Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭಾರತದ ನೈಸರ್ಗಿಕ ಅನಿಲ ಮತ್ತು ತೈಲಗಳ ನಿಕ್ಷೇಪಗಳ ಬಗ್ಗೆ ಮಹತ್ವದ ಮಾಹಿತಿ…!

---Advertisement---


ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821

ಸುದ್ದಿಒನ್, ಏಪ್ರಿಲ್. 19 :
ಭಾರತದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ನಿಕ್ಷೇಪಗಳು ಪ್ರಮುಖವಾಗಿ ಮುಂಬೈಹೈ , ಅಸ್ಸಾಂ, ಗುಜರಾತ್‌ ಮತ್ತು ರಾಜಸ್ಥಾನದ ಟರ್ಷಿಯನ್‌ ಯುಗದ ಪದರ ಬಂಡೆಗಳಲ್ಲಲಿ (sedimentany) ಕಂಡುಬರುತ್ತವೆ. ಇವು ಲಕ್ಷಾಂತರ ವರ್ಷಗಳ ಹಿಂದೆ ಸಮುದ್ರದ ಸಸ್ಯ ಮತ್ತು ಪ್ರಾಣಿಗಳ ಅವಶೇಷಗಳು ಭೂಮಿಯ ಒತ್ತಡ ಮತ್ತು ಶಾಖದಿಂದ ಹೈಡ್ರೋಕಾರ್ಬನ್‌ಗಳಾಗಿ ಮಾರ್ಪಟ್ಟು ಸೂಕ್ಷ್ಮ ರಂಧ್ರಗಳಿರುವ ಬಂಡೆಗಳಲ್ಲಿ ಸಂಗ್ರಹವಾಗಿವೆ.
ಭಾರತದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಂಪನ್ಮೂಲಗಳು ಮುಖ್ಯವಾಗಿ ಭಾರತದ ಅತಿದೊಡ್ಡ ಕಡಲಾಚೆಯ ತೈಲಕ್ಷೇತ್ರವಾಗಿದ್ದು ಪಶ್ಚಿಮ ಕರಾವಳಿಯಲ್ಲಿದೆ. ಅಸ್ಸಾಂನಲ್ಲಿ ಅತ್ಯಂತ ಹಳೆಯ ತೈಲ ಉತ್ಪಾದನಾ ಪ್ರದೇಶವಾಗಿದೆ. ಗುಜರಾತಿನ ಅಂಕಲೇಶ್ವರ್‌ ಇಲ್ಲಿನ ಪ್ರಮುಖ ತೈಲ ಮತ್ತು ಅನಿಲ ನಿಕ್ಷೇಪವಾಗಿದೆ. ರಾಜಾಸ್ಥಾನದ ಬಾರ್ಮಾರ್‌ ಪ್ರದೇಶದಲ್ಲಿ ಬೃಹತ್‌ ಪ್ರಮಾಣದ ನಿಕ್ಷೇಪಗಳು ಕಂಡುಬಂದಿವೆ.

ಕೃಷ್ಣ ಗೋದಾವರಿ ಮತ್ತು ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ಅನಿಲ ನಿಕ್ಷೇಪಗಳಾಗಿ ಗುರುತಿಸಲ್ಪಟ್ಟಿವೆ. ಲಕ್ಷಾಂತರ ವರ್ಷಗಳ ಹಿಂದೆ ಸಮುದ್ರದ ತಳದಲ್ಲಿ ಸತ್ತ ಸಸ್ಯ ಮತ್ತು ಪ್ರಾಣಿಗಳ ಅವಶೇಷಗಳು ಶೇಖರಣೆಯಾದವು, ಇವುಗಳ ಮೇಲೆ ಮಣ್ಣು ಮತ್ತು ಬಂಡೆಗಳ ಪದರಗಳು ಬಿದ್ದಿದ್ದರಿಂದ ಅಧಿಕ ಒತ್ತಡ ಮತ್ತು ಶಾಖದ ಪ್ರಭಾವದಿಂದ ಈ ಅವಶೇಷಗಳು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲವಾಗಿ ಪರಿವರ್ತನೆಹೊಂದಿದೆ. ಪದರ ಬಂಡೆಗಳಲ್ಲಿ ರಂಧ್ರಗಳಿರುವರಿಂದ ಇಂಧನಗಳು ಬಂಡೆಗಳಲ್ಲಿ ಸಿಕ್ಕಿ ಹಾಕಿಕೊಂಡಿವೆ ಮತ್ತು ಮೇಲ್ಭಾಗದಲ್ಲಿ ಅಬೇದ್ಯವಾದ ಬಂಡೆಗಳು ಇರುವುದರಿಂದ ಅವು ಹೊರಗೆ ಸೋರದಂತೆ ತಡೆಯಲ್ಪಟ್ಟಿವೆ.

ಭಾರತದ ತನ್ನ ತೈಲ ಅಗತ್ಯದ ಹೆಚ್ಚಿನ ಭಾಗವನ್ನು ಸುಮಾರು 80% ಕ್ಕಿಂತ ಹೆಚ್ಚು ವಿದೇಶಗಳಿಂದ ಅಮದು ಮಾಡಿಕೊಳ್ಳುತ್ತದೆ. ಇಂಧನ ಭದ್ರತೆಗಾಗಿ ಮಂಗಳೂರು ಮತ್ತು ಪಾದೂರಿನಲ್ಲಿ (ಉಡುಪಿ ಜಲ್ಲೆ) ಭೂಗರ್ಭದ ತೈಲಸಂಗ್ರಹಗಾರಗಳನ್ನು ನಿರ್ಮಿಸಲಾಗಿತ್ತು. ಭಾರತದಲ್ಲಿ ನೈಸರ್ಗಿಕ ಅನಿಲದ ಗಣಿಗಾರಿಕೆಯನ್ನು ಹೊರ ತೆಗೆಯುವಿಕೆಯನ್ನು ಪ್ರಮುಖವಾಗಿ ಆಯಿಲ್‌ ಅಂಡ್‌ ನ್ಯಾಚುರಲ್‌ ಗ್ಯಾಸ್‌ ಕಾರ್ಪೊರೇಶನ್‌ (ONGC) ನೇತೃತ್ವದಲ್ಲಿ ಕೈಗೊಳ್ಳಲಾಗುತ್ತದೆ.

ಇದರ ಜೊತೆಗೆ ಕೃಷ್ಣ, ಗೋದಾವರಿ ಪ್ರದೇಶಗಳಲ್ಲಿ ರಿಲಯನ್ಸ್‌ ಕಂಪನಿಯು ಕೂಡ ಕೆಲಸ ನಿರ್ವಹಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತದ ಅಂಡಮಾನ್‌ – ನಿಕೋಬರ್‌ ದೀಪಗಳ ಆಫ್‌ಶೋರ್‌ ಪ್ರದೇಶದಲ್ಲಿ ತೈಲ ಮತ್ತು ಅನಿಲಕ್ಕಾಗಿ ಪರಿಶೋಧನೆಯನ್ನು ONGC ಮತ್ತು ಆಯಿಲ್‌ ಇಂಡಿಯ ಸಂಸ್ಥೆಗಳು ನೈಸರ್ಗಿಕ ಅನಿಲ ಮತ್ತು ತೈಲಗಳ ನಿಕ್ಷೇಪಗಳ ಪರಿಶೋಧನೆ ನಡೆಸುತ್ತಿದೆ ಎಂದು ಇತ್ತೀಚಿನ ವರದಿಗಳಿಂದ ತಿಳಿದುಬಂದಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...