ಸುದ್ದಿಒನ್, ಹೊಳಲ್ಕೆರೆ, ನವಂಬರ್. 03 : ತಾಲ್ಲೂಕಿನ ಗುಂಜಿಗನೂರು ಗ್ರಾಮದ ಹೊನ್ನಪ್ಪರ ದಿನೇಶ್ ರವರ ಮನೆಯ ಮುಂಬಾಗದ ರಸ್ತೆಯಲ್ಲಿ ಇಸ್ಪೇಟ್ ಜೂಜಾಟ ನಿರತರ ಮೇಲೆ ಚಿಕ್ಕಜಾಜೂರು ಠಾಣೆಯ ಪಿ.ಎಸ್.ಐ ನೇತ್ರಾವತಿ ನೇತೃತ್ವದಲ್ಲಿ ಕಾನೂನುಬಾಹಿರವಾದ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ 9 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಜೂಜಾಟ ನಿರತರಿಂದ 16410/- ರೂ.ವಶಕ್ಕೆ ತೆಗೆದುಕೊಳ್ಳಲಾಗಿದೆ.
ಭಾನುವಾರ ಮಾಹಿತಿ ಮೇರೆಗೆ ಈ ದಾಳಿ ನಡೆದಿದೆ. ಈ ಪ್ರಕರಣದಲ್ಲಿ,
ಹೊಳಲ್ಕೆರೆ ತಾಲ್ಲೂಕು ಗುಂಜಿಗನೂರು ಗ್ರಾಮದ
1] ವೆಂಕಟೇಶ
2]ತಿಪ್ಪೇಸ್ವಾಮಿ
3]ಶಶಿಕುಮಾರ
4] ಸಂತೋಷಕುಮಾರ
5] ರವಿಕುಮಾರ
6]ತಿಮೇಶ
7]ನಾಗರಾಜ
8]ಮಂಜುನಾಥ
9] ನಾಗರಾಜ ಎಂಬ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ದೂರು ದಾಖಲಿಸಲಾಗಿದೆ.
ಚಿಕ್ಕಜಾಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ಈ
ಕಾರ್ಯಚರಣೆಯಲ್ಲಿ ಪಾಲ್ಗೊಂಡ ಠಾಣೆಯ ಪಿ.ಎಸ್.ಐ ನೇತ್ರಾವತಿ, ಸಿಬ್ಬಂದಿಯರಾದ ಮಲ್ಲೇಶ್, ತಿಪ್ಪೇಶ್, ಜಹೀರ್, ಮಂಜುನಾಥ್, ಮನೋಹರ್ ರವರನ್ನು ಪೊಲೀಸ್ ಅಧೀಕ್ಷಕರವರು ಶ್ಲಾಘನೆಯನ್ನು ವ್ಯಕ್ತಪಡಿಸಿರುತ್ತಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











