Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಳ್ಳಕೆರೆ : ಜುಲೈ 09 ಮತ್ತು 10 ರಂದು12 ನೇ ವರ್ಷದ ಶ್ರೀಸಾಯಿ ಗುರು ಪೂರ್ಣಿಮೆ ಜಾತ್ರಾ ಮಹೋತ್ಸವ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಜುಲೈ. 02 : ನಗರದ ಹೊರವಲಯ ಶ್ರೀಸಾಯಿ ಮಂದಿರದಲ್ಲಿ ಜು.09 ಮತ್ತು 10ರಂದು ಎರಡು ದಿನಗಳ ಕಾಲ ನಡೆಯಲಿರುವ 12ನೇ ವರ್ಷದ ಶ್ರೀಸಾಯಿ ಗುರು ಪೂರ್ಣಿಮೆ ಜಾತ್ರಾ ಮಹೋತ್ಸವಕ್ಕೆ ಸುಮಾರು 40 ಸಾವಿರ ಭಕ್ತರು ಸೇರುವ ನಿರೀಕ್ಷೆ ಇದೆ ಎಂದು ಶ್ರೀವೆಂಕಟಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಸಿ. ಸಂಜೀವಮೂರ್ತಿ ಹೇಳಿದರು.

ನಗರದ ಪಾವಗಡ ರಸ್ತೆ ಸಾಯಿ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
2013ರಲ್ಲಿ ಬಯಲು ಸೀಮೆಯಲ್ಲಿ ಸಾಯಿ ಭಕ್ತರಿಗೆ ಶ್ರೀಸಾಯಿ ದರ್ಶನಕ್ಕಾಗಿ ಸಾಯಿ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿಕೊಳ್ಳಲಾಯಿತು. ಬಳಿಕ ಎರಡೇ ವರ್ಷದಲ್ಲಿ ನಿರೀಕ್ಷಿತ ಸಾಯಿ ಮಂದಿರ ಸ್ಥಾಪನೆ ಮಾಡಲಾಗಿದೆ. ಆಗತಾನೆ ಚಳ್ಳಕೆರೆ ಕ್ಷೇತ್ರದ ಶಾಸಕರಾದ ರಘುಮೂರ್ತಿ ಅವರು ವೃತ್ತಿಯಲ್ಲಿ ಇಂಜಿನಿಯರಿಂಗ್ ಸೇವಾ ಅನುಭವ ಇದ್ದ ಕಾರಣ, ಸಾಯಿ ಮಂದಿರವನ್ನು ಸ್ವತಃ ಅವರ ಯೋಜನೆಯಂತೆ ಮೇಲ್ಛಾವಣಿ ಸೇರಿದಂತೆ ಇತರೆ ವಿನ್ಯಾಸ ಮತ್ತು ದೇವಸ್ಥಾನ ಸಂಪರ್ಕಿಸುವ ರಸ್ತೆ ಡಾಂಬರೀಕ್ಕೆ ಸಹಕಾರ ಮಾಡಿದ್ದಾರೆ. ಶ್ರೀಸಾಯಿ ತನಗೆ ಇಷ್ಟ ಎನಿಸುವ ಭಕ್ತರಿಂದ ಸೇವೆ ಮಾಡಿಸಿಕೊಳ್ಳುತ್ತಾನೆ ಎನ್ನುವ ಪ್ರತೀತಿಯಂತೆ ಭಕ್ತರ ನೆರವಿನಿಂದಲೇ ಬೃಹತ್ ಧಾರ್ಮಿಕ ಕ್ಷೇತ್ರವಾಗಿ ದಿನೇದಿನೆ ಮಂದಿರ ಭಕ್ತರ ತಾಣವಾಗುತ್ತಿದೆ ಎಂದರು.

