ಬಾಗಲಕೋಟೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾತಿಗೆ ಮುಂಚೆ ಬಿ ಎಸ್ ಯಡಿಯೂರಪ್ಪ ಅವರ ಫ್ಯಾಮಿಲಿ ಮೇಲೆ ಕೆಂಡಕಾರ್ತಾರೆ. ಯಡಿಯೂರಪ್ಪ ಅವರ ಮೇಲೆ ಮಾತ್ರವಲ್ಲ, ವಿಜಯೇಂದ್ರ ಅವರ ಮೇಲೂ ಕೆಂಡ ಕಾರುತ್ತಾ ಇರುತ್ತಾರೆ. ಅವರನ್ನ ರಾಜ್ಯಾಧ್ಯಕ್ಷರನ್ನಾಗಿ ಮಾಡಿರೋದರ ಯತ್ನಾಳ್ ಅವರಿಗೆ ಇಷ್ಟ ಇಲ್ಲ. ಅದನ್ನ ಅವರು ಕೂಡ ಬಹಿರಂಗವಾಗಿಯೇ ತಿಳಿಸಿದ್ದಾರೆ. ಯತ್ನಾಳ್ ಅವರ ಈ ರೀತಿಯ ಮಾತುಗಳಿಂದಾನೇ ಪಕ್ಷದಿಂದ ದೂರ ಉಳಿಯುವಂತೆ ಆಗಿದೆ. ಆದರೆ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರರಿಂದ ಈ ರೀತಿಯ ಮಾತುಗಳು ಬಂದಿಲ್ಲ. ಪಕ್ಷಕ್ಕಾಗಿ ಅವರಾಡಿದ ಮಾತು,ಕಾಡುದ ದ್ವೇಷವನ್ನು ಮರೆತು ಪ್ರಚಾರಕ್ಕೆ ಬರಲಿ ಎಂದಿದ್ದಾರೆ.
ಬಾಗಲಕೋಟೆಯಲ್ಲಿ ಮಾತನ್ನಾಡುತ್ತಾ, ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯನ್ನ ಗೆಲ್ಲಿಸಬೇಕು ಅಂತ ಹೇಳಿ ಕಾಂಗ್ರೆಸ್ ಪಕ್ಷದವರು ಕೆಲಸ ಮಾಡ್ತಾ ಇದ್ದಾರೆ. ಎರಡು ಕ್ಷೇತ್ರದಲ್ಲೂ ಇದೆ. ನಾನು ಉಡಾಫೆಯಾಗಿ ಮಾತನ್ನಾಡ್ತಾ ಇಲ್ಲ, ಪ್ರಾಮಾಣಿಕವಾಗಿ ಹೇಳ್ತಾ ಇದ್ದೇನೆ. ಹಂಗೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಅಂತ ಯಾರೇ ಕೆಲಸ ಮಾಡಿದರು ಅದನ್ನ ನಾನು ಸ್ವಾಗತ ಮಾಡ್ತೇನೆ ಎಂದು ಹೃಳುವ ಮೂಲಕ ಯತ್ನಾಳ್ ಅವರನ್ನು ಸ್ವಾಗತಿಸಿದ್ದಾರೆ.

ಇದೇ ವೇಳೆ ಎಂಬಿ ಪಾಟೀಲ್ ಅವರು ಬಿಜೆಪಿ ಬಗ್ಗೆ ಇಪ್ಪತ್ತು ಬಾಗಿಲುಗಳಾಗಿವೆ ಎಂದು ಮಾತನ್ನಾಡಿದರ ಬಗ್ಗೆ, ಮೊದಲು ಚುನಾವಣಾ ಫಲಿತಾಂಶ ಬರಲಿ ಕಾಂಗ್ರೆಸ್ ಪಕ್ಷದಲ್ಲಿ ಎಷ್ಟು ಬಾಗಿಲುಗಳಿವರ, ಬಿಜೆಪಿಯಲ್ಲಿ ಎಷ್ಟು ಬಾಗಿಲುಗಳಿವೆ ಅನ್ನೋದು ಅವರಿಗೇನೆ ತಿಳಿಯುತ್ತದೆ ಎಂದಿದ್ದಾರೆ. ಬಾಗಲಕೋಟೆಯ ಬಿಜೆಪಿ ಅಭ್ಯರ್ಥಿ ಪರ ವಿಜಯೇಂದ್ರ ಅವರು ಪ್ರಚಾರಕ್ಕೆ ಇಳಿದಿದ್ದಾರೆ. ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕೆಂದು ಹಠ ತೊಟ್ಟಿದ್ದಾರೆ.
















