Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಹಿಳೆಯರ ಸಮಸ್ಯೆಗಳ ಮೂಲ ಅರಿಯದೆ, ಪರಿಹಾರ ಹುಡುಕುವುದು ಸಾಧ್ಯವಿಲ್ಲ : ಅಪರ್ಣ

---Advertisement---

ಸುದ್ದಿಒನ್, ಚಿತ್ರದುರ್ಗ, ಜೂನ್‌. 27 : ಇಂದು ಮಹಿಳಾ ಸಮಸ್ಯೆಗಳು ಸಾಮಾಜಿಕ ಸಮಸ್ಯೆಗಳಿಂದ ಹೊರತಾಗಿಲ್ಲ. ಆದ್ದರಿಂದ ಮಹಿಳಾ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಲು ಸಾಧ್ಯವಿಲ್ಲ ಎಂದು ಎಐಎಂಎಸ್‍ಎಸ್ ನ ಅಖಿಲ ಭಾರತ ಉಪಾಧ್ಯಕ್ಷರಲ್ಲಿ ಒಬ್ಬರಾದ ಅಪರ್ಣ ಬಿ ಆರ್ ರವರು ಹೇಳಿದರು.

ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆಯ ರಾಜ್ಯ ಸಮಿತಿಯ ವತಿಯಿಂದ, ಇಂದಿನಿಂದ ಮೂರುದಿನಗಳ (ಜೂನ್ 27, 28, 29, 2026 ) ರಾಜ್ಯ ಮಟ್ಟದ ಮಹಿಳಾ ಅಧ್ಯಯನ ಶಿಬಿರವನ್ನು ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿ ಎಂ.ಆರ್.ಟಿ ಕಣ್ಣಿನ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರೋಗ ಒಂದಕ್ಕೆ ಮದ್ದು ನೀಡುವಲ್ಲಿ ಆ ರೋಗದ ಮೂಲಕಾರಣ ತಿಳಿಯುವುದು ಎಷ್ಟು ಅವಶ್ಯಕವೋ, ಹಾಗೆಯೇ ಮಹಿಳೆಯರ ಸಮಸ್ಯೆಗಳ ಮೂಲ ಅರಿಯದೆ, ಮಹಿಳೆಯರ ಸಮಸ್ಯೆಗೆ ಪರಿಹಾರ ಹುಡುಕುವುದು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಈ ಶಿಬಿರದಲ್ಲಿ ತೆಗೆದುಕೊಂಡಿರುವ ವಿಷಯಗಳೆಲ್ಲವೂ ಬಹಳ ಪ್ರಮುಖವಾದವುಗಳು. ಎಐಎಂಎಸ್‍ಎಸ್ ಇಂತಹ ಅಧ್ಯಯನಗಳಿಗೆ ಪ್ರಾರಂಭದಿಂದಲೂ ಒತ್ತುಕೊಡುತ್ತ ಬಂದಿದೆ. ಇಂತಹ ಶಿಬಿರಗಳು ಮಹಿಳಾ ಸಂಘಟನಾಕಾರರನ್ನು ಗಟ್ಟಿಗೊಳಿಸುವಲ್ಲಿ ಅತ್ಯವಶ್ಯಕ” ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ, ಎಐಎಂಎಸ್‍ಎಸ್‍ನ ರಾಜ್ಯ ಕಾರ್ಯದರ್ಶಿಗಳಾದ ಶೋಭಾ ಎಸ್ ರವರು, “ಮಹಿಳಾ ಚಳುವಳಿಯಲ್ಲಿರುವ ಹೋರಾಟಗಾರ್ತಿಯರು ಮಹಿಳಾ ಸಮುದಾಯಕ್ಕೆ ಸರಿಯಾದ ವಿಚಾರಗಳನ್ನು ತಿಳಿಸಬೇಕಾದರೇ ಮಹಿಳೆಯರ ಸಮಸ್ಯೆಗಳ ಬಗ್ಗೆ ಆಳವಾಗಿ ತಿಳಿಯಬೇಕಿದೆ. ಆ ನಿಟ್ಟಿನಲ್ಲಿ ಸೈದ್ದಾಂತಿಕವಾಗಿ- ಸಂಘಟನಾತ್ಮಕವಾಗಿ ಬಲಗೊಳ್ಳಲು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಶಿಬಿರಾರ್ಥಿಗಳಿಗೆ ಕರೆನೀಡಿದರು.

ಇಂದಿನ ಪ್ರಥಮ ಘೋಷ್ಠಿಯನ್ನು ಮಹಾನ್ ಕಾದಂಬರಿಗಾರರಾದ ಥಾಮಸ್ ಹಾರ್ಡಿ ರವರ ಟೆಸ್ ಆಫ್ ದಿ ಡರ್ಬರ್ ವಿಲ್ ಎಂಬ ಕಾದಂಬರಿ ಕುರಿತು ಚರ್ಚಿಸಲಾಗುತ್ತಿದ್ದು, ಈ ಗೋಷ್ಠಿಯನ್ನು ಎಐಎಂಎಸ್‍ಎಸ್‍ನ ಅಖಿಲ ಭಾರತ ಉಪಾಧ್ಯಕ್ಷರಾದ ಡಾ. ಸುಧಾ ಕಾಮತ್ ರವರು ನಡೆಸಿಕೊಟ್ಟರು.
ಎರಡನೇ ದಿನದ ಶಿಬಿರದಲ್ಲಿ ಸ್ತ್ರೀವಾದ ಕುರಿತು ಚರ್ಚೆ ನಡೆಯಲಿದ್ದು, ಮೂರನೇ ದಿನ ಫೆಡ್ರಿಕ್ ಎಂಗಲ್ಸ್ ರವರ ಖಾಸಗಿ ಆಸ್ತಿ, ಕುಟುಂಬ ಮತ್ತು ರಾಜ್ಯದ ಉಗಮ ಎಂಬ ವಿಷಯದ ಕುರಿತು ಚರ್ಚೆ ನಡೆಯಲಿದೆ. ಶಿಬಿರದ ಮೂರು ದಿನಗಳಲ್ಲಿ ಮಹಿಳಾ ಚಳುವಳಿಯ ಸೂಕ್ತಿ ಮತ್ತು ಛಾಯಾಚಿತ್ರ ಪ್ರದರ್ಶನ, ಸಿನೆಮಾ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಕರ್ನಾಟಕದ 20 ಕ್ಕೂ ಹೆಚ್ಚು ಜಿಲ್ಲೆಗಳಿಂದ ಸಂಘಟನೆಯ ಮಹಿಳಾ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ಸಮಾಜದ ಹಳೆಯ ಊಳಿಗಮಾನ್ಯ ಪುರುಷ ಪ್ರಧಾನ ಮೌಲ್ಯಗಳು ಮಹಿಳೆಯರನ್ನು ಇಂದಿಗೂ ಮುಂದೆ ಹೋಗದಂತೆ ತಡೆದು ನಿಲ್ಲಿಸುತ್ತಿವೆ. ಇಂದು ಎಲ್ಲಾ ಕ್ಷೇತ್ರಗಳಲ್ಲೂ ಹೆಚ್ಚುತ್ತಿರುವ ಸಮಸ್ಯೆಗಳು, ಬಿಕ್ಕಟ್ಟು ಮಹಿಳೆಯರನ್ನು ಹೊರತುಪಡಿಸಿಲ್ಲ. ಮಾಧ್ಯಮಗಳ ಮೂಲಕ ಹಬ್ಬುತ್ತಿರುವ ಕೀಳು ಅಭಿರುಚಿ, ಹಿಂಸೆ, ಕ್ರೌರ್ಯ ಜೊತೆಗೆ ಮದ್ಯ-ಮಾದಕ ವಸ್ತುಗಳು ವಿದ್ಯಾರ್ಥಿ-ಯುವಜನತೆಯಲ್ಲಿ ವಿಕೃತ ಮನೋಭಾವನೆಯನ್ನು ಬೆಳೆಸುತ್ತಿವೆ. ಸಮಾಜದ ಸಾಂಸ್ಕೃತಿಕ, ನೈತಿಕ ಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಇದರಿಂದಾಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಮೇಲಿನ ಅತ್ಯಾಚಾರ, ದೌರ್ಜನ್ಯಗಳು ದಿಗ್ಧಮೆಗೊಳಿಸುವಷ್ಟು ಹೆಚ್ಚುತ್ತಿವೆ. ಇಂತಹ ಪರಿಸ್ಥಿತಿಯ ವಿರುದ್ಧ ಇಡೀ ಮಹಿಳಾ ಸಮುದಾಯ ಎದ್ದು ನಿಲ್ಲಬೇಕಾಗಿದೆ. ಇತಿಹಾಸವನ್ನೂ ಅರ್ಥೈಸಿಕೊಳ್ಳುತ್ತಾ ಪ್ರಸ್ತುತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಸಮಾಜ ಬದಲಾವಣೆಯ ಮಹತ್ಕಾರ್ಯವನ್ನು ಮುನ್ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರನ್ನು ವೈಚಾರಿಕವಾಗಿ ಮತ್ತು ಸಂಘಟನಾತ್ಮಕವಾಗಿ ಸಜ್ಜುಗೊಳಿಸಲು ಈ ರಾಜ್ಯ ಮಟ್ಟದ ಮಹಿಳಾ ಕಾರ್ಯಕರ್ತರ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಉದ್ಘಾಟನಾ ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಉಪಾಧ್ಯಕ್ಷರಲ್ಲಿ ಒಬ್ಬರಾದ ಸೀಮಾ ಜಿಎಸ್ ವಹಿಸಿದ್ದರು. ಎಐಎಂಎಸ್‍ಎಸ್‍ನ ರಾಜ್ಯ ಅಧ್ಯಕ್ಷರಾದ ಮಂಜುಳಾ ಎನ್, ಮತ್ತೋರ್ವ ಉಪಾಧ್ಯಕ್ಷರಾದ ಹರಿಣಿ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now