Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ: ಛಲವಾದಿ ಮಠದ ಶ್ರೀಗಳಿಗೆ ಇನೋವಾ ಕಾರ್ ಕೊಡುಗೆಯಾಗಿ ನೀಡಿದ ಭಕ್ತ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಜು. 22 : ಛಲವಾದಿ ಗುರುಪೀಠಕ್ಕೆ ಭಕ್ತರೊಬ್ಬರು ತಮ್ಮ ಇನೋವಾ ಕಾರನ್ನು ಗುರುಗಳಿಗೆ ದಾನವಾಗಿ ನೀಡಿದ್ದಾರೆ.
ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ವೃತ್ತದಲ್ಲಿರುವ ಒನಕೆ ಓಬವ್ವ ವೃತ್ತದ ಪ್ರತಿಮೆಯ ಬಳಿ ಇಂದು ನಡೆದ ಸರಳ ಸಮಾರಂಭದಲ್ಲಿ ಶ್ರೀಮಠದ ಭಕ್ತರಾದ ಅರವಿಂದ ಈಶ್ವರ ಪಾಟೀಲ್ ರವರ ಬೆಂಗಳೂರಿನಲ್ಲಿ ಐಟಿ ಕಂಪನಿ ಹಾಗೂ ಬೆಳಗಾವಿಯಲ್ಲಿ ಸಣ್ಣದಾದ ಕೈಗಾರಿಕೆಯನ್ನು ನಡೆಸುತ್ತಿದ್ದು ನಮ್ಮ ಸಮುದಾಯದ ಗುರುಗಳು ಸಮಾಜವನ್ನು ಸಂಘಟಿಸಲು ಬಸ್‍ಗಳಲ್ಲಿ ಪ್ರಯಾಣ ಮಾಡುವುದು ಬೇಡ ಎಂದು ಛಲವಾದಿ ಗುರುಪೀಠಕ್ಕೆ ಕಾರನ್ನು ಕೂಡುಗೆಯಾಗಿ ನೀಡಿದ್ದಾರೆ.

 

ನಮ್ಮ ಸಮುದಾಯದವರಿಗೆ ಸೇರಿದಂತೆ ಬೇರೆ ಸಮುದಾಯದವರಿಗೂ ಸಹಾ ಉದ್ಯೋಗವನ್ನು ನೀಡುವ ಹಂಬಲವನ್ನು ಹೊಂದಿದ್ದು ಈಗ ಇರುವ ಐಟಿ ಕಂಪನಿಯ 132 ಉದ್ಯೋಗಿಗಳನ್ನು 1000 ಜನಕ್ಕೆ ಏರಿಸಬೇಕೆಂಬ ಆಭಿಲಾಷೆಯನ್ನು ಹೊಂದಲಾಗಿದೆ, ನಮ್ಮವರು ಸರ್ಕಾರಿ ಉದ್ಯೋಗವನ್ನು ಕಾಯದೇ ಸ್ವಯಂ ಆಗಿ ಕೆಲಸವನ್ನು ಮಾಡುತ್ತಾ ಬೇರೆಯವರಿಗೆ ಉದ್ಯೋಗವನ್ನು ನೀಡುವಂತರಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಛಲವಾದಿ ಗುರುಪೀಠ ಶ್ರೀ ಬಸವನಾಗ್ತಿ ದೇವ ಶ್ರೀಗಳು, ನ್ಯಾಯಾವಾದಿ ಪ್ರತಾಪ್ ಜ್ಯೋಗಿ, ನವೀನ್, ಪ್ರಸನ್ನ, ಪ್ರಸಾದ್, ಗೋವಿಂದರಾಜು, ವಿಜಯ ಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now