Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿಮಾನ ದುರಂತದ ಬಗ್ಗೆ ಪೊಲೀಸ್ ಕಮಿಷನರ್ ಹೇಳಿದ್ದೇನು..?

---Advertisement---

ಅಹ್ಮದಾಬಾದ್; ಇಂದು ನಡೆದ ವಿಮಾನ ದುರಂತದಲ್ಲಿ ಪ್ರಯಾಣ ಮಾಡ್ತಾ ಇದ್ದ ಯಾರೊಬ್ಬರು ಜೀವಂತವಾಗಿ ಬದುಕಿ ಬರಲೇ ಇಲ್ಲ. ಸಿಬ್ಬಂದಿ ಸೇರಿ 242 ಮಂದಿಯೂ ಅಸು ನೀಗಿದ್ದಾರೆ. ಅದರಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಈ ದುರಂತದಲ್ಲಿ ಕೊನೆಯುಸಿರೆಳಿದಿದ್ದಾರೆ. ಇಂದಿನ ಈ ಕರಾಳ ದಿನಕ್ಕೆ ಎಲ್ಲರೂ ಕಂಬನಿ ಮಿಡಿದಿದ್ದಾರೆ. ಪ್ರಯಾಣಿಸುತ್ತಿದ್ದ ಅಷ್ಟು ಮಂದಿ ಸಾವನ್ನಪ್ಪಿರುವ ಬಗ್ಗೆ ಪೊಲೀಸರು ಅಧಿಕೃತ ಮಾಹಿತಿ ನೀಡಿದ್ದಾರೆ.

ಭೀಕರ ದುರಂತದಲ್ಲಿ ಯಾರೋಬ್ಬರು ಬದುಕುಳಿದಿರುವ ಸಾಧ್ಯತೆ ಇಲ್ಲ. ಜೊತೆಗೆ ಜನವಸತಿ ಹಾಗೂ ಕಚೇರಿಗಳು ಇರುವ ಸ್ಥಳದಲ್ಲಿ ವಿಮಾನ ಪತನವಾಗಿರುವ ಕಾರಣ ಸಾವು ನೋವು ಜನ್ನಷ್ಟು ಜಾಸ್ತಿಯಾಗಬಹುದು ಎಂದು ಪೊಲೀಸ್ ಕಮಿಷನರ್ ಜಿಎಸ್ ಮಲ್ಲಿಕ್ ಮಾಹಿತಿ ನೀಡಿದ್ದಾರೆ.

ಇನ್ನು ವಿಮಾನ ಪತನಕ್ಕೂ ಮುನ್ನ ಪೈಲೆಟ್ ತುರ್ತು ಕರೆ ಮಾಡಿದ್ದು, ಇದು ನನ್ನ ಕೊನೆಯ ಕರೆ. ನನ್ನಿಂದ ಏನು ಮಾಡಲು ಸಾಧ್ಯವಿಲ್ಲ. ಕ್ರ್ಯಾಶ್ ಲ್ಯಾಂಡಿಂಗ್ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಭಾರತದಲ್ಲಿ ಸಂಭವಿಸಿದ ಘೋರ ದುರಂತಗಳ ಸಾಲಿಗೆ ಇದು ಸೇರ್ಪಡೆಯಾಗುತ್ತಿದೆ. ಲಂಡನ್ ಕಡೆಗೆ ಪ್ರಯಾಣ ಬೆಳೆಸುವ ವಿಮಾನಕ್ಕೆ ಹೆಚ್ಚಿನ ಪ್ರಮಟಣದಲ್ಲಿ ಇಂಧನದ ಅಗತ್ಯತೆ ಇರುತ್ತದೆ. ಹೀಗಾಗಿ ಸುಮಾರು 58 ಸಾವಿರ ಲೀಟರ್ ಪೆಟ್ರೋಲ್ ತುಂಬಿಸಲಾಗಿತ್ತು. ಆದರೆ ಇಷ್ಟಮದು ಭಾರೀ ಪ್ರಮಾಣದಲ್ಲಿ ವೈಟ್ ಪೆಟ್ರೋಲ್ ತುಂಬಿಸಿದ್ದ ಏರ್ ಇಂಡಿಯಾದ ಲಂಡನ್ ವಿಮಾನ ಕೆಳಗೆ ಬಿದ್ದು ಬ್ಲಾಸ್ಟ್ ಆಗಿದೆ. ಒಂದೇ ಅಪಘಾತದಲ್ಲಿ 242 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಯಾರ್ಯಾರು ಎಲ್ಲಿನವರು ಎಂಬ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...