ಧಾರವಾಡ: ಯೂಟ್ಯೂಬರ್ ಮುಕಳೆಪ್ಪ ಮೋಸ ಮಾಡಿ ಮದುವೆಯಾಗಿದ್ದಾನೆ. ಲವ್ ಜಿಹಾದ್ ಆಗಿದೆ ಎಂದು ಹಿಂದೂಪರ ಸಂಘಟನೆಯವ್ರು ಆಕ್ರೋಶ ಹೊರ ಹಾಕಿದ್ದಾರೆ. ಗಾಯತ್ರಿಯ ತಾಯಿ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಮುಕಳೆಪ್ಪ ತಂದೆ ಸೊಸೆಯನ್ನ ಯಾವುದೇ ಕಾರಣಕ್ಕೂ ಎಲ್ಲಿಗೂ ಕಳುಹಿಸುವುದಿಲ್ಲ ಎಂದಿದ್ದಾರೆ.
ನಾನು ಮುಕಳೆಪ್ಪ ತಂದೆ. ಕಳೆದ ಕೆಲವು ದಿನಗಳಿಂದ ಎಲ್ಲಿ ಸಿಕ್ಕರೆ ಅಲ್ಲಿ ಧಮ್ಕು ಹಾಕ್ತಾರೆ. ನನ್ನ ಸೊಸೆಗೆ, ನನ್ನ ಮಗನಿಗೆ, ಒಟ್ಟು ನಮ್ಮ ಕುಟುಂಬಕ್ಕೆ ರಕ್ಷಣೆ ಕೊಡಬೇಕೆಂದು ಕೇಳಿಕೊಳ್ಳುತ್ತೇನೆ. ನಮ್ಮ ಸೊಸೆ ನಮ್ಮ ಸೊಸೆನೆ. ನಾವೂ ಯಾವತ್ತು ಬಿಟ್ಟು ಕೊಡೋದಕ್ಕೆ ಆಗಲ್ಲ. ಅವರ ಜಾತಿಯಲ್ಲಿ ಅವರಿರುತ್ತಾರೆ, ಅವರ ಸಂಪ್ರದಾಯವನ್ನು ಅವರು ಪಾಲಿಸ್ತಾರೆ. ಈಗ ಆಕಿ ಎಲ್ಲಿಯೇ ಹೋದರು ಮುಕೆಳಪ್ಪನ ಹೆಂಡತಿ ಅಂತಾನೇ ಅಂತಾರೆ. ಎಷ್ಟೇ ವರ್ಷವಾಗಲಿ ಮುಕಳೆಪ್ಪನ ಹೆಂಡತಿ ಗಾಯತ್ರಿ ಅಂತಾನೇ ಹೇಳೋದು ಎಂದಿದ್ದಾರೆ.

ಅದನ್ನು ಹೊರತು ಪಡಿಸಿ, ಅವರೆಲ್ಲ ನಾವೂ ಬಿಡಿಸಿಕೊಂಡು ಹೋಗ್ತೇವೆ, ಬೇರೆ ಮದುವೆ ಮಾಡ್ತೀವಿ ಅಂತಾರೆ. ಬೇರೆ ಮದುವೆ ಅಂದ್ರೆ ಅಷ್ಟು ಸುಲಭವಾ..? ಈಗ ಇಡೀ ಜಗತ್ತಿಗೇನೆ ಗೊತ್ತಾಗಿದೆ. ಆಕೆ ಮುಕಳೆಪ್ಪನ ಹೆಂಡತಿ ಅನ್ನೋದು. ನಮಗೆ ಯಾರು ಬ್ರೈನ್ ವಾಶ್ ಮಾಡಿಲ್ಲ. ನಮಗೆ ಮಾತಾಡೋದಕ್ಕೂ ಬರಲ್ಲ. ಏನು ತೋಚುತ್ತೋ ಅದನ್ನಷ್ಟೇ ಹೇಳುವುದು ಎಂದಿದ್ದಾರೆ. ಗಾಯತ್ರಿ ಅವರ ಮನೆಯಲ್ಲಿ ವಾಪಾಸ್ ಕರೆದುಕೊಂಡು ಹೋಗ್ತೀನಿ ಅಂತಿದ್ದಾರೆ. ಆದ್ರೆ ಮುಕಳೆಪ್ಪ ತಂದೆ ಮೊಹಮ್ಮದ್ ಹನೀಫ್ ಈಗ ಬೇರೆಯದ್ದೇ ರೀತಿಯಲ್ಲಿ ಹೇಳ್ತಿದ್ದಾರೆ. ಅಂದ್ರೆ ಗಟ್ಟಿ ನಿರ್ಧಾರ ತೆಗೆದುಕೊಂಡವರಂತೆ ಹೇಳಿದ್ದಾರೆ.


















