Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಚಿತಾ ರಾಮ್ ವಿರುದ್ಧ ಮತ್ತೊಂದು ದೂರು..!

---Advertisement---

ರಚಿತಾ ರಾಮ್ ಪ್ರಮೋಷನ್ ಗೆ ಬರ್ತಾ ಇಲ್ಲ ಎಂದು ನಿನ್ನೆಯಷ್ಟೇ ಸಂಜು ವೆಡ್ಸ್ ಗೀತಾ ತಂಡ ದೂರನ್ನ ನೀಡಿದ್ರು. ಇದರ ಬೆನ್ನಲ್ಲೇ ರಚಿತಾ ರಾಮ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಅದೇನಂದ್ರೆ ಸಿನಿಮಾಗಾಗಿ ತೆಗೆದುಕೊಂಡ ಅಡ್ವಾನ್ಸ್ ಹಣವನ್ನ ವಾಪಾಸ್ ನೀಡಿಲ್ಲ ಎಂದು ವಿಜಯಲಕ್ಷ್ಮೀ ಎಂಬುವವರು ದೂರನ್ನ ನೀಡಿದ್ದಾರೆ.

ರಚಿತಾ ರಾಮ್ ಅವರಿಗೆ ಉಪ್ಪಿ ರುಪ್ಪಿ ಚಿತ್ರಕ್ಕಾಗಿ ನಿರ್ಮಾಪಕಿ ವಿಜಯಲಕ್ಷ್ಮೀ ಅವರು ಹಣ ನೀಡಿದ್ದರಂತೆ. . ಅದು ಇಂದು ನಿನ್ನೆಯಲ್ಲ ಸುಮಾರು 8 ವರ್ಷಗಳ ಹಿಂದೆ 13 ಲಕ್ಷ ಹಣವನ್ನು ಅಡ್ವಾನ್ಸ್ ಆಗಿ ಪಡೆದುಕೊಂಡಿದ್ದರಂತೆ. ಆದರೆ ಈ ಸಿನಿಮಾದ ಶೂಟಿಂಗ್ ಗೆ ರಚಿತಾ ರಾಮ್ ಬರ್ತಿಲ್ಲ ಎಂಬ ಆರೋಪ ನಿರ್ಮಾಪಕಿ ವಿಜಯಲಕ್ಷ್ಮೀ ಅವರದ್ದು.

ಉಪ್ಪಿ ರುಪ್ಪಿ ಸಿನಿಮಾದಲ್ಲಿ ಉಪೇಂದ್ರ ಜೊತೆ ನಟಿಸಲು ಒಪ್ಪಿಕೊಂಡಿದ್ದ ನಟಿ ರಚಿತಾ ರಾಮ್. ವಿಜಯಲಕ್ಷ್ಮಿ ಅರಸ್ ನಿರ್ಮಾಣದ ಸಿನಿಮಾ ಕೆ. ಮಾದೇಶ್ ನಿರ್ದೇಶನ ಮಾಡುತ್ತಿದ್ದರು. 23 ಲಕ್ಷ ಸಂಭಾವನೆಗೆ ಕಮಿಟ್ ಆಗಿದ್ದ ರಚಿತಾ ಮುಂಗಡವಾಗಿ 13 ಲಕ್ಷ ಅಡ್ವಾನ್ಸ್ ರೂಪದಲ್ಲಿ ಹಣ ಪಡೆದಿದ್ದರಂತೆ. 2017 ರಲ್ಲಿ ಬ್ಯಾಂಕಾಕ್ ನಲ್ಲಿ ಶೂಟಿಂಗ್ ಪ್ಲಾನ್ ಮಾಡಲಾಗಿತ್ತು.
ಆಗ ಬರುವುದಾಗಿ ಒಪ್ಪಿಕೊಂಡು ರಚಿತಾ ರಾಮ್ ಗೆ ಟಿಕೆಟ್ ಬುಕ್ ಮಾಡಿದ್ರು ಹೋಗಿರಲಿಲ್ಲವಂತೆ. 15 ದಿನಗಳ ಕಾಲ ಈಗ ಬರ್ತೀನಿ ಆಗ ಬರ್ತೀನಿ ಅಂತ ಆಟ ಆಡಿಸಿದ್ದಾರಂತೆ. 15 ದಿನ ಪ್ರತಿ ದಿನ ಟಿಕೆಟ್ ಬುಕ್ ಮಾಡಿ ಸೂಟ್ ರೂಮ್ ಬುಕ್ ಮಾಡಿಕೊಂಡು ಕಾದಿದ್ದ ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್, ಬಂದ ಜಾಗಕ್ಕೆ ಸುಂಕವಿಲ್ಲ ಅಂತ ಹೀರೋ ಪೋರ್ಷನ್ ಶೂಟ್ ಮಾಡಿಕೊಂಡು ವಾಪಾಸ್ ಆಗಿದ್ದರಂತೆ.

ನಮಗೆ ರಚಿತಾ ರಾಮ್ ನಿಂದ ಒಂದೂವರೆ ಕೋಟಿ ನಷ್ಟವಾಗಿದೆ ಎಂದಿದೆ ಚಿತ್ರತಂಡ. ಒಂದು ದಿನ ಮಾತ್ರ ಸಿನಿಮಾದ ಶೂಟಿಂಗ್ ಮೈಸೂರ್ ನಲ್ಲಿ ನಡೆದ ಶೂಟಿಂಗ್ ನಲ್ಲಿ ಭಾಗಿ ಆಗಿದ್ದರಂತೆ. ಸಿನಿಮಾ 35 ಪರ್ಸೆಂಟ್ ಕಂಪ್ಲೀಟ್ ಆಗಿ ನಿಂತು ಹೋಗಿದೆ. ಹಣವು ಇಲ್ಲ ಸಿನಿಮಾನು ಕಂಪ್ಲೀಟ್ ಇಲ್ಲ. ಅವತ್ತಿನಿಂದ ಸಂಪರ್ಕಕ್ಕೆ ಸಿಗದೇ ಸತಾಯಿಸುತ್ತಿರುವ ನಟಿ. ಕೊನೆಯದಾಗಿ ಬೇಸತ್ತು ನಿರ್ಮಾಪಕಿ ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ದಾರೆ. ಈಗಲಾದ್ರೂ ಹಣ ಹಿಂದಿರುಗಿಸುತ್ತಾರ ರಚಿತಾ ಕಾದು ನೋಡ್ಬೇಕು. 2 ತಿಂಗಳ ಹಿಂದೆ ಫಿಲ್ಮ್ ಚೇಂಬರ್ ನಲ್ಲಿ ದೂರು ದಾಖಲಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment