Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನೆರೆ ರಾಜ್ಯ ಕೇರಳದಲ್ಲಿ 19 ಜನರ ಪ್ರಾಣ ತೆಗೆದ ಅಮಿಬಾ : ಕರ್ನಾಟಕದ ಪರಿಸ್ಥಿತಿ ಹೇಗಿದೆ..?

---Advertisement---

 

ಸದ್ಯ ರಾಜ್ಯದಲ್ಲೂ ಅಮಿಬಾದೆ ಆತಂಕವಾಗಿದೆ. ಕೇರಳದಲ್ಲಿ ಈ ಅಮಿಬಾದಿಂದ ಹತ್ತೊಂಭತ್ತು ಜನರ ಪ್ರಾಣ ಹೋಗಿದೆ. ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾದಿಂದ ಜನ ಆತಂಕದಲ್ಲಿದ್ದಾರೆ. ಅಂದ್ರೆ ಪೊವ್ಲೆರಿ ಅಮಿಬಾ ಕಾಟ ಹೆಚ್ಚಾಗಿದೆ. ಇದರಿಂದ ಸಾವಿನ ಸಂಖ್ಯೆಯು ಏರಿಕೆಯಾಗ್ತಾನೆ ಇದೆ. ಈಗಾಗಲೇ 19 ಜನ ಸಾವನ್ನಪ್ಪಿರುವ ಕಾರಣ, ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

ಈ ಸೋಂಕು ನೆಗ್ಲಿರಿಯಾ ಪೊವ್ಲೆರಿ ಎಂಬ ಅಮೀಬಾದಿಂದ ಹರಡುತ್ತದೆ. ಈ ಸೋಂಕು ಸಾಮಾನ್ಯವಾಗಿ ನಿಂತ ನೀರು, ಕೊಳಗಳು ಮತ್ತು ಸರೋವರಗಳಲ್ಲಿ ಈ ಅಮಿಬಾ ಬೆಳೆಯುತ್ತದೆ. ಒ.ಮದು ವೇಳೆ ಅಂತಹ ನೀರಿನಲ್ಲಿ ಈಜಾಡಿದ್ರೆ ಅಮಿಬಾವು ಮೂಗಿನ ಮೂಲಕ ನಮ್ಮ ಮೆದುಳು ಹೊಕ್ಕು ನೇರವಾಗಿ ಕೇಂದ್ರ ನರವ್ಯೂಹಕ್ಕೆ ಹಾನಿಯುಂಟು ಮಾಡುತ್ತದೆ. ಕೆಲವೊನ್ಮೆ ಸೋಂಕಿನ ಪ್ರಮಾಣವೂ ಹೆಚ್ಚಾದಾಗ ಸಾವು ಕೂಡ ಸಂಭವಿಸುತ್ತದೆ. ಈಗ ಕೇರಳದಲ್ಲಿ ಅದೇ ಪರಿಸ್ಥಿತಿ ಎದುರಾಗಿದೆ.

 

ಆದರೆ ಈ ರೋಗ ಒಬ್ಬರಿಂದ ಒಬ್ಬರಿಗೆ ಹರಡುವಂತದ್ದಲ್ಲ. ಈ ಸೋಂಕಿನ ಲಕ್ಷಣಗಳು ಸಾಮಾನ್ಯ ಕಾಯಿಲೆಗೆ ಕಂಡಂತೆಯೇ ಕಾಣಿಸುತ್ತವೆ. ತಲೆನೋವು, ಜ್ವರ, ವಾಕರಿಕೆ ಮತ್ತು ವಾಂತಿ ಕಾಣಿಸಿಕೊಳ್ಳುತ್ತದೆ. ಸೋಂಕು ತಗುಲುವುದಕ್ಕೂ ಮುನ್ನವೇ ಮುನ್ನೆಚ್ಚರಿಕೆ ವಹಿಸುವುದು ಬಹಳ ಮುಖ್ಯವಾಗಿದೆ. ನಿಂತ ನೀರಲ್ಲಿ ಈಜುವುದಕ್ಕೆ ಹೋಗಬೇಡಿ. ಕೇರಳದ ಸದ್ಯದ ಸ್ಥಿತಿ ಕಂಡ ಕರ್ನಾಟಕ ಆರೋಗ್ಯ ಇಲಾಖೆಯೂ ಮುನ್ನೆಚ್ಚರಿಕೆ ವಹಿಸುತ್ತಿದೆ. ನಮ್ಮ ರಾಜ್ಯದಲ್ಲಿ  ಯಾವುದೇ ರೀತಿ ನೆಗ್ಲೆರಿಯಾ ಫೊವ್ಲೆರಿ ಸೋಂಕು ಕಾಣಿಸಿಕೊಂಡಿಲ್ಲ..ಆದ್ರೂ ‌ಕೂಡ ಆರೋಗ್ಯ ಇಲಾಖೆಯಿಂದ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now