ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 05 : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರವರ ಜನ್ಮದಿನದ ಅಂಗವಾಗಿ ಕಂಥಕ ಫೌಂಡೇಷನ್ ವತಿಯಿಂದ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ರೋಗಿಗಳಿಗೆ ಪುಳಿಯೋಗರೆ ಹಾಗೂ ಬಾಳೆ ಹಣ್ಣು ವಿತರಿಸಲಾಯಿತು.
ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಫಲಹಾರ ವಿತರಿಸಿ ಮಾತನಾಡಿದ ಕಂಥಕ ಫೌಂಡೇಶನ್ ಅಧ್ಯಕ್ಷೆ ಭಾರ್ಗವಿ ದ್ರಾವಿಡ್ ಎಲ್ಲಾ ದಾನಕ್ಕಿಂತಲು ಅನ್ನ ದಾನ ಶ್ರೇಷ್ಟವಾದುದು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಬಿ.ವೈ.ವಿಜಯೇಂದ್ರರವರ ಜನ್ಮದಿನವನ್ನು ಆಚರಿಸಲಾಯಿತು. ರಾಜಕೀಯದಲ್ಲಿ ಅವರಿಗೆ ಇನ್ನು ಉನ್ನತ ಸ್ಥಾನಮಾನಗಳು ಸಿಗುವಂತಾಗಲಿ ಎಂದು ಶುಭ ಹಾರೈಸಿದರು.










