ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 21 : ಕುಂಚಿಗ ವೀರಶೈವ ಲಿಂಗಾಯಿತ ಸಮಾಜ ಹಾಗೂ ಉತ್ಥಾನ ಟ್ರಸ್ಟ್(ರಿ) ವತಿಯಿಂದ ಆ.22 ರ ಇಂದು ಬೆಳಿಗ್ಗೆ 10-40 ಕ್ಕೆ ನೀಲಕಂಠೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ.
ಕುಂಚಿಗ ವೀರಶೈವ ಲಿಂಗಾಯಿತ ಸಮಾಜದ ಅಧ್ಯಕ್ಷರಾದ ಎಂ.ಬಿ.ತಿಪ್ಪೇರುದ್ರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಪಿ.ರಮೇಶ್, ಕುಂಚಿಗ ವೀರಶೈವ ಲಿಂಗಾಯಿತ ಸಮಾಜದ ಉಪಾಧ್ಯಕ್ಷರಾದ ಜಿ.ಆರ್.ಕೃಷ್ಣಮೂರ್ತಿ, ಕಾರ್ಯದರ್ಶಿ ಹೆಚ್.ಕುಬೇರಪ್ಪ ದಗ್ಗೆ, ಖಜಾಂಚಿ ಕೆ.ಹೆಚ್.ಮುರುಗೇಶಗೌಡ್ರು, ನಿರ್ದೇಶಕರುಗಳಾದ ಎಸ್.ಬಸವರಾಜಪ್ಪ, ಎಲ್.ಬಿ.ರಾಜಶೇಖರಪ್ಪ, ಹೆಚ್.ಎಸ್.ಸಿದ್ದರಾಮಸ್ವಾಮಿ, ಸೌಮ್ಯ ಶಂಕರ್,
ಯು.ಪಾರ್ವತಮ್ಮ, ಎನ್.ಎಸ್.ಲವಕುಮಾರ್, ಎಸ್.ಗುರುಸಿದ್ದಪ್ಪ, ಐ.ಸಿ.ರಂಗಪ್ಪ, ಬಿ.ಟಿ.ವಿಶ್ವನಾಥ್, ಡಿ.ಆರ್.ಮಂಜುನಾಥ್, ಮಧುಕೇರ್ ನಾಡಿಗ್, ಹೆಚ್.ಎಂ.ರಾಮಸ್ವಾಮಿ ಇವರುಗಳು ಪಾಲ್ಗೊಳ್ಳಲಿದ್ದಾರೆಂದು ಕುಂಚಿಗ ವೀರಶೈವ ಲಿಂಗಾಯಿತ ಸಮಾಜ ಪ್ರಕಟಣೆಯಲ್ಲಿ ತಿಳಿಸಿದೆ.









