Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ : ಪುರುಷರ ರಕ್ಷಣೆಗೂ ಪ್ರತ್ಯೇಕ ಕಾನೂನು ಜಾರಿಗೆ ಆಗ್ರಹ: ಕರ್ನಾಟಕ ನಾಗರೀಕರ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್,  ಚಿತ್ರದುರ್ಗ, ನವೆಂಬರ್. 19 : ಕಾನೂನಿನಲ್ಲಿ ಮಹಿಳೆಯರಿಗೆ ಇರುವಂತ ರಕ್ಷಣೆ ಪುರುಷರಿಗೂ ಸಿಗಬೇಕಾಗಿರುವುದರಿಂದ ಪ್ರತ್ಯೇಕವಾಗಿ ಪುರುಷರಿಗೂ ಕಾನೂನು ಜಾರಿಗೆ ತರುವಂತೆ ಕರ್ನಾಟಕ ನಾಗರೀಕರ ರಕ್ಷಣಾ ವೇದಿಕೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ನಾಗರೀಕರ ರಕ್ಷಣಾ ವೇದಿಕೆ ಅಧ್ಯಕ್ಷರು ಹಾಗೂ ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಮಾತನಾಡಿ ಸಾಂಸಾರಿಕ ಜೀವನ ಸುಖಮಯವಾಗಿರಬೇಕಾದರೆ
ದಂಪತಿಗಳ ಪಾತ್ರ ಅತಿ ಮುಖ್ಯ. ಎಲ್ಲಾ ಕುಟುಂಬಗಳಲ್ಲಿಯೂ ಮನಸ್ತಾಪ ಮೂಡುವುದು ಸಹಜ. ಸಮಸ್ಯೆಗಳನ್ನು ಮನೆಯೊಳಗೆ ಬಗೆಹರಿಸಿಕೊಳ್ಳಬೇಕು. ಬೀದಿಗೆ ತರಬಾರದು. ಕಲಂ 497 ರ ಅನ್ವಯ ವಿವಾಹಿತ ಮಹಿಳೆ ಪರ ಪುರುಷನೊಂದಿಗೆ ಲೈಂಗಿಕ ಸಂಪರ್ಕ ಹೊಂದುವುದು ಕಾನೂನು ಬಾಹಿರವಾಗಿತ್ತು. 2018 ರಲ್ಲಿ ಸುಪ್ರೀಂಕೋರ್ಟ್ ಈ ಕಾಯಿದೆಯನ್ನು ರದ್ದುಪಡಿಸಿ ಯಾವುದೇ ಒಬ್ಬ ಮಹಿಳೆ ಪರ ಪುರುಷನೊಂದಿಗೆ ದೈಹಿಕ ಸಂಪರ್ಕ ಹೊಂದುವುದು ಕಾನೂನು ಬಾಹಿರವಲ್ಲ ಎಂಬ ತೀರ್ಪು ನೀಡಿರುವುದು ಪುರಷರಿಗೆ ಅನ್ಯಾಯವಾಗಿದೆ. ಎಷ್ಟೊ ಮಹಿಳೆಯರು ಇದನ್ನೆ ಅಸ್ತ್ರವನ್ನಾಗಿಸಿಕೊಂಡು ಪುರುಷರ ಮೇಲೆ ವರದಕ್ಷಿಣೆ ಕಿರುಕುಳ, ಅತ್ಯಾಚಾರದ ಕೇಸ್‍ಗಳನ್ನು ದಾಖಲಿಸುತ್ತಿದ್ದಾರೆ. ಸರ್ಕಾರ ಪುರುಷರ ರಕ್ಷಣೆಗಾಗಿ ಪ್ರತ್ಯೇಕ ಕಾನೂರು ರಚಿಸುವಂತೆ ಜಿಲ್ಲಾಡಳಿತದ ಮೂಲಕ ಆಗ್ರಹಿಸಿದರು.
ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ ಹೀಗೆ ಅನೇಕ ಕೇಸುಗಳಾಗುತ್ತಿರುವುದರಿಂದ ಅಮಾಯಕ ಪುರುಷರು ಜೈಲು ಪಾಲಾಗಿದ್ದಾರೆ. ಅದಕ್ಕಾಗಿ ಮಹಿಳೆಯರ ರಕ್ಷಣೆಗೆ ಕಾಯಿದೆಯಿರುವಂತೆ ಪುರುಷರಿಗೂ ಪ್ರತ್ಯೇಕ ಕಾನೂನು ರೂಪಿಸಿ ರಕ್ಷಣೆ ನೀಡಬೇಕು. ಹೆಸರಿಗಷ್ಟೆ ಪುರುಷರ ದಿನಾಚರಣೆ ಬೇಡವೆಂದು ಸರ್ಕಾರವನ್ನು ಒತ್ತಾಯಿಸಿದರು.

