ರಾಮನಗರ: ಸಿದ್ದರಾಮಯ್ಯ ನಂತರದಲ್ಲಿ ಸಿಎಂ ಆಗುವವರು ಡಿಕೆ ಶಿವಕುಮಾರ್ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆದ್ರೆ ಮತ್ತೊಂದು ಚುನಾವಣೆಗೆ ಕಾಯುವ ತಾಳ್ಮೆಗಿಂತ ಈ ಆಡಳಿತದಲ್ಲಿಯೇ ಡಿಸಿಎಂ, ಸಿಎಂ ಆಗುವ ಕಾತುರದಲ್ಲಿದ್ದಾರೆ. ಹೀಗಾಗಿಯೇ ಸಿಎಂ ಬದಲಾವಣೆ ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಬರುತ್ತಾ ಇರುತ್ತದೆ. ಆದರೆ ಸಾರ್ವಜನಿಕವಾಗಿ ನಾನು ಸಿಎಂ ಆಗಬೇಕು ಎಂಬುದನ್ನ ಡಿಕೆ ಶಿವಕುಮಾರ್ ಸಹ ಹೇಳಲ್ಲ. ಇದೀಗ ಇದೇ ಪ್ರಶ್ನೆಗೆ ಅವರ ಸಹೋದರ ಡಿಕೆ ಸುರೇಶ್ ಅವರು ಉತ್ತರಿಸಿದ್ದಾರೆ.
ಮಾಧ್ಯಮದವರು ಕೇಳಿದ ಸಿಎಂ ಬದಲಾವಣೆ ಪ್ರಶ್ನೆಗೆ ಉತ್ತರ ಕೊಟ್ಟಿದ್ದು ಹೀಗೆ, ಏನಿಲ್ಲ ಸದ್ಯಕ್ಕೆ. ಕಾಂಗ್ರೆಸ್ ಸರ್ಕಾರಕ್ಕೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಪಕ್ಷದಲ್ಲಿಯೇ ಶಾಸಕರು ಅಸಮಾಧಾನ ಹೊರ ಹಾಕಿರುವುದರ ಬಗ್ಗೆ ಮಾತನಾಡಿದ ಡಿಕೆ ಸುರೇಶ್ ಅವರು, ಅವರ ಪಕ್ಷದಲ್ಲಿಯೇ, ಅವರಲ್ಲಿಯೇ ಸಾಕಷ್ಟು ಗೊಂದಲಗಳು, ಸಮಸ್ಯೆಗಳು ಇದಾವೆ. ಇಂಥ ಸಂದರ್ಭದಲ್ಲಿ ಅವರು ಬೇರೆಯವರ ಮೇಲೆ ಬೊಟ್ಟು ಮಾಡುವಂಥದ್ದು ಎಷ್ಟು ಸರಿ ಅನ್ನೋದು ಬಹಳ ಪ್ರಮುಖವಾದ ವಿಚಾರ. ಅವರ್ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ. ಸರ್ಕಾರ ಹಾಗೂ ಪಕ್ಷ ಎರಡು ಕೂಡ ಸಮರ್ಥವಾಗಿದೆ. ಏನೇ ಸಮಸ್ಯೆ ಇದ್ದರು ಕೂಡ ಅದನ್ನು ನಿಭಾಯಿಸುತ್ತದೆ ಎಂದಿದ್ದಾರೆ.
ಇಂಥ ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರವಾಗುತ್ತದೆಯಾ ಎಂಬ ಪ್ರಶ್ನೆಗೆ, ಅವರು ಕೂಡ ಸಾರ್ವಜನಿಕ ಜೀವನದಲ್ಲಿ ಇದ್ದಾರೆ ಶಾಸಕರು. ಅವರ ಅಹವಾಲುಗಳನ್ನ ಸಹಾನುಭೂತಿಯಿಂದ ಪರಿಶೀಲನೆ ಮಾಡಬೇಕಿರುವುದು ಸಹ ಆಡಳಿತದಲ್ಲಿರುವ ಕರ್ತವ್ಯ. ಇವರು ಒತ್ತಡದಲ್ಲಿರ್ತಾರೆ ಅವರು ಸಮಸ್ಯೆಯಲ್ಲಿರ್ತಾರೆ. ಸರ್ಕಾರ ನಡೆಸುವವರು ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
















