Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸ್ಯಾಂಡಲ್ ವುಡ್ ನಲ್ಲಿ ಮದುವೆ ವಾರ್ಷಿಕೋತ್ಸವದ ಸಂಭ್ರಮ ; ಶಿವಣ್ಣ ದಂಪತಿ, ದರ್ಶನ್ ದಂಪತಿಗೆ ಶುಭ ಹಾರೈಕೆ..!

---Advertisement---

ಇಂದು ಸ್ಯಾಂಡಲ್ ವುಡ್‌ ನಲ್ಲಿ ಡಬ್ಬಲ್ ವಿವಾಹ ವಾರ್ಷಿಕೋತ್ಸವದ ಸಂಭ್ರಮ ಜೋರಾಗಿದೆ. ಅಭಿಮಾನಿಗಳು, ಚಿತ್ರರಂಗದವರು ಸೇರಿ ದಂಪತಿಗಳಿವೆ ಶುಭ ಕೋರುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಶಿವಣ್ಣ ಎಂದರೆ ಎಲ್ಲರಿಗೂ ಪ್ರೀತೊ, ಗೌರವ. ಇಂದು ಈ ದಂಪತಿಯ ವಿವಾಹ ವಾರ್ಷಿಕೋತ್ಸವ. 1986ರ ಮೇ 19ರಂದು ನವ ದಾಂಪತ್ಯಕ್ಕೆ ಕಾಲಿಟ್ಟರು. ಇಂದಿಗೆ 39ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

ಅಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಅಂದಿನ ದಿನವೇ ಸಂಜೆ ಅದ್ದೂರಿಯಾಗಿ ರಿಸೆಪ್ಶನ್ ನಡೆದಿತ್ತು. ತಮಿಳು ನಟ ಕಮಲ್ ಹಾಸನ್, ಎಂಜಿಆರ್ ಸೇರಿದಂತೆ ಅನೇಕ ಕಲಾವಿದರು ಬಂದು ನವ ದಂಪತಿಗೆ ಶುಭ ಹಾರೈಸಿದ್ದರು. ಡಾ.ರಾಜ್‍ಕುಮಾರ್ ಹಾಗೂ ಪಾರ್ವತಮ್ಮ ಅವರು ಒಪ್ಪಿ ಮಾಡಿಕೊಟ್ಟ ಮದುವೆ ಇದಾಗಿತ್ತು. ಇಂದು ಕನ್ನಡ ಚಿತ್ರರಂಗದ ಪ್ರೀತಿಯ ದಂಪತಿಗೆ ಎಲ್ಲರಿಂದಾನೂ ಶುಭಾಶಯಗಳ ಸುರಿಮಳೆ ಹರಿದು ಬರುತ್ತಿದೆ.

ಅತ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ದಂಪತಿಗೂ ವಿವಾಹ ವಾರ್ಷಿಕೋತ್ಸವದ ಸಂಭ್ರಮ ಇದೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 22 ವರ್ಷ. ರಾತ್ರಿಯೇ ಅವರ ಆತ್ಮೀಯರೆಲ್ಲ ಒಟ್ಟಿಗೆ ಸೇರಿ ಅದ್ದೂರಿಯಾಗಿ ವಿವಾಹ ವಾರ್ಷಿಕೋತ್ಸವವನ್ನ ಸೆಲೆಬ್ರೇಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಜಯಲಕ್ಷ್ಮಿ ಕೂಡ ಫೋಟೋ ಹಾಕಿದ್ದು, ಶಾಶ್ವತ ಬಂಧನ ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳೆಲ್ಲ ನಾನ ಮುಂದು, ತಾ ಮುಂದು ಅಂತ ದರ್ಶನ್ ಹಾಗೂ ವಿಜಯಲಕ್ಷ್ಮಿ ಫೋಟೋ ಹಾಕುವ ಮೂಲಕ ಶುಭ ಕೋರುತ್ತಿದ್ದಾರೆ. ಅಣ್ಣ, ಅತ್ತಿಗೆ ಯಾವಾಗಲೂ ಹೀಗೆ ನಗುತ್ತಾ ನಗುತ್ತಾ ಇರಿ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment