Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಿವೇದಿತಾಗೆ ಯಾರದ್ದೊ ಜೊತೆ ಸಂಬಂಧವಿದೆ ಎಂದಿದ್ದ ಸಂಬರ್ಗಿ ಮಾತಿಗೆ ಚಂದನ್ ಶೆಟ್ಟಿ ಹೇಳಿದ್ದೇನು..?

---Advertisement---

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ಪಡೆದುಕೊಂಡ ಮೇಲೆ ಪ್ರಶಾಂತ್ ಸಂಬರ್ಗಿ ಪ್ರತಿಕ್ರಿಯೆ ನೀಡಿದ್ದರು. ಹೈದ್ರಬಾದ್ ನಲ್ಲಿ ನೋಡಬಾರದ್ದು ನೋಡಿದೆ ಎಂದಿದ್ದರು. ಅದನ್ನ ಚಂದನ್ ಶೆಟ್ಟಿಗೂ ಹೇಳಿದ್ದೆ, ಸ್ವಿಫ್ಟ್ ಕಾರು ಬಿಟ್ಟು ಬೇರೆ ಕಾರಿನ ಹಿಂದೆ ಹೋದರೆ ಏನು ಮಾಡುವುದಕ್ಕೆ ಆಗುತ್ತೆ ಅಂತ ನಿವೇದಿತಾ ಗೌಡ ಅವರ ಕ್ಯಾರೆಕ್ಟರ್ ಬಗ್ಗೆಯೇ ಮಾತನಾಡಿದ್ದರು. ಈ ಬಗ್ಗೆ ಚಂದನ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ಪ್ರಶಾಂತ್ ಸಂಬರ್ಗಿಗೆ ತಿರುಗೇಟು ನೀಡಿದ್ದಾರೆ.

‘ಹೈದ್ರಾಬಾದ್ ನಲ್ಲಿ ಒಬ್ಬ ಹುಡುಗನ ನಡುವೆ ಸಂಬಂಧ ಇದೆ ಎಂದು ಹೇಳಿದ್ದೆ ಅಂತಾರೆ. ಆದರೆ ಅವರ ಮತ್ತು ನನ್ನ ನಡುವೆ ಯಾವುದೇ ಮಾತುಕತೆ ಆಗಿಲ್ಲ. ಬೇರೆಯವರ ಸಂಸಾರದ ನಡುವೆ ಅವರಿಗೇನು ಸಂಬಂಧವಿದೆ ಎಂಬುದು ಗೊತ್ತಿಲ್ಲ. ಅವರು ಯಾಕೆ ಈ ರೀತಿ ಮಾತಾನಾಡಿದರು ಎಂಬುದು ಗೊತ್ತಿಲ್ಲ. ಅವರು ನನ್ನ ಜೊತೆ ಸಿನಿಮಾದಲ್ಲಿ ನಟಿಸಿದ್ದಾರೆ ಅಷ್ಟೇ.

ನಮ್ಮ ಡಿವೋರ್ಸ್ ಬಗ್ಗೆ ನಮ್ಮ ಕುಟುಂಬಸ್ಥರ ನಡುವೆ ಚರ್ಚೆ ಮಾಡಿದಾಗ ನೀವಿಬ್ಬರು ಬುದ್ದಿವಂತರು. ನಿಮಗೆ ಹೇಗೆ ಅನ್ನಿಸುತ್ತೋ ಆ ರೀತಿಯ ನಿರ್ಧಾರ ತೆಗೆದುಕೊಳ್ಳಿ ಎಂದಿದ್ದರು. ನಮ್ಮ ಪೋಷಕರೇ ಈ ರೀತಿ ಸಪೋರ್ಟ್ ಮಾಡುವಾಗ, ಆ. ವ್ಯಕ್ತಿ ಯಾಕೆ ಆ ರೀತಿ ಮಾತನಾಡಿದರು ಗೊತ್ತಿಲ್ಲ. ಇವತ್ತು ನಾವಿಬ್ಬರು ಒಪ್ಪಿಯೇ ಡಿವೋರ್ಸ್ ಪಡೆದಿದ್ದೇವೆ. ನಮ್ಮಿಬ್ಬರ ನಡುವೆ ಮಕ್ಕಳ ವಿಚಾರಕ್ಕೆ ಆಗಲಿ, ಇನ್ಯಾವುದೇ ವಿಚಾರಕ್ಕೆ ಆಗಲಿ ಡಿವೋರ್ಸ್ ಆಗಿಲ್ಲ. ನಿವೇದಿತಾ ಅವರಿಗೂ ಸಿನಿಮಾಗಳಿವೆ, ನನಗೂ ಸಿನಿಮಾದ ಕೆಲಸಗಳಿದಾವೆ. ಹೀಗಾಗಿ ಒಪ್ಪಿನೆ ನಿರ್ಧಾರರಕ್ಕೆ ಬಂದಿದ್ದೀವಿ’ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...