Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿಗ್ ಬಾಸ್ ನಲ್ಲಿ ಮಹಿಳೆಯರು ಯಾಕೆ ಗೆಲ್ತಾ ಇಲ್ಲ..? ಕಾರಣ ಇದೆ‌ ನೋಡಿ..!

---Advertisement---

ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗಿದೆ. ಆದರೆ ನಿರೀಕ್ಷೆ ಮಟ್ಟದ ಕಾಂಪಿಟೇಷನ್ ಏನು ಕಾಣಿಸುತ್ತಿಲ್ಲ. ಒಂದು ಪ್ರತಿಭೆಯ ಅನಾವರಣವಿಲ್ಲ, ಕಲ್ಚರಲ್ ಆಕ್ಟಿವಿಟೀಸ್ ಇಲ್ಲ. ಬಿಗ್ ಬಾಸ್ ಹೇಳುವ ತನಕ ತಾವಾಗಿ ಏನನ್ನು ಮಾಡುವುದಿಲ್ಲ. ಮಾತಿಗೆ ಮುಂಚೆ ಜೋರು ಮಾಡುವುದನ್ನು ಬಿಟ್ಟು, ಜಗಳ ಮಾಡುವುದನ್ನು ಬಿಟ್ಟು. ಸೇಫರ್ ಝೋನ್ ನಲ್ಲಿ ನಿಂತು ಆಟವಾಡುತ್ತಿರುವಂತೆ ಇದೆ.

ಜಗಳ ಮಾಡಿದರೇನೆ ಬಿಗ್ ಬಾಸ್ ಮನೆಯಲ್ಲಿ ಇರುವುದಕ್ಕೆ ಆಗುತ್ತೇನೋ ಅಂತ ಕೆಲವರು ಅಂದುಕೊಂಡಂತೆ ಇದ್ದರೆ, ಇನ್ನು ಕೆಲವರು ಯಾವ ಕಡೆಗೂ ಮಾತನಾಡಬಾರದಪ್ಪ ಅಂತ ಸೈಲೆಂಟ್ ಆಗಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳ ಈ ಮೌನವೇ ಕಿಚ್ಚನಿಗೆ ಕೋಪ ತರಿಸಿದೆ. ಕಿಚ್ಚನ ಪಂಚಾಯ್ತಿಯಲ್ಲಿ ಹೆಣ್ಣು ಮಕ್ಕಳನ್ನು ಎಚ್ಚರಿಸಲಾಗಿದೆ.

‘ಇಷ್ಟು ಸೀಸನ್ ನಲ್ಲಿ ಶೃತಿ ಅವರನ್ನು ಬಿಟ್ಟರೆ ಬೇರೆ ಯಾರು ಬಿಗ್ ಬಾಸ್ ಗೆಲ್ಲಲಿಲ್ಲ. ಉಳಿದ ಎಲ್ಲಾ ಪುರುಷರೇ ವಿನ್ ಆಗಿದ್ದಾರೆ. ಬಿಗ್ ಬಾಸ್ ನಲ್ಲಿ ಯಾಕೆ ಮಹಿಳೆಯರು ವಿನ್ ಆಗ್ತಿಲ್ಲ ಅಂತ ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ಈ ಸಲ ಕ್ಯಾಪ್ಟನ್ ಆಯ್ಕೆಯಲ್ಲೂ ವಿನಯ್ ಮತ್ತು ಕಾರ್ತೀಕ್ ಆದ್ರೂ. ಯಾವೊಬ್ಬ ಮಹಿಳೆಯರು ಮುಂದೆ ಬರಲಿಲ್ಲ. ನಾಮಿನೇಟ್ ಮಾಡೋದಕ್ಕೆ ಟೈಮ್ ತಗೋಳ್ತೀರಾ. ಕ್ಯಾಪ್ಟನ್ ಆಯ್ಕೆ ಸಮಯವೇ ತಗೋಳಲ್ಲ. ನಾವೂ ಹಿಂಗೆ ಆಡೋದು ಅನ್ನುವುದಾದರೇ ದಯವಿಟ್ಟು ಮೇನ್ ಡೋರ್ ಓಪನ್ ಆಗುತ್ತೆ. ಅಲ್ಲಿರಬೇಡಿ, ಸೀದಾ ಬಂದುಬಿಡಿ ಎಂದು ಕಿಚ್ಚ ಸುದೀಪ್ ಬೇಸರದಲ್ಲಿಯೇ ಹೇಳಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment