ಸುದ್ದಿಒನ್, ಚಿತ್ರದುರ್ಗ,ಸೆಪ್ಟೆಂಬರ್. 01 : ನಗರದ ಜೆಸಿಆರ್ ಬಡಾವಣೆಯ ಗಣಪತಿ ದೇವಸ್ಥಾನದ ಬಳಿ ಇರುವ ಶ್ರೀಮತಿ ಗಿರಿಜಮ್ಮನವರು ( 85 ವರ್ಷ) ಭಾನುವಾರ ರಾತ್ರಿ ನಿಧನರಾದರು.
ಮೃತರು ನಗರದ ಖ್ಯಾತ ವಕೀಲರಾದ ದಿವಂಗತ ಇ. ಆರ್. ಕೊಟ್ರಪ್ಪನವರ ಧರ್ಮಪತ್ನಿ. ಇವರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಮಧ್ಯಾನ್ಹ ನಂತರ ಜೋಗಿಮಟ್ಟಿ ರಸ್ತೆಯ ಲಿಂಗಾಯಿತ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆಗೆ (7795511477) ಸಂಪರ್ಕಿಸಲು ಕೋರಿದೆ.









