Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ತಂದೆಯನ್ನೇ ಕೊಲೆ ಮಾಡಿದ ಮಗನ ಬಂಧನ

---Advertisement---

ಸುದ್ದಿಒನ್, ಚಿತ್ರದುರ್ಗ, ಜುಲೈ. 20 : ತಾಲ್ಲೂಕಿನ ಭರಮಸಾಗರ ಹೋಬಳಿ ವ್ಯಾಪ್ತಿಯ ಕಲ್ಕುಂಟೆ ಗ್ರಾಮದಲ್ಲಿ ಜುಲೈ 19 ರಂದು ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆಯನ್ನೇ ಕೊಲೆ ಮಾಡಿದ್ದ ಮಗನನ್ನು ಭರಮಸಾಗರ ಪೊಲೀಸರು ಬಂಧಿಸಿದ್ದಾರೆ.

ಪ್ರಸನ್ನ ಕುಮಾರ(33 ವರ್ಷ) ಬಂಧಿತ ಆರೋಪಿಯಾಗಿದ್ದು ಜುಲೈ 19 ರಂದು ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ತಂದೆಯನ್ನೆ ಕೊಂದಿದ್ದ.

ಘಟನೆ ಹಿನ್ನೆಲೆ :
ಚಿತ್ರದುರ್ಗ ತಾಲ್ಲೂಕು ಕಲ್ಕುಂಟೆ ಗ್ರಾಮದ ಚಂದ್ರಪ್ಪ, ಈತನ ಮಗ ಪ್ರಸನ್ನ ಕುಮಾರ್ ಹಾಗೂ ಚಂದ್ರಪ್ಪನ ತಮ್ಮ ಕರಿಬಸಪ್ಪ ಇವರ ನಡುವೆ ಜಮೀನಿನ ವಿಚಾರದಲ್ಲಿ ಚಂದ್ರಪ್ಪ ರವರ ಮಗನಾದ ಪ್ರಸನ್ನ ಕುಮಾರನಿಗೆ ಭಾಗ ಕೊಡುವ ವಿಚಾರಕ್ಕೆ ವೈಶಮ್ಯವಿದ್ದು ಈ ಹಿನ್ನೆಲೆಯಲ್ಲಿ ಕರಿಬಸಪ್ಪನು ತನ್ನ ಅಣ್ಣನ ಮಗ ಪ್ರಸನ್ನ ಕುಮಾರನಿಗೆ ಕೊಲೆ ಮಾಡುವಂತೆ ಕುಮ್ಮಕ್ಕು ನೀಡಿರುತ್ತಾನೆ.‌ ಇದೇ ಜುಲೈ 19 ರಂದು ಮದ್ಯಾಹ್ನ 1.10 ಗಂಟೆ ಸುಮಾರಿಗೆ ಚಂದ್ರಪ್ಪನವರಿಗೆ ಸೇರಿದ ಎನ್. ಬಳಿಗಟ್ಟೆ ಜಮೀನಿನಲ್ಲಿ ಚಂದ್ರಪ್ಪನು ಎಮ್ಮೆಗಳನ್ನು ಮೇಯಿಸುತ್ತಿದ್ದಾಗ ಆತನ ಮಗ ಪ್ರಸನ್ನ ಕುಮಾರನು ತನ್ನ ಚಿಕ್ಕಪ್ಪ ಕರಿಬಸಪ್ಪನ ಕುಮ್ಮಕ್ಕಿನಿಂದ ಚಂದ್ರಪ್ಪನ ಬಳಿ ಹೋಗಿ ಜಮೀನಿನ ಭಾಗದ ವಿಚಾರವಾಗಿ ಜಗಳ ತೆಗೆದು ಚಂದ್ರಪ್ಪನಿಗೆ ಪ್ರಸನ್ನಕುಮಾರನು ಕೋಲಿನಿಂದ ತಲೆಗೆ ಹಾಗೂ ಮೈ ಕೈಗೆ ತೀವ್ರವಾಗಿ ಹಲ್ಲೆ ಮಾಡಿ ಕೊಲೆ ಮಾಡಿರುತ್ತಾನೆ. ಕೊಲೆ ಮಾಡಿದ ನಂತರ ಆರೋಪಿತನು ಸ್ವತಃ ಭರಮಸಾಗರ ಪೊಲೀಸ್ ಠಾಣೆಗೆ ಬಂದು ತನ್ನ ತಂದೆಗೆ ಹೊಡೆದಿರುವ ಬಗ್ಗೆ ತಿಳಿಸಿರುತ್ತಾನೆ. ಕೊಲೆಯಾದ ಚಂದ್ರಪ್ಪನ ಹೆಂಡತಿ ಸರೋಜಮ್ಮ ರವರು ನೀಡಿದ ದೂರಿನಂತೆ ಭರಮಸಾಗರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

ವಿಶೇಷ ತನಿಖಾ ತಂಡ ರಚನೆ :
ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಭಂಡಾರು, ಐಪಿಎಸ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಯಿತು. ಶಿವಕುಮಾರ್. ಕೆ.ಎಸ್.ಪಿ.ಎಸ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು. ಚಿತ್ರದುರ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಅರುಣ್ ನಾಗೇಗೌಡ, ಪೊಲೀಸ್ ಉಪಾಧೀಕ್ಷಕರು. ಚಿತ್ರದುರ್ಗ ಉಪವಿಭಾಗ ರವರ ನೇತೃತ್ವದಲ್ಲಿ ಭರಮಸಾಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಸಾದ್. ಪಿ. ಹಾಗೂ ಸಿಬ್ಬಂದಿ ವರ್ಗದವರು ತನಿಖೆ ಕೈಗೊಂಡು ಆರೋಪಿತನಾದ ಪ್ರಸನ್ನ ಕುಮಾರನನ್ನು ವಿಚಾರಣೆಗೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.

ಪೊಲೀಸರ ಕಾರ್ಯಾಚರಣೆಗೆ ಶ್ಲಾಘನೆ :
ಪ್ರಕರಣವನ್ನು ಅತಿ ಕಡಿಮೆ ಅವಧಿಯಲ್ಲಿ ಭೇದಿಸಿದ ವಿಶೇಷ ತನಿಖಾ ತಂಡದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now