ದೆಹಲಿ; ಆರ್ಸಿಬಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ರಾಜ್ಯಪಾಲರು ಕೂಡ ಕಾರ್ಯಕ್ರಮಕ್ಕೆ ಬಂದಿದ್ದರು. ಈ ಕಾರ್ಯಕ್ರಮವನ್ನು ಸರ್ಕಾರ ಆಯೋಜಿಸಿದ್ದಲ್ಲ ಎಂದೂ ಆಡಳಿತ ಪಕ್ಷ ಹೇಳ್ತಾ ಇದೆ. ಆದರೆ ರಾಜ್ಯಪಾಲರು ಅಲ್ಲಿಗೇಗೆ ಬಂದರೂ ಎಂಬ ಪ್ರಶ್ನೆಯೂ ಜನರನ್ನ ಕಾಡುತ್ತಿದೆ. ಈ ಬಗ್ಗೆ ದೆಹಲಿಗೆ ಭೇಟಿ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಪ್ರಶ್ನೆ ಮಾಡಿದಾಗ, ಸರಿಯಾದ ಉತ್ತರ ಕೊಡದೆ ಜಾರಿಕೊಂಡಿದ್ದಾರೆ.
ಟೌನ್ ಪ್ಲ್ಯಾನಿಂಗ್ ವಿಚಾರದಲ್ಲಿ ಹೊಸ ಪಾಲಿಸಿಯನ್ನ ಮಾಡ್ತಾ ಇದ್ದರು. ಈ ಹಿಂದೆನೆ ಮಾಡಿದ್ರು. ಆದರೆ ಇಂಪ್ಲಿಮೆಂಟ್ ಮಾಡಿರಲಿಲ್ಲ. ಈಗ ಮಾಡ್ತಾ ಇದ್ದಾರೆ. ರೋಡ್ಸ್ ಗಳಿಗೆ ಫೆಸಿಪಿಕ್ ಆಗಿ ಒಂದೊಂದು ಮಾಡಿದ್ದಾರೆ. ಅದರ ಭಾಗವಾಗಿ ನನಗೆ ಪ್ರೆಸೆಂಟೇಷನ್ ಕೊಡ್ತಾ ಇದ್ದಾರೆ. ಅದಾದ ಮೇಲೆ ಕಸದ ಡಂಪಿಂಗ್ ಯಾರ್ಡ್ ಗೆ ವಿಸಿಟ್ ಮಾಡ್ತೇವೆ ನಮ್ಮ ಟೀಂ.
ಹೈಕಮಾಂಡ್ ಭೇಟಿ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಈ ಸಲ ಕಷ್ಟ ಆಗಬಹುದು. ಎತ್ತಿನ ಹೊಳೆದು ನಾಳೆ ಮೀಟಿಂಗ್ ಇದೆ. ಚೀಫ್ ಮಿನಿಸ್ಟರ್ ಎರಡು ಮೂರು ಸಲ ಪೋಸ್ಟ್ ಪೋನ್ ಮಾಡಿದ್ರು.12ನೇ ತಾರೀಖು ಮತ್ತೊಂದು ಮೀಟಿಂಗ್ ಇದೆ. ಅವಾರ್ಡ್ ಬಗ್ಗೆ ಎಲ್ಲಾ ಎಂಪಿಗಳನ್ನ ಮೀಟ್ ಮಾಡಬೇಕು.
ರಾಜ್ಯಪಾಲರಿಗೆ ಕಾರ್ಯಕ್ರಮಕ್ಕೆ ಆಹ್ವಾನ ಕೊಟ್ಟಿದ್ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ಆ ಪ್ರಶ್ನೆಯನ್ನ ನೀವೂ ರಾಜ್ಯಪಾಲರಿಗೆ ಕೇಳಬೇಕು. ನನಗೆ ಕೇಳಿದರೆ ಏನು ಪ್ರಯೋಜನ. ನಂಗೆ ಏನು ಗೊತ್ತಿಲ್ಲ. ಆಯೋಗ ತನಿಖೆಯನ್ನ ನಡೆಸ್ತಾ ಇದೆ. ನೀವೂ ರಾಜ್ಯಪಾಲರನ್ನೇ ಭೇಟಿ ಮಾಡಿ ಅಂತೇಳಿ ಹೊರಟಿದ್ದಾರೆ.











