ಮೋಕ್ಷಿತಾ ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಮಗುವಿನ ಕಿಡ್ನ್ಯಾಪ್ ಕೇಸ್ ಒಂದು ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಟ್ಯೂಷನ್ ಮಾಡ್ತಾ ಇದ್ದಂತ ಮೋಕ್ಷಿತಾ ಅದೇ ಮಗುವನ್ನು ಹಣಕ್ಕಾಗಿ ಕಿಡ್ನ್ಯಾಪ್ ಮಾಡಿದ್ದರು ಎಂದು. ಇದೀಗ ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ಮೋಕ್ಷಿತಾಗೆ ಆ ಪ್ರಶ್ನೆ ಎದುರಾಗಿದ್ದು, ಅದಕ್ಕೆ ಉತ್ತರಿಸಿದ್ದಾರೆ. ನನ್ನ ಬಳಿ ಕೋರ್ಟ್ ಕಾಪಿ ಇದೆ. ಹೀಗಾಗಿ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದಿದ್ದಾರೆ.
ಬಿಗ್ ಬಾಸ್ ಮನೆಯೊಳಗಿದ್ದಾಗ ಈ ವಿಚಾರಕ್ಕೆ ಮೋಕ್ಷಿತಾ ಮನೆಯವರು ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಈಗ ಮೋಕ್ಷಿತಾ ಮಾತನಾಡಿದ್ದು, ಈಗಾಗಲೇ ನಿರಪರಾಧಿ ಎಂದು ಸಾಬೀತಾಗಿದೆ. ಆದರೆ ಅದೇ ವಿಚಾರವನ್ನ ತೆಗೆದುಕೊಂಡು ಟ್ರೋಲ್ ಮಾಡುತ್ತಾರೆ ಅಂದ್ರೆ ಏನು ಹೇಳೋಣಾ. ಈಗ ಅದು ಮುಗಿದು ಹೋಗಿರುವ ಅಧ್ಯಾಯ. ಮತ್ತೆ ಅದನ್ನೇ ಮಾತನಾಡಿ, ಅದನ್ನ ಕೆದಕುವುದು ಬೇಡ. ನಾನು ನಿರಪರಾಧಿ ಎಂದು ಪ್ರೂವ್ ಆದ ಮೇಲೆ ಪದೇ ಪದೇ ಅದೇ ವಿಚಾರ ಮಾತನಾಡುವುದಕ್ಕೆ ನನಗೆ ಇಷ್ಟವಿಲ್ಲ ಎಂದಿದ್ದಾರೆ.
ಪಾಪ ವೀವ್ಸ್ ಬರಲಿ ಅಂತ ಆ ರೀತಿ ಮಾಡಿದ್ದಾರೆ. ಅದಕ್ಕೆ ನಾನು ತೊಂದರೆ ಕೊಡುವುದಕ್ಕೆ ಹೋಗಲ್ಲ. ಬಿಗ್ ಬಾಸ್ ಮನೆಯಲ್ಲಿ ಇರುವಾಗ ಆ ವಿಚಾರ ಯಾಕೆ ಹೊರಗೆ ಬಂತು ಅನ್ನೋದು ನನಗೆ ಗೊತ್ತಿಲ್ಲ. ಆದರೆ ಆ ಸಮಯದಲ್ಲಿ ಅದು ಬಂದಿದ್ದು ನನಗೆ ಒಳ್ಳೆಯದೆ ಆಗಿದೆ. ಯಾರೂ ಏನೇ ಪಿತೂರಿ ಮಾಡಿದರು ನನ್ನ ಫ್ಯಾನ್ಸ್ ನನ್ನ ಪರವಾಗಿ ನಿಂತರು. ಅವರ ಸಪೋರ್ಟ್ ನನಗೆ ಇದೆ ಅನ್ನೋದು ತುಂಬಾನೇ ಖುಷಿ ಆಯ್ತು ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










