Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಇನ್ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ : ಗೀತಾ ಶಿವರಾಜ್ಕುಮಾರ್ ಮಹತ್ವದ ಘೋಷಣೆ

---Advertisement---

ಶಿವಮೊಗ್ಗ: ದೊಡ್ಮನೆಯ ದೊಡ್ಡ ಸೊಸೆ ಗೀತಾ ಶಿವರಾಜ್‍ಕುಮಾರ್, ತಮ್ಮ ತಂದೆಯ ಹಾದಿಯಲ್ಲಿಯೇ ಅಂದ್ರೆ ಬಂಗಾರಪ್ಪ ಅವರಂತೆಯೇ ರಾಜಕೀಯದಲ್ಲಿ ಸಾಧಿಸುವ ಛಲ ಹೊಂದಿದ್ದರು. ಶಿವಣ್ಣ ಕೂಡ ಪತ್ನಿಯ ರಾಜಕೀಯ ಗೆಲುವಿಗಾಗಿ ಸಾಕಷ್ಟು ಓಡಾಡಿದರು. ಶಿವಮೊಗ್ಗದಲ್ಲೆಲ್ಲಾ ಓಡಾಡಿ, ಪ್ರಚಾರವನ್ನು ಮಾಡಿದರು. ಆದರೆ ಅದ್ಯಾಕೋ ಏನೋ ಜನ ಎರಡು ಬಾರಿಯೂ ಕೈಹಿಡಿಯಲಿಲ್ಲ. ಇದೀಗ ಗೀತಕ್ಕನೇ ರಾಜಕೀಯದಿಂದ ದೂರಾಗುವ ಮಾತುಗಳನ್ನ ಆಡಿದ್ದಾರೆ.

 

ಶಿವಮೊಗ್ಗ ಜಿಲ್ಲಾ ಕಾಂಗ್ರೆಸಗ ಮಹಿಳಾಪ ಘಟಕದ ಅಧ್ಯಕ್ಷೆಯಾಗಿ ಶ್ವೇತಾ ಬಂಡಿ ಅಧಿಕಾರ ಸ್ವೀಕಾರ ಮಾಡಿದರು. ಹೀಗಾಗಿ ಅದರ ಅದ್ದೂರಿ ಕಾರ್ಯಕ್ರಮವೂ ನೆರವೇರಿತ್ತು. ಗೀತಕ್ಕ ಕೂಡ ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ತಮ್ಮ ರಾಜಕೀಯದ ಭವಿಷ್ಯದ ಬಗ್ಗೆ ಮಾತನ್ನಾಡಿದ್ದಾರೆ. ಇನ್ನು ಮುಂದೆ ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಗೀತಾ ಶಿವರಾಜ್ ಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ.

ಚುನಾವಣೆಗೆ ಸ್ಪರ್ಧಿಸಲ್ಲ, ಆದರೆ ನಿಮ್ಮೆಲ್ಲರ ಜೊತೆಗೆ ನಿಂತಿರುತ್ತೇನೆ. ಮುಂದಿನ ಚುನಾವಣೆಗೆ ಬಂದು ಕ್ಯಾಂಪೇನ್ ಮಾಡುತ್ತೇನೆ. ಚುನಾವಣೆಯಲ್ಲಿ ಸ್ಪರ್ಧಿಸಿ ಮಂಜುನಾಥ ಭಂಡಾರಿಗೂ ನಾನು ತೊಂದರೆ ಕೊಡುವುದಿಲ್ಲ ಎಂದರು. ಮಹಿಳೆಯರು ಎಂದಿಗೂ ಅಬಲೆಯರಲ್ಲ, ಎಲ್ಲರೂ ಸಬಲೆಯರೇ. ಮಹಿಳೆಯರಿಗೆ ಶಕ್ತಿ ನೀಡಿದರೆ ಎಂತಹ ಕೆಲಸವನ್ನಾದರೂ ಮಾಡುತ್ತಾರೆ. ಕಳೆದ ಹತ್ತು ವರ್ಷಗಳಿಂದ ಶ್ವೇತಾ ಬಂಡಿಯನ್ನು ನಾನು ಬಲ್ಲೆ. ನಿಮ್ಮ ಕಷ್ಟಗಳಿಗೆ ನಾನು ಸ್ಪಂದಿಸುತ್ತೇನೆ. ಏನೇ ಕಷ್ಟವಿದ್ದರೂ ಮಧು ಬಂಗಾರಪ್ಪ ಹಿಡಿದುಕೊಂಡು ಕೆಲಸ ಮಾಡಿಸಿಕೊಳ್ಳಿ ಎಂದು ಗೀತಾ ಶಿವರಾಜ್​ ಕುಮಾರ್ ಹೇಳಿದರು. ಇದು ಕೇಳುಗರಿಗೆ ಅಕ್ಷರಶಃ ಶಾಕ್ ಆಗಿದೆ. ಇನ್ನು ಕೆಲವರು ಅವರ ನಿರ್ಧಾರವನ್ನ ಗೌರವಿಸಿದ್ದಾರೆ. ಶಿವಣ್ಣ ಈಗಷ್ಟೇ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಆ ಕಡೆಗೆ ಸಮಯ ಕೊಡಬೇಕಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now