ನ್ಯಾಯವಾದಿ ಬಿ.ಕೆ.ಎಸ್.ಅಂಜುಮ್ ಮಾತನಾಡುತ್ತ. ಕೆಲವು ಮಹಿಳೆಯರು ತಮ್ಮ ರಕ್ಷಣೆಗಾಗಿ ಇರುವ ಕಾನೂನನ್ನು ದುರಪಯೋಗಪಡಿಸಿಕೊಳ್ಳುತ್ತಿರುವುದರಿಂದ ಏನು ತಪ್ಪು ಮಾಡದ ಪುರುಷರು ಕಾನೂನಿನಡಿ ಶಿಕ್ಷೆ ಅನುಭವಿಸಬೇಕಾಗುತ್ತದೆ. ಪತಿ ತನ್ನ ಪತ್ನಿಯ ತಪ್ಪನ್ನು ಪ್ರಶ್ನಿಸಿದಾಗ ವರದಕ್ಷಿಣೆ ಕಿರುಕುಳ ನೀಡುತ್ತಾರೆಂದು ದೂರು ದಾಖಲಿಸಿ ಮಾನಸಿಕವಾಗಿ ಹಿಂಸೆ ನೀಡುವುದನ್ನು ನೋಡಿದ್ದೇವೆ. ಕಾನೂನು ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಅದಕ್ಕಾಗಿ ಪುರುಷರ ರಕ್ಷಣೆಗೂ ಕಾನೂನು ಜಾರಿಗೆ ತರಬೇಕೆಂದು ಆಗ್ರಹಿಸಿದರು.

ನ್ಯಾಯವಾದಿ ಶ್ರೀದೇವಿ ಮಾತನಾಡಿ ಪ್ರತಿ ಕುಟುಂಬವೂ ನೆಮ್ಮದಿಯಿಂದ ಇರಬೇಕಾದರೆ ಸ್ತ್ರೀ-ಪುರುಷ ಇಬ್ಬರು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಬೇಕು. ಮಹಿಳೆ ಅಬಲೆ ಎನ್ನುವ ಕಾರಣವನ್ನೇ ಮುಂದಿಟ್ಟುಕೊಂಡು ಪುರುಷರಿಗೆ ನಾನಾ ರೀತಿಯ ತೊಂದರೆ ನೀಡುತ್ತಿರುವುರಿಂದ ಅನೇಕರು ಜೈಲು ಪಾಲಾಗುತ್ತಿದ್ದಾರೆ. ಹೆಸರಿಗಷ್ಟೆ ಪುರುಷ ಪ್ರದಾನ ಸಮಾಜವೆನ್ನುವುದು ಬೇಡ. ಮಹಿಳೆಯರಂತೆ ಪುರುಷರಿಗೂ ರಕ್ಷಣೆ ಸಿಗಬೇಕೆಂದು ಜಿಲ್ಲಾಡಳಿತವನ್ನು ವಿನಂತಿಸಿದರು.

ನ್ಯಾಯವಾದಿಗಳಾದ ಸೌಮ್ಯ, ಪುಷ್ಪ, ಚಂಪ, ಅಶ್ವಿನಿ, ಅರ್ಚನ, ಮಮತ, ಲಿಖಿತ, ಮನ್ಸೂರ್, ಮುಯಿನ್, ಅಶೋಕ್‍ಬೆಳಗಟ್ಟ, ಎಂ.ಜೆ.ತಿಪ್ಪೇಸ್ವಾಮಿ, ನವಾಜ್‍ಖಾನ್
ಕೀತಿ, ಖಾನ್ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now