Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಇಂದಿನಿಂದ ವಿಧಾನಸಭೆ ಹಂಗಾಮಿ ಸಭಾಧ್ಯಕ್ಷರಾಗಿ ಟಿ.ಬಿ.ಜಯಚಂದ್ರ ಕಾರ್ಯನಿರ್ವಹಣೆ

---Advertisement---

ಬೆಂಗಳೂರು.ಅಗಸ್ಟ್.10: ರಾಜ್ಯ ವಿಧಾನಸಭೆಯ ಹಂಗಾಮಿ ಸಭಾಧ್ಯಕ್ಷರಾಗಿ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ಇಂದಿನಿಂದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಮುಂಬರುವ ಅಧಿವೇಶನದ ಸಂಪೂರ್ಣ ಕಲಾಪಗಳನ್ನು ಮುನ್ನಡೆಸಲಿದ್ದಾರೆ.

ಆಗಸ್ಟ್ 13ರಿಂದ 27ರವರೆಗೆ ಒಟ್ಟು 10 ದಿನಗಳ ಕಾಲ ವಿಧಾನಸಭೆಯ ಮಳೆಗಾಲದ ಅಧಿವೇಶನ ನಡೆಯಲಿದೆ. ಅಧಿವೇಶನದ ಮೊದಲ ದಿನವಾದ ಗುರುವಾರದಂದುಡಿ. ಸುಧಾಕರ್, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ದೇವೇಗೌಡ ಸೇರಿದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗುತ್ತದೆ. ನಂತರ ಶುಕ್ರವಾರದಿಂದ ನಿಗದಿತ ವೇಳಾಪಟ್ಟಿಯಂತೆ ಸಭೆಯ ಕಲಾಪಗಳು ಮುಂದುವರಿಯಲಿವೆ.

ಈ ಬಾರಿಯ ಅಧಿವೇಶನದಲ್ಲಿ ಪ್ರಶ್ನೋತ್ತರ, ಗಮನಸೆಳೆಯುವ ಸೂಚನೆಗಳು, ಹೊಸ ವಿಧೇಯಕಗಳ ಮಂಡನೆ, ಶೂನ್ಯ ವೇಳೆ ಹಾಗೂ ನೂತನ ವಿಧಾನಸಭಾ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಪ್ರಸ್ತಾವನೆಗಳು ಜರುಗಲಿವೆ. ಇದರೊಂದಿಗೆ ನಿಯಮ 69ರ ಅಡಿಯಲ್ಲಿ ಸಾರ್ವಜನಿಕ ಮಹತ್ವದ ಜರೂರು ವಿಷಯಗಳ ಕುರಿತು ಅಲ್ಪಕಾಲಾವಧಿ ಚರ್ಚೆ, ಅಧಿಕೃತ ನಿರ್ಣಯಗಳು, ವಿವಿಧ ವರದಿಗಳ ಸಮರ್ಪಣೆ ಮತ್ತು ಅರ್ಧ ಗಂಟೆ ಕಾಲಾವಧಿಯ ಚರ್ಚೆಗಳನ್ನು ಒಳಗೊಂಡ ಕಲಾಪಗಳ ಪಟ್ಟಿಯನ್ನು ಸಿದ್ಧಪಡಿಸುವಲ್ಲಿ ಜಯಚಂದ್ರ ಅವರು ಪ್ರಮುಖ ಗಮನ ಹರಿಸಲಿದ್ದಾರೆ.

Join WhatsApp

Join Now

Join Telegram

Join Now