ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 09 : ನಗರ ಪೊಲೀಸ್ ಠಾಣೆ ಸಮೀಪವಿರುವ ಕಣಿವೆ ಮಾರಮ್ಮ ದೇವಸ್ಥಾನವನ್ನು ಮುಜರಾಯಿಗೆ ಸೇರಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಇದುವರೆವಿಗೂ ದೇವಸ್ಥಾನಕ್ಕೆ ಯಾವುದೇ ಸಮಿತಿ ಇಲ್ಲದಿರುವುದರಿಂದ ಭಕ್ತರಿಂದ ಬರುವ ಆದಾಯಕ್ಕೆ ಯಾವುದೇ ಲೆಕ್ಕವಿಲ್ಲದಿರುವುದರಿಂದ ಹಣ ದುರುಪಯೋಗವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದ್ದು, ದೇವಸ್ಥಾನವನ್ನು ಮುಜರಾಯಿಗೆ ಸೇರಿಸುವುದು ಸೂಕ್ತವೆಂದು ಜಿ.ಎನ್.ಬಸವರಾಜ್ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.
ಎಂ.ಎಸ್.ಮಂಜುನಾಥ್, ಟಿ.ಹೆಚ್.ಆನಂದ್‍ಕುಮಾರ್, ಬಿ.ಶಾಂತರಾಜ್, ಲಲಿತಮ್ಮ, ಶಿವಮ್ಮ, ಪಾರ್ವತಮ್ಮ, ಬಿ.ತಿಪ್ಪೇಸ್ವಾಮಿ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.










