Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಪರಮೇಶ್ವರ್ ಸಿಎಂ ಆದ್ರೆ ನಮಗೂ ಖುಷಿ : ಬಿಜೆಪಿ ಶಾಸಕ ಸುರೇಶ್ ಗೌಡರ ಮನದಾಳದ ಮಾತು

---Advertisement---

 

ತುಮಕೂರು: ಕಾಂಗ್ರೆಸ್ ನಲ್ಲಿ ಸಿಎಂ ಖುರ್ಚಿಯ ವಿಚಾರವೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಿದ್ದರಾಮಯ್ಯ ನಂತರ ಡಿಕೆ ಶಿವಕುಮಾರ್ ಸಿಎಂ ಖುರ್ಚಿಗಾಗಿ ಕಾಯ್ತಾ ಇದ್ದಾರೆ. ಇತ್ತ ಜಿ ಪರಮೇಶ್ವರ್ ಕೂಡ ಸಿಎಂ ಕನಸು ಕಂಡಿದ್ದಾರೆ. ಈ ಬಗ್ಗೆ ಇದೀಗ ಬಿಜೆಪಿ ಶಾಸಕ ಬಿ.ಸುರೇಶ್ ಗೌಡ ಅವರು, ಪರಮೇಶ್ವರ್ ಪರ ಬ್ಯಾಟ್ ಬೀಸಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಸುರೇಶ್ ಗೌಡ ಅವರು, ಇದು ಕಾಂಗ್ರೆಸ್ ಹೈಕಮಾಂಡ್ ಗೆ ಬಿಟ್ಟಂತ ವಿಚಾರ. ಈಗಾಗಲೇ ಸಿದ್ದರಾಮಯ್ಯ ವರ್ಸಸ್ ಡಿಕೆ ಶಿವಕುಮಾರ್ ಯುದ್ಧ ನಡೆದು ಆಡಳಿತ ಕುಸಿದು ಬಿದ್ದೋಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಈ ಬಿಟ್ಟಿ ಭಾಗ್ಯಗಳಿಂದ ಒಂದು ರೂಪಾಯಿ ಅಭಿವೃದ್ಧಿ ಕೆಲಸವಾಗಿಲ್ಲ. ಇವತ್ತು ಗಟ್ಟಿಯಾಗಿ ಡಿಕೆ ಶಿವಕುಮಾರ್ ಅವರನ್ನು ಇಳಿಸಲೇಬೇಕು ಅಂತ ಕೂತವ್ರೆ. ಅದಕ್ಕೆ ಖರ್ಗೆ ಅವರು ಮಧ್ಯಪ್ರವೇಶ ಮಾಡಿದ್ದಾರೆ. ನನಗೂ ಕೂಡ ಅನ್ಯಾಯವಾಗಿದೆ. ಎಸ್ ಎಂ ಕೃಷ್ಣ ಕಾಲದಲ್ಲಿ ನಾನು ಸರ್ಕಾರ ತಂದೆ. ಆದರೆ ನಾನು ಮುಖ್ಯಮಂತ್ರಿ ಆಗೋದಕ್ಕೆ ಆಗ್ಲಿಲ್ಲ ಅಂತ.

ಎಂಟು ಬಾರಿ ಶಾಸಕನಾಗಿ, ಪಾರ್ಲಿಮೆಂಟ್ ಸದಸ್ಯನಾದರೂ ನನಗೆ ಆ ಅವಕಾಶ ಸಿಕ್ಕಿಲ್ಲ. ಸಿಕ್ಕರೆ ನಾನು ಸಿಎಂ ಆಗ್ತೇನೆ ಎಂದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಆಗ್ತಾರೋ ಪರಮೇಶ್ವರ್ ಅವರು ಆಗ್ತಾರೋ ಗೊತ್ತಿಲ್ಲ. ಸ್ವಾಮೀಜಿಗಳು ಅವರವರ ಅಭಿಪ್ರಾಯಗಳನ್ನ ಹೇಳ್ತಾರೆ. ಸ್ವಾಮೀಜಿಯವರು ಅಭಿಪ್ರಾಯ ಹೇಳಿದ ಕೂಡಲೆ ಆಗುತ್ತಾ. ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಿದ್ರೆ ಆಗುತ್ತೆ. ಪರಮೇಶ್ವರ್ ಅವರು ನಮ್ಮ ಜಿಲ್ಲೆಯವರು. ಸಜ್ಜನ ರಾಜಕಾರಣಿಗಳು. ಜಿಲ್ಲೆಯಲ್ಲಿ ಎಲ್ಲರನ್ನು ಪ್ರೀತಿ ಮಾಡ್ತಾರೆ, ಯಾರ ಮೇಲೂ ದ್ವೇಷಿಸಲ್ಲ‌ ಎಷ್ಟೇ ಶ್ರೀಮಂತಿಕೆ ಇದ್ದರು ಎಲ್ಲರನ್ನು ಪ್ರೀತಿ ಮಾಡ್ತಾರೆ. ಅವರು ಸಿಎಂ ಆದ್ರೆ ತುಮಕೂರು ಜಿಲ್ಲೆ ಅಭಿವೃದ್ಧಿಯಾಗುತ್ತೆ ಎಂದಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...