಷೇಕ್ ಚಿಕ್ಕಂದವಾಡಿ ಗಣೇಶೋತ್ಸವದ ಹಿನ್ನೆಲೆಯಲ್ಲಿ ರಕ್ತದಾನದಂತಹ ಸೇವಾ ಕಾರ್ಯ ಮಾಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇದರಿಂದ ಅನೇಕ ಜನರ ಜೀವ ಉಳಿಸುವ, ಆರೋಗ್ಯ ಸುಧಾರಿಸುವ ಕಾರ್ಯವಾಗಲಿದೆ. ಇಂತಹ ಉತ್ತಮ ಕಾರ್ಯ ಮಾಡಲು ಮುಂದೆ ಬಂದಿರುವ ವಿ ಬಾಯ್ಸ್ ತಂಡದ ಯುವಕರನ್ನು ಅಭಿನಂದಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಚೇರ್ಮನ್ ಗಾಯತ್ರಿ ಶಿವರಾಮ್ ಮುಂದಾಳತ್ವದಲ್ಲಿ ನಡೆದ ಈ ರಕ್ತದಾನ ಶಿಬಿರದಲ್ಲಿ ಕಾರ್ಯದರ್ಶಿ ಮಜರುಲ್ಲ, ವೈಸ್ ಚೇರ್ಮನ್ ಅರುಣ್ ಕುಮಾರ್, ನಿರ್ದೇಶಕ ಶಿವರಾಮ್, ಜ್ಞಾನಮೂರ್ತಿ, ಮಲ್ಲಿಕಾರ್ಜನ್ ಭಾಗವಹಿಸಿದ್ದರು. ಗಣೇಶೋತ್ಸವದ ಅಂಗವಾಗಿ ನಡೆದ ಈ ರಕ್ತದಾನ ಶಿಬಿರದಲ್ಲಿ ಹುಸೇನ್ ಸಾಬ್ ಮೊದಲು ರಕ್ತದಾನ ಮಾಡಿ ಭಾವೈಕ್ಯತೆ ಮೆರೆದಿದ್ದಾರೆ
ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಯಪ್ರಕಾಶ್ ರೆಡ್ಡಿ, ಉಪಾಧ್ಯಕ್ಷ ಅನಂತರಾಜ್, ಕಾರ್ಯದರ್ಶಿ ಸಿದ್ದೇಶ್, ಸಹಕಾರ್ಯದರ್ಶಿ ವೀಣಾ, ಖಜಾಂಚಿ ವೇಣುಗೋಪಾಲ್ ಹಾಗೂ ನಿರ್ದೇಶಕರು ಉಪಸ್ಥಿತರಿದ್ದು, ರಕ್ತದಾನಿಗಳಿಗೆ ರೆಡ್ ಕ್ರಾಸ್ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ವಿ ಬಾಯ್ಸ್ ತಂಡದ ಜೊತೆಯಲ್ಲಿ ಅನೇಕ ನಿರ್ದೇಶಕರ ಮಕ್ಕಳು ಇಂದು ರಕ್ತದಾನ ಮಾಡಿದ್ದು ವಿಶೇಷ ವಾಗಿತ್ತು. ಬಸವೇಶ್ವರ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ಪವನ್ ಕುಮಾರ್ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಒಟ್ಟು 35 ಯುನಿಟ್ ರಕ್ತ ಸಂಗ್ರಹವಾಯ್ತು.












