ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 05 : ನಗರದ ಅಮೃತ ಆಯುರ್ವೇದಿಕ್ ಕಾಲೇಜು ಸಮೀಪದ ಟೀಚರ್ಸ್ ಕಾಲೋನಿ ನಿವಾಸಿ ಸರೋಜಮ್ಮ (71 ವರ್ಷ) (ದಿ|| ಮುಲ್ಕ ಸತ್ಯನಾರಾಯಣ ರೆಡ್ಡಿ ಇವರ ಧರ್ಮಪತ್ನಿ) ಇಂದು ಮುಂಜಾನೆ ನಿಧನರಾದರು. ಮೃತರು ಓರ್ವ ಪುತ್ರಿ, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಅಂತ್ಯಸಂಸ್ಕಾರ ಇಂದು ಸಂಜೆ 4:30 ರ ವೇಳೆಗೆ ನಗರದ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.















