ದಾವಣಗೆರೆ; ಇಂದು ದ್ವಿತೀಯ ಪಿಯು ಫಲಿತಾಂಶವನ್ನು ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ. ಆದರೆ ಈ ಬಾರಿ ಸಾಕಷ್ಟು ಮಕ್ಕಳು ಫೇಲ್ ಆಗಿದ್ದಾರೆ. ಫೇಲ್ ಆದ ಮಕ್ಕಳಿಗೆ ಎರಡು ಬಾರಿ ಪರೀಕ್ಷೆ ಬರೆಯಲು ಅವಕಾಶವನ್ನೇನೋ ಇಲಾಖೆ ನೀಡಿದೆ. ಆದರೂ ಈ ಬಾರಿಯ ಫಲಿತಾಂಶವನ್ನು ಕಳೆದ ಬಾರಿಗೆ ಹೋಲಿಕೆ ಮಾಡಿಕಿಂಡರೆ ಕಡಿಮೆಯಾಗಿದೆ.
ದಾವಣಗೆರೆ ಜಿಲ್ಲೆಯಲ್ಲೂ ಅದೇ ಸಮಸ್ಯೆಯಾಗಿದೆ. ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಫಲಿತಾಂಶ ಬಂದಿದೆ. ಜಿಲ್ಲೆಯಲ್ಲಿ ಶೇಕಡ 69.45 ರಷ್ಟು ಫಲಿತಾಂಶ ಬಂದಿದೆ. ಕಳೆದ ಬಾರಿಗೆ ಹೋಲಿಸಿದರೆ ಶೇಕಡ 11ರಷ್ಟು ಫಲಿತಾಂಶ ಕುಂಠಿತವಾಗಿದೆ ಕಳೆದ ಬಾರಿ 80.96 ಫಲಿತಾಂಶವನ್ನು ಜಿಲ್ಲೆ ಪಡೆದುಕೊಂಡಿತ್ತು. ಈ ಮೂಲಕ 21 ಸ್ಥಾನದಲ್ಲಿತ್ತು. ಈ ಬಾರಿ ಸ್ಥಾನ ಪಲ್ಲಟವಾಗಿ ಬಿಟ್ಟಿದೆ. ಅಂದ್ರೆ ಕಡಿಮೆ ಮಕ್ಕಳು ಪಾಸ್ ಆಗುವ ಮೂಲಕ ಜಿಲ್ಲೆಯಲ್ಲಿ ಕಡಿಮೆ ಫಲಿತಾಂಶ ತಂದಿದ್ದಾರೆ.
ದಾವಣಗೆರೆ ಜಿಲ್ಲೆಯಾದ್ಯಂತ 21,153 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. ಒಳ್ಳೆಯ ಫಲಿತಾಂಶ ಬರುವ ನಿರೀಕ್ಷೆಯೂ ಇತ್ತು. ಸರ್.ಎಂ.ವಿ ಪದವಿ ಪೂರ್ವ ಕಾಲೇಜಿನ ಅದಿತಿ ವಿ.ಅಂಗಡಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 597 ಅಂಕ ಗಳಿಸಿ ರಾಜ್ಯದಲ್ಲಿ 3ನೇ ರ‍್ಯಾಂಕ್ ಪಡೆದಿದ್ದು, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇದೇ ಕಾಲೇಜಿನ ಎನ್.ಎಂ. ಜಯಲಕ್ಷ್ಮಿ, ರಾಹುಲ್ ಮಠದ್ ಹಾಗೂ ಸಿದ್ದಗಂಗಾ ಪದವಿ ಪೂರ್ವ ಕಾಲೇಜಿನ ಎನ್.ರವಿಕಿರಣ್, ದಿ ಟೀಮ್ ಪದವಿ ಪೂರ್ವ ಕಾಲೇಜಿನ ಸೃಜನಾ ಎಸ್.ಗೌಡ 595 ಅಂಕಗಳನ್ನು ಪಡೆದಿದ್ದಾರೆ. ಪಾಸ್ ಆದ ಮಕ್ಕಳಿಗೆ ಜಿಲೆಯ ಜನ ಶುಭಕೋರಿದ್ದಾರೆ.















