ಬೆಂಗಳೂರು.ಆಗಸ್ಟ್ 7: ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯಾಗಿದ್ದ ಬಸವರಾಜ ಎಸ್. ಹೊರಟ್ಟಿ ಅವರು ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರೊಂದಿಗಿನ ಸುದೀರ್ಘ ಚರ್ಚೆ ಮತ್ತು ಮನವೊಲಿಕೆಯ ನಂತರ ಹೊರಟ್ಟಿ ಅವರು ತಮ್ಮ ಪಟ್ಟನ್ನು ಸಡಿಲಿಸಿ ರಾಜೀನಾಮೆ ನೀಡಲು ಒಪ್ಪಿಕೊಂಡರು. ತದನಂತರ ಸಲ್ಲಿಸಿದ ಅಧಿಕೃತ ರಾಜೀನಾಮೆ ಪತ್ರದಲ್ಲಿ, ತಾವು ಯಾವುದೇ ಒತ್ತಡವಿಲ್ಲದೆ ‘ಸ್ವಇಚ್ಛೆಯಿಂದ’ ಹುದ್ದೆ ತೊರೆಯುತ್ತಿರುವುದಾಗಿ ಉಲ್ಲೇಖಿಸಿದ್ದಾರೆ.
ದಿನಾಂಕ 07.08.2026 ರಂದು ಅವರು ತಮ್ಮ ಸ್ವಇಚ್ಛೆಯಿಂದ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿ, ವಿಧಾನ ಪರಿಷತ್ತಿನ ಉಪ ಸಭಾಪತಿಯವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.











