Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯತೀಂದ್ರರೇ ನಮ್ಮ ಹೈಕಮಾಂಡ್ : ಶಾಸಕ ಗಣಿಗ ರವಿಕುಮಾರ್

---Advertisement---

 

ಮಂಡ್ಯ: ಸಿಎಂ ಸಿದ್ದರಾಮಯ್ಯ ಅವರ ಮಗ ಯತೀಂದ್ರ ಸಿದ್ದರಾಮಯ್ಯ ಅವರ ಮಾತಿಗೆ ಪಕ್ಷದಲ್ಲಿಯೇ ಒಂದಷ್ಟು ವಿರೋಧಗಳು ವ್ಯಕ್ತವಾಗ್ತಾ ಇದೆ. ಅದರಲ್ಲೂ ನಮ್ಮ ತಂದೆಯೇ ಐದು ವರ್ಷ ಸಿಎಂ ಎಂಬ ಹೇಳಿಕೆಗೆ ಡಿಕೆಶಿ ಬೆಂಬಲಿಗರು ಗರಂ ಆಗಿದ್ದಾರೆ. ಇದೀಗ ಶಾಸಕ ಗಣಿಗ ರವಿಕುಮಾರ್ ಅವರು ಯತೀಂದ್ರ ಅವರೇ ನಮ್ಮ ಹೈಕಮಾಂಡ್ ಅಂತ ವ್ಯಂಗ್ಯವಾಡಿದ್ದಾರೆ.

ಮಂಡ್ಯದಲ್ಲಿ ಈ ಬಗ್ಗೆ ಮಾತನ್ನಾಡಿದ್ದು, ಯತೀಂದ್ರ ಸಿದ್ದರಾಮಯ್ಯ ಅವರೇ ನಮ್ಮ ಹೈಕಮಾಂಡ್. ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ. ಅದನ್ನೇ ನಾನು ಉಚ್ಛರಿಸುತ್ತೇನೆ. ನಮಗೆ ಹೈಕಮಾಂಡ್ ನೋಟೀಸ್ ಕೊಡಬಹುದು. ಆದರೆ ಹೈಕಮಾಂಡ್ ಗೆ ನಾವೂ ನೋಟೀಸ್ ಕೊಡಲು ಸಾಧ್ಯವಿಲ್ಲ. ಅವರು ನಮ್ಮ ಹೈಕಮಾಂಡ್ ಅನ್ನೋದನ್ನ 100% ಪರ್ಸೆಂಟ್ ಒಪ್ಪಿಕೊಳ್ಳುತ್ತೇವೆ. ಯಾರೂ ಸ್ಟೇಟ್ಮೆಂಟ್ ಕೊಡಬೇಡಿ ಅಂತ ನಾಲ್ಕು ಬಾರಿ ಹೇಳಿದರು. ಆದರೂ ಸ್ಟೇಟ್ಮೆಂಟ್ ಕೊಡುತ್ತಿದ್ದಾರೆ ಅಂದ್ರೆ ಅವರು ಸುಪ್ರೀಂ. ಖರ್ಗೆಯವರಿಗಿಂತ ಜಾಸ್ತಿ. ಡಿಕೆ ಅವರಿಗಿಂತ ಕಡಿಮೆ ಅಂತ ಹೇಳುವುದಕ್ಕೆ ಆಗಲ್ಲ.

ಮಾತನ್ನಾಡಬೇಡಿ ಎಂದರೂ ಮಾತನ್ನಾಡುತ್ತಿದ್ದಾರೆ ಅಂದ್ರೆ ಅವರು ಪವರ್ ಫುಲ್ ಮ್ಯಾನ್. ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲೇ ಬೇಕು‌. ಅವರು ಸಿಎಂ ಆಗುವುದನ್ನ ಯಾರೂ ಕೂಡ ತಪ್ಪಿಸೋದಕ್ಕೆ ಆಗಲ್ಲ. ಡಿಕೆಶಿ ರಾಜಕಾರಣವನ್ನು ಅರೆದು ಕುಡಿದಿದ್ದಾರೆ. ಯಾವಾಗ, ಯಾವ ಪ್ಲ್ಯಾನ್ ಮಾಡಿದರೆ ಗೇಮ್ ಗೆಲ್ಲಬಹುದು ಅಂತ ಅವರಿಗೆ ಗೊತ್ತಿದೆ. ರಾಜಕೀಯ ತಂತ್ರಗಾರಿಕೆ, ಚಾಣಾಕ್ಷತನ ಅವರಿಗಿದೆ. ಗೆಲ್ಲುವ ಬುದ್ಧಿವಂತಿಕೆ ಇರುವುದಕ್ಕೇನೆ ನಿಧಾನವಾಗಿ ಕಾಯಿನ್ ಮೂವ್ ಮಾಡ್ತಾ ಇದ್ದಾರೆ. ರಾಜಕಾರಣ ಅಂದಮೇಲೆ ಆಟ ಇರಲೇಬೇಕು ಅಲ್ವಾ ಎಂದು ಡಿಕೆಶಿಯನ್ನ ಹೊಗಳಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...