ಚೆನ್ನೈ: ಪ್ರಧಾನಿ ಮೋದಿ ರಾಜ್ಯಕ್ಕೆ ಬಂದಾಗ ದೂರದಿಂದಾನೇ ನೋಡಿ ಖುಷಿ ಪಡುತ್ತೀವಿ. ದೂರದಿಂದಾನೇ ಅವರ ಜೊತೆಗೊಂದು ಸೆಲ್ಫೀ ಕ್ಲಿಕ್ಕಿಸಿಕೊಳ್ಳುತ್ತೀವಿ. ಆದರೆ ಪ್ರಧಾನಿ ಮೋದಿಯವರೇ ಹತ್ತಿರ ಬಂದು ಸೆಲ್ಫಿ ತೆಗೆದುಕೊಳ್ಳೋಣಾ ಅಂದ್ರೆ ಸಂತಸವಾಗದೆಯೇ ಇರುತ್ತದೆಯಾ.? ಆ ಸಂತಸ, ಆ ಖುಷಿ ಸಿಕ್ಕಿರುವುದು ತಮಿಳುನಾಡಿನ ಬಿಜೆಪಿ ಕಾರ್ಯಕರ್ತನಿಗೆ.
ಪ್ರಧಾನಿ ಮೋದಿ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆಗೆ ಚೆನ್ನೈಗೆ ಆಗಮಿಸಿದ್ದ ಪ್ರಧಾನಿ ಮೋದಿ, ಬಿಜೆಪಿ ಕಾರ್ಯಕರ್ತ ತಿರು ಎಸ್ ಮಣಿಕಂದನ್ ಅವರನ್ನು ಭೇಟಿ ಮಾಡಿ ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದಾರೆ. ತಿರು ದಿವ್ಯಾಂಗರಾಗಿದ್ದರು ಕೂಡ ಬಿಜೆಪಿ ಕಾರ್ಯಕರ್ತರಲ್ಲದೆ, ಜೀವನೋಪಾಯಕ್ಕೆ ಅಂಗಡಿ ನಡೆಸುತ್ತಿದ್ದರು.
ಪ್ರಧಾನಿ ಮೋದಿ ತಿರು ಜೊತೆಗಿನ ಫೋಟೋ ಹಂಚಿಕೊಂಡು ಟ್ವೀಟ್ ಮಾಡಿದ್ದು, ಚೆನ್ನೈನಲ್ಲಿ ನಾನು ಮಣಿಕಂದನ್ ಅವರನ್ನು ಭೇಟಿಯಾದೆ. ಈ ರೋಡಿನ ಬಿಜೆಪಿ ಕಾರ್ಯಕರ್ತ ಹಾಗೂ ಬೂತ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ದಿವ್ಯಾಂಗರಾಗಿದ್ದರೂ ಸ್ವಂತ ಅಂಗಡಿ ಹೊಂದಿದ್ದಾರೆ. ಇದು ಎಲ್ಲರಿಗೂ ಪ್ರೇತಣೆಯೇ ಸರಿ. ಅವರು ಪ್ರತಿದಿನ ತಮಗೆ ಬಂದ ಲಾಭದಲ್ಲಿ ಒಂದು ಭಾಗವನ್ನು ಬಿಜೆಪಿಗೆ ನೀಡುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.





GIPHY App Key not set. Please check settings