ಮಾವಿನ ಹಣ್ಣು ಎಂದರೆ ಎಲ್ಲರಿಗೂ ಇಷ್ಟ. ಆದರೆ ಮಾವಿನ ಮರದ ಎಲೆಗಳಲ್ಲೂ ಹಲವು ಔಷಧೀಯ ಗುಣಗಳಿವೆ ಎಂಬುದು ನಿಮಗೆ ಗೊತ್ತೇ? ಭಾರತೀಯ ಸಂಪ್ರದಾಯದಲ್ಲಿ ಮಾವಿನ ಎಲೆಗಳನ್ನು ಹಲವು ರೀತಿಯಲ್ಲಿ ಬಳಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅವುಗಳಲ್ಲಿರುವ ಸಸ್ಯಸತ್ವಗಳ ಕಾರಣದಿಂದ ಆರೋಗ್ಯದ ದೃಷ್ಟಿಯಿಂದಲೂ ಗಮನ ಸೆಳೆಯುತ್ತಿವೆ.
ಮಾವಿನ ಎಲೆಗಳಲ್ಲಿ ಏನಿದೆ?
ಮಾವಿನ ಎಲೆಗಳಲ್ಲಿ ವಿವಿಧ ಸಸ್ಯಸತ್ವಗಳು, ಪಾಲಿಫಿನಾಲ್ಸ್, ಫ್ಲೇವನಾಯ್ಡ್ಸ್ ಹಾಗೂ ಮ್ಯಾಂಜಿಫೆರಿನ್ ಸೇರಿದಂತೆ ಹಲವು ಜೈವಿಕ ಸಕ್ರಿಯ ಸಂಯುಕ್ತಗಳು ಕಂಡುಬರುತ್ತವೆ. ಇವು ಆ್ಯಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿವೆ ಎಂದು ಸಂಶೋಧನೆಗಳು ಸೂಚಿಸಿವೆ.

ಮಾವಿನ ಎಲೆಗಳ ಪ್ರಮುಖ ಆರೋಗ್ಯ ಪ್ರಯೋಜನಗಳು:
ಪೋಷಕಾಂಶಗಳ ಗಣಿ:
ಮಾವಿನ ಎಲೆಗಳಲ್ಲಿ ವಿಟಮಿನ್ ಎ, ವಿಟಮಿನ್ ಬಿ ಮತ್ತು ವಿಟಮಿನ್ ಸಿ ಸಮೃದ್ಧವಾಗಿವೆ. ಜೊತೆಗೆ ಪ್ರಮುಖ ಆಂಟಿಆಕ್ಸಿಡೆಂಟ್‌ಗಳು ಹಾಗೂ ಪೋಷಕಾಂಶಗಳು ಇದರಲ್ಲಿ ಯಥೇಚ್ಛವಾಗಿ ಕಂಡುಬರುತ್ತವೆ.
ಜೀರ್ಣಕ್ರಿಯೆ ಸುಧಾರಣೆ:
ಮಾವಿನ ಎಲೆಗಳ ಸಾರವು ಜೀರ್ಣಾಂಗವ್ಯೂಹದ ಕಾರ್ಯವೈಖರಿಯನ್ನು ಉತ್ತೇಜಿಸುತ್ತದೆ. ಹೊಟ್ಟೆಯ ಕಿರಿಕಿರಿ, ಗ್ಯಾಸ್ಟ್ರಿಕ್ ಹಾಗೂ ಅಜೀರ್ಣದಂತಹ ಸಮಸ್ಯೆಗಳನ್ನು ಶಮನಗೊಳಿಸಲು ಇದು ಸಹಾಯ ಮಾಡುತ್ತದೆ.
ತೂಕ ಇಳಿಕೆಗೆ ಸಹಕಾರಿ:
ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸುವವರಿಗೆ ಮಾವಿನ ಎಲೆಗಳು ನೆರವಾಗುತ್ತವೆ. ಇವು ದೇಹದ ಚಯಾಪಚಯ ಕ್ರಿಯೆಯನ್ನು (Metabolism) ಚುರುಕುಗೊಳಿಸಿ ಅನಗತ್ಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತವೆ.
ಚರ್ಮದ ಆರೋಗ್ಯ ಮತ್ತು ಆರೈಕೆ:
ಮಾವಿನ ಎಲೆಗಳಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಚರ್ಮದ ಸಮಸ್ಯೆಗಳನ್ನು ದೂರವಿಟ್ಟು, ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡಲು ಸಹಕಾರಿಯಾಗಿವೆ.
ಸಾಂಪ್ರದಾಯಿಕ ಹಾಗೂ ಅಡುಗೆ ಬಳಕೆ:
ಮಾವಿನ ಎಲೆಗಳನ್ನು ಕೇವಲ ಶುಭ ಕಾರ್ಯಗಳಿಗೆ ಮಾತ್ರವಲ್ಲದೆ, ಕೆಲವು ಸಾಂಪ್ರದಾಯಿಕ ಖಾದ್ಯಗಳಲ್ಲಿ ಹಾಗೂ ಗಿಡಮೂಲಿಕೆ ಕಷಾಯಗಳಲ್ಲಿಯೂ ಬಳಸಲಾಗುತ್ತದೆ.
ಗಮನಿಸಿ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾರ್ವಜನಿಕ ಜಾಗೃತಿ ಮತ್ತು ತಿಳುವಳಿಕೆಗಾಗಿ ಮಾತ್ರ. ನಿಮ್ಮ ಆರೋಗ್ಯದಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ಅಥವಾ ಮಾವಿನ ಎಲೆ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವ ಮುನ್ನ ವೈದ್ಯರು ಅಥವಾ ಆರೋಗ್ಯ ತಜ್ಞರ ಸಲಹೆ ಪಡೆಯುವುದು ಸೂಕ್ತ.