ಪ್ರಸಕ್ತ ವರ್ಷದ ಶ್ರೀಸಾಯಿ ಗುರು ಪೂರ್ಣಿಮೆ ಅಂಗವಾಗಿ ತಾಲೂಕಿನ ಪ್ರತಿ ಹಳ್ಳಿಗಳಿಗೂ ರಥ ಯಾತ್ರೆ ಮೂಲಕ ಭಿಕ್ಷಾಟನೆ ಆರಂಭಿಸಿದ್ದೇವೆ. ಶ್ರೀಸಾಯಿ ಬಾಬಾಗೆ ಭಕ್ತರಿಂದ ಭಿಕ್ಷೆ ರೂಪದಲ್ಲಿ ಸೇವೆ ಅಪೇಕ್ಷೆ ಇದೆ. ಅದೇರೀತಿ ಗುರು ಪೂರ್ಣಿಮ ಮಹೋತ್ಸವಕ್ಕೆ ಬೇಕಾಗುವಷ್ಟು ಧವಸ-ಧಾನ್ಯ ಮತ್ತು ಪೂಜಾ ಸಾಮಗ್ರಿಗಳು ಸಂಗ್ರಹವಾಗುತ್ತವೆ. ಎರಡು ದಿನದ ಮಹೋತ್ಸವದಲ್ಲಿ ಸಾಮೂಹಿಕ ಸತ್ಯ ನಾರಾಯಣ ಪೂಜೆ ಮತ್ತು ವಿಶೇಷ ಪೂಜಾ ಆರಾಧನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.

ವೆಂಕಟ ಸಾಯಿ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಬಿಸಿ ವೆಂಕಟೇಶ್ ಮೂರ್ತಿ ಮಾತನಾಡಿ,, ಸಾಯಿ ಗುರು ಪೂರ್ಣಿಮಾ ಜಾತ್ರಾ ಮಹೋತ್ಸವ ಗುರುವಾರ ಬಂದಿರುವುದರಿಂದ ಹೆಚ್ಚಿನ ಭಕ್ತರು ಸೇರುವ ನಿರೀಕ್ಷೆ ಇದೆ. ಭಕ್ತರಿಗೆ ಪ್ರಸಾದ ವ್ಯವಸ್ಥೆ ಹಾಗೂ ದೇವರ ದರ್ಶನ ವ್ಯವಸ್ಥೆ ಹೆಚ್ಚುಕಟ್ಟಾಗಿ ನಿರ್ವಹಿಸುತ್ತೇವೆ ಎಂದರು.

ವೆಂಕಟಸಾಯಿ ಸೇವ ಟ್ರಸ್ಟ್ ನ ನಿರ್ದೇಶಕರಾದ ಕಾರ್ತಿಕ್ ಎಸ್ ಮೂರ್ತಿ ಮಾತನಾಡಿ ಸಾಯಿ ಗುರು ಪೂರ್ಣಿಮಾ ಜಾತ್ರೆ ಮಹೋತ್ಸವ ಹಾಗೂ ಸತ್ಯನಾರಾಯಣ ಸ್ವಾಮಿ ಪೂಜೆ ಕಾರ್ಯಕ್ರಮ ಇರುವುದರಿಂದ ಭಕ್ತರ ಸಂಖ್ಯೆ ಹೆಚ್ಚಾಗಲಿದ್ದು ಹೆಚ್ಚು ಭದ್ರತೆ ಖಾಸಗಿ ಭದ್ರತಾ ಸಿಬ್ಬಂದಿ ಮಾಡಿಕೊಂಡಿದ್ದು ಇನ್ನೂ ಹೆಚ್ಚಿನ ಭದ್ರತೆಗಾಗಿ ಪೊಲೀಸ್ ಇಲಾಖೆ ಸಹಕಾರ ನೀಡಲಿದೆ ಎಂದರು. ಬಿ.ಸಿ.ಸತೀಶ್ ಕುಮಾರ್, ನಾಗೇಶ್, ಜಗದೀಶ್. ಸೇರಿದಂತೆ ಪ್ರಶ್ನ ಪದಾಧಿಕಾರಿಗಳು ಇದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment