Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವೀರೇಂದ್ರ ಹೆಗ್ಡೆಯವರ ಜೊತೆಗೆ ನಾವಿದ್ದೇವೆ : ನಿಖಿಲ್ ಕುಮಾರಸ್ವಾಮಿ

---Advertisement---

ಬೆಂಗಳೂರು: ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಧರ್ಮಸ್ಥಳದ ಬಗ್ಗೆ ಮಾತನಾಡಿದ್ದಾರೆ. ವೀರೇಂದ್ರ ಹೆಗ್ಗಡೆಯವರ ಜೊತೆಗೆ ನಾವಿದ್ದೇವೆ ಎಂದಿದ್ದಾರೆ.

ಕಳೆದ ಹಲವಾರು ದಿನಗಳಿಂದ ಧರ್ಮಸ್ಥಳದ ಶ್ರೀಜ್ಷೇತ್ರದ ಬಗ್ಗೆ, ಆಗಿರುವಂತ ಅಪಮಾನ ಹಾಗೂ ಹಲವಾರು ಅನುಮಾನಗಳಿಗೆ ಎಡೆ ಮಾಡಿ ಕೊಡುವಂತದ್ದಕ್ಕೆ. ಸರ್ಕಾರ ತನ್ನ ಹೆಜ್ಜೆಯನ್ನ ಯಾವ ರೀತಿ ಇಟ್ಟುದೆ ಅನ್ನೋದನ್ನ ನೋಡಿಕೊಂಡು ಬಂದಿದ್ದೇವೆ. ಎಸ್ಐಟಿ ಧರ್ಮಸ್ಥಳದ ವಿಚಾರವಾಗಿ ತರಾತುರಿಯಲಗಲಿ, ಬಹಳ ಉತ್ಸಾಹಕತೆಯಿಂದ, ಬೇರೆ ಪ್ರಕರಣದಲ್ಲೂ ತರಾತುರಿಯಲ್ಲಿ ಎಸ್ಐಟಿ ರಚನೆ ಮಾಡಿದ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದಿದೆ.

ಧರ್ಮಸ್ಥಳದ ವಿಚಾರವಾಗಿ ಒಂದು ಸಂಘಟಿತ ಮತ್ತು ವ್ಯವಸ್ಥಿತವಾದ ಪಿತೂರಿ ಮುನ್ನಲೆಗೆ ಬಂದಿರುವಂತದ್ದು, ಎಸ್ಐಟಿ ರಚನೆಯಾದ ನಂತರ. ಮೊದಲನೇಯದಾಗಿ ಎಸ್ಐಟಿ ಯಾತಕ್ಕೋಸ್ಕರ ರಚನೆ ಆಯ್ತು ಅನ್ನೋದು ನಮ್ಮೆಲ್ಲರನ್ನು ಕಾಡ್ತಾ ಇದೆ. ಅನಾಮಧೇಯ ವ್ಯಕ್ತಿ ಬಂದು, ಒಂದು ಬುರುಡೆ ಇದೆ. ಮಾಸ್ ಮರ್ಡರ್ ಗಳು ಅಲ್ಲಿ ನಡೆದಿವೆ ಎಂದು ಹೇಳಿದ ಕೂಡಲೇ ಎಸ್ಐಟಿ ರಚನೆ ಮಾಡ್ತಾರೆ. ಸರ್ಕಾರ ಯಾರೋ ಒಬ್ಬ ಇಬ್ಬ ಕೊಟ್ಟಂತ ದೂರಿನ‌ ಮೇಲೆ ಧರ್ಮಸ್ಥಳ ಸುಮಾರು 700-800 ವರ್ಷದ ಇತಿಹಾಸವುಳ್ಳ ಧರ್ಮಸ್ಥಳ. ಅಸಂಖ್ಯಾತ ಭಕ್ತರು. ನಾವೂ ಅದನ್ನ ಲೆಕ್ಕ ಮಾಡುವುದಕ್ಕೂ ಆಗಲ್ಲ. ಆ ಭಕ್ತರಲ್ಲಿ ನಾನು ಕೂಡ ಒಬ್ಬ.

ಇದರ ಹಿಂದೆ ದೊಡ್ಡ ಪಿತೂರಿಯೇ ಅಡಗಿದೆ ಅನ್ನೋದು ಎಲ್ಲರನ್ನು ಕಾಡುತ್ತಿದೆ. ಧರ್ಮಸ್ಥಳದ ಧರ್ಮಾಧಿಕಾರಿಯಾಗಿರುವ ವೀರೇಂದ್ರ ಹೆಗ್ಡೆ ಹಾಗೂ ಅವರ ಕುಟುಂಬ ಕಳೆದ ಒಂದೂವರೆ ತಿಂಗಳಿನಿಂದ ನೋವಾದರೂ ಕೂಡ, ತಾಳ್ಮೆಯಿಂದ, ಗೌರವಯುತವಾಗಿ ನಡೆದುಕೊಂಡಿರುವುದನ್ನ ನಾವೆಲ್ಲಾ ಗೌರವಿಸಬೇಕು. ಅವರ ಜೊತೆಗೆ ನಾವೂ ಸದಾ ಇರ್ತೇವೆ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment