ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 09 : ಚಂದ್ರವಳ್ಳಿ ವಾಯುವಿಹಾರಿಗಳ ಬಳಗದಿಂದ ಹುಲಿಗುಂದಿ ಸಿದ್ದೇಶ್ವರಸ್ವಾಮಿಯ 25 ನೇ ವರ್ಷದ ಶ್ರಾವಣ ಮಾಸದ ವಿಶೇಷ ಪೂಜೆ ಚಂದ್ರವಳ್ಳಿ ವಾಯುವಿಹಾರಿಗಳ ಯೋಗ ಮತ್ತು ಧ್ಯಾನ ದಾಸೋಹ ಮಂದಿರದ ಉದ್ಘಾಟನೆ ನೆರವೇರಿತು.
ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರಸ್ವಾಮಿ ಹಾಗೂ ಡಾ.ಬಸವಪ್ರಭು ಸ್ವಾಮೀಜಿಯವರಿಗೆ ಚಂದ್ರವಳ್ಳಿ ವಾಯುವಿಹಾರಿಗಳ ಬಳಗದವರು ಹಲವು ಬೇಡಿಕೆಗಳುಳ್ಳ ಮನವಿಯನ್ನು ಸಲ್ಲಿಸಿದರು.
ಮಾಜಿ ಶಾಸಕ ಎಸ್.ಕೆ.ಬಸವರಾಜನ್, ವಾಯುವಿಹಾರಿಗಳ ಬಳಗದ ಗೌರವಾಧ್ಯಕ್ಷ ಫೈಲ್ವಾನ್ ತಿಪ್ಪೇಸ್ವಾಮಿ, ಅಧ್ಯಕ್ಷ ಜಯಣ್ಣ ಎನ್, ಉಪಾಧ್ಯಕ್ಷ ಬಸವರಾಜಪ್ಪ
ಕಾರ್ಯದರ್ಶಿ ಕುಳೇನೂರು ಗೌಡ್ರು, ಖಜಾಂಚಿ ಡಾ.ಚನ್ನಕೇಶವ ಸಿ, ಸಹ ಕಾರ್ಯದರ್ಶಿ ಜಯರಾಮ್ ಕೆ, ಕಾನೂನು ಸಲಹೆಗಾರ ಬಿ.ಅಶೋಕ್‍ಕುಮಾರ್, ಸಂಘಟನಾ ಕಾರ್ಯದರ್ಶಿ ಹನುಮಂತಪ್ಪ, ನಿರ್ದೇಶಕರುಗಳಾದ ಚಿದಾನಂದಪ್ಪ ಕೆ.ಎಸ್, ಹೊರಕೆರೆ ರಂಗಯ್ಯ ಕೆ.ಬಿ, ಚಂದ್ರಶೇಖರ್ ಬಿ.ಎಸ್, ಡಾ.ತೋಯಿಜಾಕ್ಷಿಬಾಯಿ, ಜಯದೇವಯ್ಯ ಪಿ.ಎಂ, ಚನ್ನಬಸಪ್ಪ ಕೆ.ಜಿ, ರಾಜೇಂದ್ರಸಿಂಗ್, ಎಸ್.ಎನ್.ರವಿಕುಮಾರ್, ಸುನೀಲ್‍ಕುಮಾರ್ ಪಿ, ರಾಜಶೇಖರಪ್ಪ ಟಿ.ಕೆ. ಎ.ಪಿ.ಎಂ.ಸಿ.ಹಮಾಲರ ಸಂಘದ ಅಧ್ಯಕ್ಷ ಬಿ.ಬಸವರಾಜ್ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಸಹಸ್ರಾರು ಭಕ್ತರು ಹುಲಿಗುಂದಿ ಸಿದ್ದೇಶ್ವರಸ್ವಾಮಿಯ ದರ್ಶನ ಪಡೆದು ಶ್ರದ್ದಾ ಭಕ್ತಿಯನ್ನು ಸಮರ್ಪಿಸಿದರು.










