Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕದನ ವಿರಾಮ ಎಂದರೇನು..? ಭಾರತ – ಪಾಕ್ ನಡುವೆ ಮತ್ತೆ ಯುದ್ಧ ಶುರುವಾಗುತ್ತಾ..?

---Advertisement---

ಕಾಶ್ಮೀರಕ್ಕೆ ಪ್ರವಾಸಕ್ಕೆಂದು ಹೋಗಿದ್ದ ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಉಗ್ರರು ಕೊಂದಿದ್ದರು. ಅದಕ್ಕೆ ಪ್ರತೀಕಾರವಾಗಿ ನಮ್ಮ ಭಾರತ, ಪಾಕಿಸ್ತಾನದ ಮೇಲೆ ಪ್ರತಿದಾಳಿ ಶುರು ಮಾಡಿತ್ತು. ಅದಕ್ಕೆ ನಲುಗಿ ಹೋದ ಪಾಕಿಸ್ತಾನ, ಮನವಿಯನ್ನ ಮಾಡಿಕೊಂಡ ಮೇಲೆ ಎರಡು ದೇಶಗಳ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಹಾಗಾದ್ರೆ ಎರಡು ದೇಶಗಳ ನಡುವೆ ಯುದ್ಧ ಆರಂಭವಾಗುವುದಿಲ್ಲವಾ ಅಂತ ಕೇಳಿದ್ರೆ, ನಡೆಯುವುದೇ ಇಲ್ಲ ಎಂದು ಹೇಳಲು ಆಗುವುದಿಲ್ಲ. ಅದು ಎರಡು ದೇಶಗಳ ಮೇಲೆ ಡಿಪೆಂಡ್ ಆಗಿರುತ್ತದೆ.

ಈ ಕದನ ವಿರಾಮ ಎಂದರೆ ಹಿಂಸಾಚಾರವನಚನು ನಿಲ್ಲಿಸುವುದು ಮತ್ತು ಶಾಂತಿಗೆ ಅವಕಾಶ ನೀಡುವುದು ಎಂದೇ ಅರ್ಥ. ಕದನ ವಿರಾಮ ಘೋಷಣೆ‌ ಮಾಡುವುದು ಎಂದರೆ ಶಾಂತಿ ಒಪ್ಪಂದವಲ್ಲ. ಆದರೆ ಅದು ಒಂದು ಶಾಂತಿ ಸ್ಥಾಪನೆಯ ದಿಕ್ಕಿನಲ್ಲಿ ಸಾಗುವ ಪ್ರಯತ್ನ. ಕದನ ವಿರಾಮ ಎಂಬುದು ತಾತ್ಕಾಲಿಕವಾದದ್ದಾಗಿರುತ್ತದೆ. ಎರಡು ಕಡೆಯವರು ಯಾವಾಗ ಬೇಕಾದರೂ ಯುದ್ಧ ಸಾರಬಹುದು. ದೀರ್ಘಕಾಲದವರೆಗೆ ಕದನ ವಿರಾಮ ಇದ್ದರೆ ವಿಶ್ವಾಸ ಹಾಗೂ ಶಾಂತಿಗೆ ಬಲ ಬರಲಿದೆ.

ಈ ಕದನ ವಿರಾಮ ಘೋಷಿಸುವ ಉದ್ದೇಶವೆಂದರೆ, ಘರ್ಷಣಾ ವಲಯದಿಂದ ಗಾಯಗೊಂಡ ಅಥವಾ ಅನಾರೋಗ್ಯ ಪೀಡಿತರನ್ನ ಸ್ಥಳಾಂತರ ಮಾಡುವುದಕ್ಕೆ, ಶಾಂತಿ ಮಾತುಕತೆಗಳನ್ನು ಪ್ರಾರಂಭಿಸಿ, ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ವಿರಾಮ ಘೋಷಿಸುತ್ತವೆ. ಅದರಲ್ಲೂ ಅಂತರಾಷ್ಟ್ರೀಯ ಸಂಸ್ಥೆ ಅಥವಾ ಬೇರೊಂದು ದೇಶವೂ ಯುದ್ಧ ಪ್ರಾರಂಭಿಸಿದ ಎರಡು ದೇಶಗಳು ಕದನ ವಿರಾಮ ಘೋಷಿಸುವಂತ ಒಪ್ಪಂದಕ್ಕೆ ಬರಲು ಸಹಾಯ ಮಾಡುತ್ತವೆ. ಪಾಕಿಸ್ತಾನದ ಮೇಲೆ ದಾಳಿ ನಡೆಸಿದ್ದ ಭಾರತ ಕದನ ವಿರಾಮ ಘೋಷಿಸಲು ಅಮೆರಿಕಾ ಮಧ್ಯಸ್ಥಿಕೆ ವಹಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...