Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

BREAKING NEWS : ರಷ್ಯಾದ ತೈಲ ಸಂಸ್ಕರಣಾಗಾರ ಮುಂಭಾಗ ಉಕ್ರೇನ್ ಡ್ರೋನ್ ದಾಳಿ: 12 ಸಾವು, 39 ಜನರಿಗೆ ಗಾಯ

---Advertisement---

ನಿಜ್ನೆಕಾಮ್ಸ್ಕ್ (ರಷ್ಯಾ): ರಷ್ಯಾದ ಟಾಟರ್ಸ್ತಾನ್ ಪ್ರದೇಶದ ಪ್ರಮುಖ ಕೈಗಾರಿಕಾ ನಗರವಾದ ನಿಜ್ನೆಕಾಮ್ಸ್ಕ್ ಮೇಲಿನ ಉಕ್ರೇನ್ ಡ್ರೋನ್ ದಾಳಿಯಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದು, 39 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ನಗರದ ಮೇಯರ್ ರಾಡ್ಮಿರ್ ಬೆಲ್ಯಾಯೇವ್ ಸೋಮವಾರ ತಿಳಿಸಿದ್ದಾರೆ.

ಈ ದಾಳಿಯಲ್ಲಿ ರಷ್ಯಾದ ಅತ್ಯಂತ ತಾಂತ್ರಿಕವಾಗಿ ಮುಂದುವರಿದ ಪ್ರಮುಖ ತೈಲ ಸಂಸ್ಕರಣಾಗಾರಕ್ಕೆ ಹಾನಿಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ದಾಳಿಯ ಬೆನ್ನಲ್ಲೇ ತೈಲ ಸಂಸ್ಕರಣಾಗಾರದಿಂದ ಬೃಹತ್ ಪ್ರಮಾಣದ ದಟ್ಟ ಹೊಗೆ ಏಳುತ್ತಿರುವ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಈ ಹಿಂದೆ ಜೂನ್‌ ತಿಂಗಳಲ್ಲೂ ದಾಳಿಗೊಳಗಾಗಿದ್ದ ಟ್ಯಾಟ್ನೆಫ್ಟ್‌ನ ‘ತಾನೆಕೊ’ (TANECO) ಸಂಸ್ಕರಣಾಗಾರವೇ ಮತ್ತೆ ಉಕ್ರೇನ್‌ನ ಪ್ರಮುಖ ಗುರಿಯಾಗಿದೆ.ಈ ಸಂಸ್ಕರಣಾಗಾರವು 2024 ರಲ್ಲಿ 1.7 ಕೋಟಿ ಟನ್ ಕಚ್ಚಾ ತೈಲವನ್ನು ಸಂಸ್ಕರಿಸಿದ್ದು, 27 ಲಕ್ಷ ಟನ್ ಪೆಟ್ರೋಲ್ ಹಾಗೂ 85 ಲಕ್ಷ ಟನ್ ಡೀಸೆಲ್ ಉತ್ಪಾದಿಸಿತ್ತು.  ಘೋರ ದಾಳಿಯ ಹಿನ್ನೆಲೆಯಲ್ಲಿ ಟಾಟರ್ಸ್ತಾನ್ ಮುಖ್ಯಸ್ಥ ರುಸ್ಟಮ್ ಮಿನ್ನಿಖಾನೋವ್ ಅವರು ಅಧಿಕೃತ ಶೋಕಾಚರಣೆಯನ್ನು ಘೋಷಿಸಿದ್ದಾರೆ.

ರಷ್ಯಾದ ಆರ್ಥಿಕತೆ ಮತ್ತು ಇಂಧನ ಪೂರೈಕೆಯನ್ನು ಕುಗ್ಗಿಸುವ ಉದ್ದೇಶದಿಂದ ಉಕ್ರೇನ್ ಇತ್ತೀಚಿನ ತಿಂಗಳುಗಳಲ್ಲಿ ರಷ್ಯಾದ ತೈಲ ಸಂಸ್ಕರಣಾಗಾರಗಳ ಮೇಲೆ ದಾಳಿಯನ್ನು ತೀವ್ರಗೊಳಿಸಿದೆ. ಇದರಿಂದಾಗಿ ರಷ್ಯಾದ ಹಲವು ಭಾಗಗಳಲ್ಲಿ ಇಂಧನ ಅಭಾವ ಸೃಷ್ಟಿಯಾಗಿತ್ತು.

Join WhatsApp

Join Now

Join Telegram

Join Now