Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

BREAKING NEWS : ಕಾಮನ್‌ವೆಲ್ತ್ ಗೇಮ್ಸ್  ಬಾಕ್ಸಿಂಗ್‌ನಲ್ಲಿ ಭಾರತದ ಪ್ರೀತಿ ಪವಾರ್ ಗೆ ಚಿನ್ನದ ಪದಕ

---Advertisement---

ಗ್ಲಾಸ್ಗೋ ಆಗಸ್ಟ್ 1: ಪ್ರಸ್ತುತ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2026ರ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಭಾರತದ ಪ್ರೀತಿ ಪವಾರ್ ಭರ್ಜರಿ ಸಾಧನೆ ಮಾಡಿದ್ದು, ಮಹಿಳೆಯರ 54 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಶನಿವಾರ (ಆಗಸ್ಟ್ 1) ನಡೆದ ರೋಚಕ ಫೈನಲ್ ಹಣಾಹಣಿಯಲ್ಲಿ ಕೆನಡಾದ ಸ್ಕಾರ್ಲೆಟ್ ಸವನ್ನಾ ಡೆಲ್ಗಾಡೊ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ ಪ್ರೀತಿ, ಎದುರಾಳಿಯನ್ನು ಮಣಿಸಿ ಭಾರತಕ್ಕೆ ಸ್ವರ್ಣ ಪದಕ ತಂದುಕೊಟ್ಟಿದ್ದಾರೆ. ರಿಂಗ್‌ನಲ್ಲಿ ಆರಂಭದಿಂದಲೇ ಪೂರ್ಣ ಮೇಲುಗೈ ಸಾಧಿಸಿದ ಅವರು, ರಿಂಗ್‌ನ ಚುರುಕಿನ ಚಲನೆ ಹಾಗೂ ತೀಕ್ಷ್ಣವಾದ ಪಂಚ್‌ಗಳ ಮೂಲಕ ಕೆನಡಾದ ಬಾಕ್ಸರ್ ವಿರುದ್ಧ ಭರ್ಜರಿ ಜಯ ದಾಖಲಿಸಿದರು.

 

Join WhatsApp

Join Now

Join Telegram

Join Now