Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೇಘಸ್ಪೋಟ ಎಂದರೇನು ? ಅದು ಹೇಗೆ ಸಂಭವಿಸುತ್ತದೆ ?

---Advertisement---

ಸುದ್ದಿಒನ್ : ಅಲ್ಪಾವಧಿಯಲ್ಲಿ ಅತಿ ಹೆಚ್ಚು ಮಳೆ ಬಿದ್ದಾಗ ಅದನ್ನು ‘ಮೇಘಸ್ಪೋಟ’ವೆಂದು ವಿವರಿಸುವುದು ರೂಢಿಯಲ್ಲಿದೆ. ಸಾಮಾನ್ಯವಾಗಿ ಮೇಘಸ್ಪೋಟವು ಗುಡುಗು, ಮಿಂಚು, ಸಿಡಿಲು, ಆಲಿಕಲ್ಲುಗಳಿಂದ ಕೂಡಿದ್ದು ಕ್ಷಿಪ್ರ ಪ್ರವಾಹವನ್ನು ಉಂಟು ಮಾಡುವುದು. ನಿರ್ದಿಷ್ಟವಾಗಿ ವಿವರಿಸುವುದಾದರೆ ಒಂದು ಗಂಟೆಯ ಅವಧಿಯಲ್ಲಿ 10 ಸೆ.ಮೀ. (100 ಮಿ.ಮೀ.) ಗಳಿಗಿಂತ ಹೆಚ್ಚು ಮಳೆ (3.9 ಅಂಗುಲ) ಬಿದ್ದಲ್ಲಿ ಮಾತ್ರ ಅದನ್ನು ‘ಮೇಘಸ್ಪೋಟ’ವೆಂದು ಕರೆಯುವರು. ಇವುಗಳಿಂದ ಉಂಟಾಗುವ ಪ್ರವಾಹಗಳು ಅತ್ಯಂತ ಭೀಕರ. ಮೇಘಸ್ಪೋಟದೊಡನೆ ಭೂಪಾತಗಳೂ (ಭೂಕುಸಿತ) ಸಹ ಸಂಭಿವಿಸುತ್ತವೆ.

ಮೇಘಸ್ಪೋಟವು ಜಲಾಂಶಭರಿತವಾದ ಗಾಳಿಯು ಅತಿಹೆಚ್ಚು ಎತ್ತರದವರೆಗೆ ಚಲಿಸಿದಾಗ ಸಂಭವಿಸುತ್ತವೆ. ಈ ರೀತಿಯ ಪ್ರಚಲನ ಪ್ರವಾಹಗಳು 12 ರಿಂದ 15 ಕಿ.ಮೀ. ಎತ್ತರದವರೆಗೂ ಮುಂದುವರಿದಾಗ ಜಲಾಂಶವು ಅತಿ ಶೀಘ್ರವಾಗಿ ಘನೀಕರಣ ಹೊಂದ ತೊಡಗುವುದು. ಮಳೆಯ ಹನಿಗಳು ನಿಧಾನವಾಗಿ ಕೆಳಗೆ ಬೀಳುವ ಇತರ ಸಣ್ಣ ಹನಿಗಳನ್ನು ಆಕರ್ಷಿಸಿ ಹೆಚ್ಚು ದಪ್ಪವಾಗಿ ಬೆಳೆಯುತ್ತವೆ. ಜೊತೆಗೆ ಪ್ರಛಲವಾದ ಪ್ರಚಲನ ಪ್ರವಾಹದಿಂದ ಕೆಳಬೀಳುವ ಹನಿಗಳು ಮತ್ತಷ್ಟು ಎತ್ತರಕ್ಕೆ ತಳ್ಳಲ್ಪಟ್ಟು ಶೀತ ಗಾಳಿಯ ಸಂಪರ್ಕದಿಂದ ಮತ್ತಷ್ಟು ದಪ್ಪವಾಗಿ ಬೆಳೆದು ನಂತರ ಒಮ್ಮೆಗೆ ಧಾರಾಕರವಾಗಿ ಮಳೆ ಸುರಿಯುವುದು. ಈ ಪ್ರಕಾರವಾಗಿ ಮಳೆ ಹನಿಗಳು ಗಾತ್ರದಲ್ಲಿ ಮತ್ತಷ್ಟು ಬೆಳವಣಿಗೆಯಾಗುವ ಪ್ರಕ್ರಿಯೆಯನ್ನು ‘ಲ್ಯಾಂಗ್ ಮ್ಯೂರ್ ವೃಷ್ಠಿ’ ಎಂದು ಕರೆಯುವರು.

ಮೇಘಸ್ಪೋಟವು ಪ್ರಚಲನ ಪ್ರವಾಹಗಳುಂಟಾಗುವ ಹೆಚ್ಚು ಉಷ್ಣತೆಯಿರುವ ಪ್ರದೇಶ ಹಾಗೂ ಅವಧಿಯಲ್ಲಿ ಸಂಭವಿಸುತ್ತವೆ. ಆದರೆ ಇವುಗಳ ಸಂಭವನೀಯತೆ ಅತ್ಯುನ್ನತವಾದ ಪರ್ವತದ ಪ್ರದೇಶಗಳಲ್ಲಿ ಸಾಮಾನ್ಯ ಹೀಗಾಗಿಯೇ ಭಾರತದಲ್ಲಿ ಹಿಮಾಲಯ ಪರ್ವತದ ಪ್ರದೇಶಗಳಲ್ಲಿ ಆಗಿಂದಾಗ್ಗೆ ಅನಿರೀಕ್ಷಿತವಾಗಿ ಮೇಘಸ್ಪೋಟಗಳು ಸಂಭವಿಸುತ್ತವೆ. ಜಲಾಂಶಭರಿತವಾದ ಗಾಳಿಯು ಹಿಮಾಲಯ ಪರ್ವತಗಳಿಮದ ತಡೆಯಲ್ಪಟ್ಟು ಮೇಲೇರತೊಡಗಿ ಅತಿ ಹೆಚ್ಚು ಎತ್ತರದವರೆಗೆ ಮುಂದುವರಿಯುವುದು. ಈ ಮಾರುತ 10 ಕಿ.ಮೀ. ಗಳಿಗಿಂತ ಮತ್ತಷ್ಟು ಎತ್ತರಕ್ಕೆ ಏರಿ ಶೀತಗಾಳಿಯನ್ನು ಸಂಪರ್ಕಿಸಿದಾಗ ಅದರ ಸಂಪರ್ಕದಿಂದ ಜಲಾಂಶವು ಅತಿ ಶೀಘ್ರವಾಗಿ ಘನೀಕರಣ ಹೊಂದಿ ಮೇಘಸ್ಪೋಟ ಸಂಭವಿಸುವುದು.

 

ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...