Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

BREAKING NEWS : ಇಂಡೋನೇಷ್ಯಾದಲ್ಲಿ ಫೆರ್ರಿ ದೋಣಿಯಲ್ಲಿ ಭೀಕರ ಅಗ್ನಿ ದುರಂತ: ಐವರು ಸಾವು, 41 ಮಂದಿ ನಾಪತ್ತೆ

---Advertisement---

ಜಕಾರ್ತಾ.ಆಗಸ್ಟ್.2: ಇಂಡೋನೇಷ್ಯಾದಲ್ಲಿ 271 ಜನರನ್ನು ಹೊತ್ತೊಯ್ಯುತ್ತಿದ್ದ ಫೆರ್ರಿ ದೋಣಿಯೊಂದರಲ್ಲಿ ಸಾಗರ ಮಧ್ಯದಲ್ಲೇ ಭೀಕರ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದು,41 ಜನರು ನಾಪತ್ತೆಯಾಗಿದ್ದಾರೆ ಎಂದು ಶೋಧ ಮತ್ತು ರಕ್ಷಣಾ ಅಧಿಕಾರಿಗಳನ್ನು ಉಲ್ಲೇಖಿಸಿ ‘ಎಎಫ್‌ಪಿ’ (AFP) ಸುದ್ಧಿ ಸಂಸ್ಥೆ ವರದಿ ಮಾಡಿದೆ.

ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ‘ಕೆಎಂಪಿ ಮುತಿಯಾರಾ ಸಂತೋಷ 2’ (KMP Mutiara Sentosa 2) ಎಂಬ ಹೆಸರಿನ ಈ ಫೆರ್ರಿ ದೋಣಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು. ದೋಣಿಯಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಬೃಹತ್ ಮಟ್ಟದ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ.

ಈ ಫೆರ್ರಿಯು ಇಂಡೋನೇಷ್ಯಾದ ಎರಡನೇ ಅತಿದೊಡ್ಡ ನಗರವಾದ ಈಸ್ಟ್ ಜಾವಾದ ‘ಸುರಬಾಯಾ’ದಿಂದ ಸೌತ್ ಸುಲಾವೇಸಿಯ ‘ಮಕಾಸ್ಸರ್’ಗೆ ಪ್ರಯಾಣಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ದೇಶದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ ‘ಬಸರ್ನಾಸ್’ (Basarnas) ತಿಳಿಸಿದೆ.

ಸುರಬಾಯಾ ಶೋಧ ಮತ್ತು ರಕ್ಷಣಾ ಕಚೇರಿಯ ಮುಖ್ಯಸ್ಥ ನಾನಾಂಗ್ ಸಿಗಿತ್ ಮಾತನಾಡಿ, “ಘಟನಾ ಸ್ಥಳದ ಹತ್ತಿರದಲ್ಲಿದ್ದ ‘ಟಿಬಿ ಹಾಸ್ನೂರ್ 26’ ಮತ್ತು ‘ಬ್ರಿಟಿಶ್ ಮೆಂಟರ್’ ಸೇರಿದಂತೆ ಹಲವು ನೌಕೆಗಳು ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿವೆ. ಪ್ರಾಣಭಯದಿಂದ ನೀರಿಗೆ ಜಿಗಿದ ಪ್ರಯಾಣಿಕರನ್ನು ರಕ್ಷಿಸಲಾಗುತ್ತಿದ್ದು, ಪ್ರಸ್ತುತ ನಾಲ್ಕು ನೌಕೆಗಳು ಫೆರ್ರಿಯ ಬಳಿ ಕಾರ್ಯಾಚರಣೆ ನಡೆಸುತ್ತಿವೆ” ಎಂದು ಜಕಾರ್ತಾ ಗ್ಲೋಬಲ್‌ಗೆ ಮಾಹಿತಿ ನೀಡಿದ್ದಾರೆ.

ಇದಲ್ಲದೆ, ರಕ್ಷಣಾ ನೌಕೆ ‘SAR 249 ಪರ್ಮಾದಿ’ ಘಟನಾ ಸ್ಥಳಕ್ಕೆ ಧಾವಿಸುತ್ತಿದ್ದು, ತಲುಪಲು ಸುಮಾರು ಆರು ಗಂಟೆಗಳ ಕಾಲಾವಕಾಶ ಬೇಕಾಗಬಹುದು ಎಂದು ಅವರು ತಿಳಿಸಿದ್ದಾರೆ. ನಾಪತ್ತೆಯಾದವರಿಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ.

Join WhatsApp

Join Now

Join Telegram

Join Now