Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಎಂಎನ್ ಕುಮಾರ್ ಆರೋಪಕ್ಕೆ ಜಾಕ್ ಮಂಜು ಹೇಳಿದ್ದೇನು..?

---Advertisement---

 

ಬೆಂಗಳೂರು: ನಟ ಕಿಚ್ಚ ಸುದೀಪ್ ಬಗ್ಗೆ ನಿರ್ಮಾಪಕ ಎಂಎನ್ ಕುಮಾರ್ ಅವರು ಸರಣಿ ಆರೋಪ ಮಾಡಿದ್ದರು. ಮುಕುಂದ ಮುರಾರಿ ಸಿನಿಮಾ ಆದ್ಮೇಲೆ ಮುತ್ತತ್ತಿ ಸತ್ಯರಾಜು ಸಿನಿಮಾ ಮಾಡಿಕೊಡುವುದಾಗಿ ಒಪ್ಪಿಕೊಂಡು ಮಾಡಿಕೊಡಲಿಲ್ಲ. ಹಣ ಕೂಡ ಪೂರ್ತಿಯಾಗಿ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಈ ಆರೋಪಕ್ಕೆ ಇಂದು ಜಾಕ್ ಮಂಜು ಉತ್ತರ ನೀಡಿದ್ದಾರೆ.

ಇಂದಿ ಸುದ್ದಿಗೋಷ್ಟಿ ನಡೆಸಿದ ಜಾಕ್ ಮಂಜು, ನಟ ಸುದೀಪ್ ಅಭಿಮಾನಿಗಳಿಗೆ ನಾನೇ ಕ್ಲಾರಿಟಿ ಕೊಡ್ತೇನೆ. ಪಾರ್ಥ ಸಿನಿಮಾದಿಂದ ವಿಕ್ರಾಂತ್ ರೋಣದವರೆಗೂ ನಾನು ಸುದೀಪ್ ಜೊತೆಗೆ ಇದ್ದೇನೆ. ಅವೆ ಸಿನಿ ಜರ್ನಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಬೆಳೆದಿದ್ದಾರೆ.

ಇತ್ತಿಚೆಗೆ ಭಾಮಾ ಹರೀಶ್ ಸುದೀಪ್ ಅವರನ್ನು ಭೇಟಿಯಾಗಿದ್ದರು. ಎಂ ಎನ್ ಕುಮಾರ್ ಪತ್ರ ಕಳುಹಿಸಿದ್ದರು. ಅದಕ್ಕೆ ನಾವೂ ಉತ್ತರ ಕೊಟ್ಟಿದ್ದೇವೆ. ಆದರೂ ಕುಮಾರ್ ಅವರು, ಉತ್ತರ ಕೊಟ್ಟಿಲ್ಲ ಎಂದಿದ್ದಾರೆ. ಕುಮಾರ್ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಒತ್ತಡದಲ್ಲಿ ಅವರು ಮಾತನಾಡುವ ರೀತಿ ಬದಲಾಗಿದೆ. ಒಬ್ಬ ನಿರ್ದೇಶಕನನ್ನು ಸುದೀಪ್ ಆಯ್ಕೆ ಮಾಡಿದರು. ಆದರೆ ಆ ನಿರ್ದೇಶಕರು ಕೇಳಿದಷ್ಟು ಸಂಭಾವನೆ ನೀಡಲು ಕುಮಾರ್ ಒಪ್ಪಲಿಲ್ಲ. ಅನಾರೋಗ್ಯ, ಕೆಲಸದ ಒತ್ತಡ ಮುಂತಾದ ಕಾರಣಗಳಿಂದ ಕುಮಾರ್ ಅವರನ್ನು ಭೇಟಿಯಾಗಲು ಸುದೀಪ್ ಅವರಿಗೆ ಸಾಧ್ಯವಾಗಲಿಲ್ಲ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...