Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಳ್ಳಾರಿಗೆ ಐಜಿಪಿಯಾಗಿ ಬಂದ ಡಾ. ಹರ್ಷ ಅವರ ಮೊದಲ ಪ್ರತಿಕ್ರಿಯೆ ಏನು..?

---Advertisement---

ಬಳ್ಳಾರಿ : ಬ್ಯಾನರ್ ಗಲಾಟೆಯ ಬಳಿಕ ಬಳ್ಳಾರಿಯಲ್ಲಿ ಒಂದಷ್ಟು ಬದಲಾವಣೆಗಳು ಆಗಿವೆ. ಅದರಲ್ಲೂ ಡಿಜಿಪಿ ಹಾಗೂ ಎಸ್ಪಿಯ ಬದಲಾವಣೆಯೂ ಆಗಿದೆ. ಬಳ್ಳಾರಿಯಲ್ಲಿ ಶಾಂತಿ ಕಾಪಾಡಬೇಕು ಎಂಬ ಉದ್ದೇಶದಿಂದ ಹಲವು ಬದಲಾವಣೆಗಳನ್ನ ತರಲಾಗಿದೆ. ಇನ್ನು ಇಂದೇ ಐಜಿಪಿ ಅಧಿಕಾರ ಸ್ವೀಕಾರ ಮಾಡಿರುವ ಡಾ.ಹರ್ಷ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಇವತ್ತು ಸರ್ಕಾರದ ಆದೇಶದಂತೆ ಬಳ್ಳಾರಿಯ ವಲಯದ ಐಜಿಪಿ ಆಗಿ ಅಧಿಕಾರ ಸ್ವೀಕಾರ ಮಾಡಿದ್ದೇನೆ. ಈ ವಲಯದಲ್ಲಿ ನಾಲ್ಕು ಜಿಲ್ಲೆಗಳಿವೆ. ಹೆಡ್ ಕ್ಚಾರ್ಟರ್ ಆಗಿ ಬಳ್ಳಾರಿ ಇದೆ. ನಾನು ರಿಪೋರ್ಟ್ ಮಾಡಿಕೊಂಡ ಮೇಲೆ ಎಲ್ಲಾ ಅಧಿಕಾರಿಗಳ ಜೊತೆಗೆ ಸಣ್ಣದೊಂದು ಸಭೆ ನಡೆಸಿದ್ದೇನೆ. ನನಗೂ ಕೂಡ ಒಂದಷ್ಟು ಸಲಹೆಗಳು ಸಿಕ್ಕಿವೆ. ಕಾನೂನನ್ನು ಭದ್ರಪಡಿಸುವಂತಹ ಸರಿಯಾದ ಸಲಹೆಗಳನ್ನ ನಮ್ಮ ಹಿರಿಯ ಅಧಿಕಾರಿಗಳು ಸಹ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ನಮ್ಮ ಅಧಿಕಾರಿಗಳೊಂದಿಗೆ ಕೂಲಂಕುಶವಾಗಿ ಘಟನೆಗಳ ಬಗ್ಗೆ ಮಾಹಿತಿಯನ್ನ ಪಡೆಯುತ್ತೇನೆ. ಕೆಲವು ಪ್ರಕರಣಗಳ ಸಂಬಂಧ ತನಿಖೆಯನ್ನು ನಡೆಸುತ್ತೇನೆ ಎಂದಿದ್ದಾರೆ. ಸದ್ಯ ಬ್ಯಾನರ್ ಗಲಾಟೆಯಲ್ಲಿ ಆದಂತ ಸಾವಿನ ತನಿಖೆಯು ನಡೆಯುತ್ತಿದೆ. ರಾಜಶೇಖರ್ ದೇಹದಲ್ಲಿ ಹೊಕ್ಕ ಗುಂಡು, ಫೈಯರ್ ಆಗಿದ್ದೇಗೆ ಇದೆಲ್ಲದಕ್ಕೂ ಸಂಬಂಧ ಪಟ್ಟಂತೆ ಸಿಸಿಟಿವಿ ವಿಡಿಯೋ ಕೂಡ ವೈರಲ್ ಆಗಿದೆ. ಇದರ ತನಿಖೆಯೂ ಮುಂದುವರೆಯಲಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...