Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿಕ್ಕಬಳ್ಳಾಪುರದಲ್ಲಿ ಬ್ಯಾನರ್ ಗಲಾಟೆ : ನನ್ನ ಒಳ್ಳೆತನ ನೋಡಿದ್ದೀರಿ, ಕೆಟ್ಟತನ ನೋಡಿಲ್ಲ.. ರಾಜೀವ್ ಗೌಡ

---Advertisement---

ಚಿಕ್ಕಬಳ್ಳಾಪುರ: ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಯಿಂದ ಏನೆಲ್ಲಾ ಅವಾಂತರ ಆಗಿದೆ ಎಂಬುದನ್ನ ಎಲ್ಲರು ನೋಡಿದ್ದಾರೆ. ಅದರಿಂದ ಒಬ್ಬರ ಜೀವವೂ ಹೋಗಿದೆ. ಇದರ ಬೆನ್ನಲ್ಲೇ ಚಿಕ್ಕಬಳ್ಳಾಪುರದಲ್ಲೂ ಬ್ಯಾನರ್ ಗಲಾಟೆ ಜೋರಾಗಿದೆ. ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಆರೋಪ ಕೇಳಿ ಬಂದಿದೆ. ಬ್ಯಾನರ್ ತೆರವು ಮಾಡಿದ್ದಕ್ಕೆ ಪೌರಾಯುಕ್ತರಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ನಗರಸಭೆ ಕಚೇರಿಗೆ ಬೆಂಕಿ ಹಚ್ಚಿ ದಂಗೆ ಎಬ್ಬಿಸುವಂತ ಬೆದರಿಕೆಯನ್ನು ಹಾಕಿದ್ದಾರೆ ಎನ್ನಲಾಗಿದೆ.

ನಗರಸಭೆ ಪೌರಾಯುಕ್ತೆ ಅಮೃತಾ ಗೌಡಗೆ ನಿಂದಿಸಿದ್ದರಂತೆ. ಪೌರಾಯುಕ್ತರೆಲ್ಲ ಸೇರಿ ಧರಣಿಯನ್ನ ಕೂತಿದ್ದಾರೆ. ಕಾರಣ ರಾಜೀವ್ ಗೌಡ ಅವರನ್ನ ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ಆಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿರುವ ವಾಯ್ಸಚ ರಾಜೀವ್ ಗೌಡರದ್ದೇ ಎನ್ನಲಾಗಿದೆ. ಆಡಿಯೋ ಈ ರೀತಿ ಇದೆ.

ನಗರಸಭೆ ಪೌರಾಯುಕ್ತೆ : ಹಲೋ ಸರ್

ರಾಜೀವ್ ಗೌಡ: ಮೇಡಂ ಬ್ಯಾನರ್ ತೆಗೆಯುವುದಕ್ಕೆ ಹೇಳಿದ್ದೀರಾ..?

ನಗರಸಭೆ ಪೌರಾಯುಕ್ತೆ: ಇಲ್ಲ ಸರ್ ಒಂದು ಬ್ಯಾನರ್ ಕೋಟೆ ಸರ್ಕಲ್ ಮಧ್ಯದಲ್ಲಿ ಹಾಕಿದ್ದಾರೆ. ಗಾಡುಗಳು ಗುದ್ಕೊಂಡು ಹೋಗಿವೆ. ಪಬ್ಲಿಕ್ ಕಂಪ್ಲೈಂಟ್ ಮಾಡ್ತಾ ಇದ್ದರು ಅಂತ ಅಪ್ಸರ್ ಸರ್ ಗೆ ಹೇಳಿದೆ. ಸ್ವಲ್ಪ ಸೈಡ್ ನಲ್ಲಿ ಕಟ್ಕೊಳಿ ಅಂತ.

ರಾಜೀವ್ ಗೌಡ: ನಮ್ಮ ಬ್ಯಾನರ್ ಏನಾದ್ರೂ ಬಿಚ್ಚಿಸಿದ್ರಿ ಅಂದ್ರೆ ಬೆಂಕಿ ಹಚ್ಚಿಸಿ ಬಿಡ್ತೀನಿ. ನನ್ನ ಒಳ್ಳೆತನ ನೋಡಿದ್ದೀರಿ, ಕೆಟ್ಟತನ ನೋಡಿಲ್ಲ. ನನ್ನನ್ನ ಬೇರೆಯವರ ರೀತಿ ತಿಳಿದುಕೊಳ್ಳಬೇಡಿ ಈ ರೀತಿ ಪೌರಾಯುಕ್ತೆಗೆ ಅವಾಜ್ ಹಾಕಿದ್ದಾರೆ. ಆಡಿಯೋ ಎಲ್ಲೆಡೆ ವೈರಲ್ ಆಗ್ತಾ ಇದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now