Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶೆಲ್ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ – ಡಿಸೇಲ್ ದರ ಏರಿಕೆ : ಎಷ್ಟಿದೆ ಇಂದು..?

---Advertisement---

ಬೆಂಗಳೂರು: ಕೆಲವೊಂದು ಸಲ ಪರಿಸ್ಥಿತಿಗೆ ಅನುಗುಣವಾಗಿ ಪೆಟ್ರೋಲ್ – ಡಿಸೇಲ್ ದರ ಏರಿಕೆಯಾಗದೆ ಹೋದರು ವದಂತಿಗಳಿಂದ ಏರಿಕೆಯಾಗಿ ಬಿಡುತ್ತದೆ. ಈಗ ಪೆಟ್ರೋಲ್ – ಡಿಸೇಲ್ ದರ ಹಾಗೇ ಆಗಿರೋದು. ಗ್ಯಾಸ್ ಸಮಸ್ಯೆ ಇರೋದು ಎಲ್ಲರ ಅನುಭವಕ್ಕೂ ಬಂದಿದೆ. ಆದರೆ ಪೆಟ್ರೋಲ್ – ಡಿಸೇಲ್ ಸಮಸ್ಯೆ ಆಗಿರಲಿಲ್ಲ. ಆದರೂ ಶೆಲ್ ನಲ್ಲಿ ದರ ಏರಿಕೆಯಾಗಿದೆ. ಇದರಿಂದ ಗ್ರಾಹಕರಿಗಂತು ದೊಡ್ಡ ಮಟ್ಟದ ಹೊರೆಯಾಗಲಿದೆ. ಹಾಗಾದ್ರೆ ಎಷ್ಟು ರೂಪಾಯಿ ದರ ಏರಿಕೆ ಮಾಡಿದ್ದಾರೆ ಅನ್ನೋದನ್ನ ನೋಡೋದಾದ್ರೆ,

ಶೆಲ್ ಪೆಟ್ರೋಲ್ ಬಂಕ್ ಗಳಲ್ಲಿ ಇದೇ ಮೊದಲ ಬಾರಿಗೆ ದರ ಹೆಚ್ಚಳ ಮಾಡಿರೋದಲ್ಲ, ಕಳೆದ 15 ದಿನದಲ್ಲಿ 3 ನೇ ಬಾರಿಗೆ ದರ ಏರಿಕೆಯನ್ನ ಮಾಡಿಕೊಂಡಿದೆ. ಪ್ರೀಮಿಯಂ ಜೊತೆಗೆ ಸಾಮಾನ್ಯ ತೈಲ ದರವೂ ಏರಿಕೆಯಾಗಿದೆ. ಕಡಿಮೆ ಏನು ಅಲ್ಲ ದಿಢೀರನೆ ಒಂದು ಲೀಟರ್ ಪೆಟ್ರೋಲ್ ಗೆ ಸುಮಾರು 6 ರೂಪಾಯಿ ಏರಿಕೆ ಮಾಡಿದೆ. ಡಿಸೇಲ್ ಗೆ ಲೀಟರ್ ಗೆ 7 ರೂಪಾಯಿ ಹೆಚ್ಚು ಮಾಡಿದೆ.‌

ಈ ಮೂಲಕ 106 ರೂಪಾಯಿ ಇದ್ದ ಸಾಮಾನ್ಯ ಪೆಟ್ರೋಲ್ ದರ 112 ರೂಪಾಯಿಗೆ ಮಾರಾಟವಾಗ್ತಾ ಇದೆ. ಸರ್ಕಾರಿ ಸ್ವಾಮ್ಯದ ಬಂಕ್ ಗಳಿಗಿಂತ ಶೆಲ್ ಪೆಟ್ರೋಲ್ ಬಂಕ್ ನಲ್ಲಿ ಸಾಮಾನ್ಯವಾಗಿಯೇ ಹೆಚ್ಚು ಇರುತ್ತದೆ. ಈಗ ಮತ್ತೆ ಬೆಲೆ ಏರಿಕೆಯಾಗಿದೆ. ಆದರೆ ಶೆಲ್ ಪೆಟ್ರೋಲ್ ಬಂಕ್ ದರ ಏರಿಕೆ ನೋಡಿ ಸಾಮಾನ್ಯ ಪೆಟ್ರೋಲ್ ಬಂಕ್ ಗಳು ದರ ಏರಿಕೆ ಮಾಡಿದರೆ ವಾಹನ ಚಾಲಕರು, ಅದರಲ್ಲಿಯೇ ದುಡಿಮೆ ಮಾಡುತ್ತಿರುವವರ ಪರಿಸ್ಥಿತಿ ಏನಾಗಬಹುದು ಎಂಬ ಚಿಂತೆ ಶುರುವಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...