Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿನ್ನಯ್ಯನ ವಿರುದ್ಧ ದೂರು : ಸೌಜನ್ಯ ತಾಯಿಗೆ ಎಸ್ಐಟಿ ಭೇಟಿಗೆ ಬಿಡದ ಪೊಲೀಸರು..!

---Advertisement---

ಮಂಗಳೂರು: ಧರ್ಮಸ್ಥಳಕ್ಕೆ ಬಂದು ನೂರಾರು ಶವಗಳನ್ನ ಹೂತಾಕಿದ್ದೀನಿ ಅಂತ ಹೇಳಿದ ಚಿನ್ನಯ್ಯ ಈಗ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಬೆಳವಣಿಗೆಯ‌ ನಡುವೆಯೇ ಇನ್ನೊಂದು ಬೆಳವಣಿಗೆ ನಡೆದಿದೆ. ಅದೇನಂದ್ರೆ ಸೌಜನ್ಯ ತಾಯಿ ಕುಸುಮಾವತಿ, ಎಸ್ಐಟಿ ತಂಡವನ್ನ ಭೇಟಿಯಾಗಲು ಹೋಗಿದ್ದಾರೆ. ಆದರೆ ಆ ಭೇಟಿ ಅಷ್ಟು ಸುಲಭವಾಗಿ‌ ಸಿಕ್ಕಿಲ್ಲ.

ಹೌದು, ಇಂದು ಸೌಜನ್ಯ ತಾಯಿ ಕುಸುಮಾವತಿ ಬೆಳ್ತಂಗಡಿ ಠಾಣೆಗೆ ಆಗಮಿಸಿದ್ದಾರೆ. ಬುರುಡೆ ದೂರುದಾರ ಚಿನ್ನಯ್ಯನ ವಿರುದ್ಧ ದೂರು ನೀಡಲು ಬಂದಿದ್ದರಂತೆ. ಈ ಸಂಬಂಧ ಎಸ್ಐಟಿ ಭೇಟಿಯಾಗಲು ಯತ್ನಿಸಿದ್ದು, ಪೊಲೀಸರು ಆ ಭೇಟಿಯನ್ನ ನಿರಾಕರಣೆ ಮಾಡಿದ್ದಾರೆ. ಬೆಳ್ತಂಗಡಿ ಠಾಣೆಗೆ ಬಂದಂತ ಕುಸುಮಾವತಿಯನ್ನ, ಪೊಲೀಸರು ನಿಲ್ಲಿಸಿದ್ದಾರೆ. ಕಾರಣ ಕೇಳಿದ್ದಕ್ಕೆ ಎಸ್ಐಟಿ ಅಧಿಕಾರಿಗಳನ್ನ ಭೇಟಿ ಮಾಡಬೇಕು ಎಂದಿದ್ದಾರೆ. ಆಗ ಪೊಲೀಸರು ಸುಲಭವಾಗಿ ಅನುಮತಿ ಕೊಟ್ಟಿಲ್ಲ. ಅನುಮತಿ ಪತ್ರವನ್ನ ಕೇಳಿದ್ದಾರೆ. ಅನುಮತಿ ಪತ್ರ ಇಲ್ಲದೆ ಇರುವ ಕಾರಣ ಭೇಟಿಗೆ ಬಿಟ್ಟಿಲ್ಲ.

ನಾನು ಯಾವುದೇ ಅನುಮತಿ ಪತ್ರವನ್ನು ತಂದಿಲ್ಲ ಎಂದು ಕುಸುಮಾವತಿ ಹೇಳಿದ್ದಾರೆ. ಅನುಮತಿ ಪತ್ರ ಇಲ್ಲದೆ ಹೋದರೆ ಭೇಟಿಗೆ ಅವಕಾಶ ನೀಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಬಳಿಕ ಅಲ್ಲಿಂದ ಅವರನ್ನು ವಾಪಾಸ್ ಕಳುಹಿಸಿದ್ದಾರೆ. ಕುಸುಮಾವತಿ ಎಸ್ಐಟಿ ಅವರನ್ನು ಭೇಟಿಯಾಗದೆ ಹಾಗೇ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಾಸ್ ಆಗಿದ್ದಾರೆ. ಪೊಲೀಸರು ಅವಕಾಶ ಕೊಡದೆ ಇರುವ ಕಾರಣ, ಮಾಧ್ಯಮದವರ ಪ್ರಶ್ನೆಗಳಿಗೂ ಪ್ರತಿಕ್ರಿಯೆ ನೀಡಿಲ್ಲ.

ಕುಸುಮಾವತಿ ಯಾವ ಕಾರಣಕ್ಕೆ ಎಸ್ಐಟಿ ಅಧಿಕಾರಿಗಳನ್ನ ಭೇಟಿಯಾಗಬೇಕೆಂದು ಬಂದಿದ್ದರು‌ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ. ಆದರೆ ಚಿನ್ನಯ್ಯನ ವಿರುದ್ಧ ದೂರು ನೀಡಲು ಬಂದಿದ್ದರು ಎನ್ನಲಾಗಿದೆ. ಯೂಟ್ಯೂಬ್ ನಲ್ಲಿ ಸೌಜನ್ಯ ಹತ್ಯೆ ಕೇಸ್ ಗೆ ಸಂಬಂಧಿಸಿದಂತೆ ಕೆಲ ಸ್ಪೋಟಕ ವಿಚಾರಗಳನ್ನು ತಿಳಿದು ಚಿನ್ನಯ್ಯನನ್ನು ಸಾಕ್ಷಿಯಾಗಿ ಪರಿಗಣಿಸುವಂತೆಲ ದೂರು‌ ನೀಡಲು ಬಂದಿದ್ದರು ಎನ್ನಲಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment